ಬೆಳಗಾವಿ: ಮಸಾಜ್ ಸೆಂಟರ್ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆ ಬಳಸಿಕೊಳ್ಳುತ್ತಿದ್ದ ಘಟನೆ ನಗರದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ನಗರದ ಮರಗಾಯಿ ಗಲ್ಲಿಯ ವಿನಾಯಕ ಶಿಂಧೆ (37) ಹಾಗೂ ಟಿಳಕವಾಡಿಯ ಮರಾಠಾ ಕಾಲೋನಿಯ ಪ್ರಕಾಶ ಯಳ್ಳೂಕರ್ (27)ಬಂಧಿತ ಆರೋಪಿಗಳು. ಆರೋಪಿಗಳು ನಗರದ ಟಿಳಕವಾಡಿ ಕಾಂಗ್ರೆಸ್ ರಸ್ತೆಯಲ್ಲಿರುವ ನೆಲ್ಸನ್ ಹೈಟ್ಸ್ ಅಪಾರ್ಟಮೆಂಟ್ನಲ್ಲಿ 'ನ್ಯೂ ಗೇಟ್‌ವೇ ಯೂನಿಸೆಕ್ಸ್ 'ಸ್ಪಾ' ಎಂಬ ಹೆಸರಿನ ಮಸಾಜ್ ಸೆಂಟರ್ ಇಟ್ಟುಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಕಳೆದ ಒಂದು ವರ್ಷದ ಹಿಂದೆ ಮಹಾನಗರ ಪಾಲಿಕೆಯಿಂದ ಸ್ಪಾ ನಡೆಸುವುದಾಗಿ ಎಂದು ಅನುಮತಿ ಪಡೆದುಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಬೆಳಗಾವಿ ಸಿಇಎನ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗಡ್ಡೇಕರ ನೇತೃತ್ವದಲ್ಲಿ ಸೈಬರ್ ಕ್ರೈಮ್ ಪೊಲೀಸರು ದಾಳಿ ನಡೆಸಿ ಮೂರು ಜನ ಯುವತಿಯರನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದಲ್ಲದೇ ಅನೈತಿಕ ಚಟುವಟಿಕೆಗೆ ಬಳಸುತ್ತಿದ್ದ ಕೆಲ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಬೆಳಗಾವಿ ನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.