ಚಿಕ್ಕೋಡಿ: ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಯುವಕ-ಯುವತಿಯರು ತಾಯಂದಿರಿಗೆ ಪಾದ ಪೂಜೆ ಮಾಡಿ ವಿಶಿಷ್ಟವಾಗಿ ಆಚರಿಸಿದ ಘಟನೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವ ಸಮೂಹ 150 ಕ್ಕೂ ಹೆಚ್ವು ತಾಯಂದಿಯರಿಗೆ ಪಾದ ಪೂಜೆ ಮಾಡಿ ಅವರ ಆಶಿರ್ವಾದ ಪಡೆದುಕೊಂಡರು. ಇಲ್ಲಿನ ನೂರಕ್ಕೂ ಹೆಚ್ವು ಯುವಕ - ಯುವತಿಯರು ಕೂಡಿಕೊಂಡು ವಿಶಿಷ್ಟವಾಗಿ ತಾಯಂದಿಯರಿಗೆ ಪಾದ ಪೂಜೆ ಮಾಡಿ ಮಾದರಿಯಾಗಿದ್ದಾರೆ.