ಬೆಳಗಾವಿ: ನಾನು ಭಾರತದಲ್ಲಿ ಇಲ್ಲದೇ ಇರೋ ಸಂದರ್ಭದಲ್ಲಿ ನನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ದೂರು ನೀಡಲು ಬರುವ ಮಾಹಿತಿ ತಿಳಿದು ರಾಜಕುಮಾರ ಟಾಕಳೆ ನನ್ನ ವಿರುದ್ಧ ದೂರು ನೀಡಿದ್ದರು. ರಾಜಕುಮಾರ್ ಟಾಕಳೆ ನನ್ನನ್ನೇ ಹನಿಟ್ರ್ಯಾಪ್ ಮಾಡಿದ್ದು ಆತನ ವಿರುದ್ಧ ದೂರು ಕೊಡುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್ ರಾವ್ ಹೇಳಿದರು.
ಟಾಕಳೆ ವಿರುದ್ಧ ದೂರು ಕೊಡುತ್ತೇನೆ: ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಭವಿಷ್ಯಕ್ಕಾಗಿ ನಾನು ನೋವು ತಡೆದುಕೊಂಡಿದ್ದೇನೆ. ರಾಜಕುಮಾರ ಟಾಕಳೆ ವಿರುದ್ಧ ನಾನು ಇಂದು ದೂರು ಕೊಡುತ್ತೇನೆ. ಮೊದಲು ಪತ್ನಿ ಇದ್ರು ಎರಡನೇ ಮದುವೆ ಆಗಿರೋ ಬಗ್ಗೆ ಮೋಸ, ಕಿಡ್ನಾಪ್, ಚಾರಿತ್ರ್ಯ ಹಗರಣ ಬಗ್ಗೆ ದೂರಿನಲ್ಲಿ ಉಲ್ಲೇಖಿಸುತ್ತೇನೆ. ನನ್ನ ಅಶ್ಲೀಲ ವಿಡಿಯೋ ವೆಬ್ ಸೈಟ್ಗೆ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಆತನಿಂದಲೇ ನನಗೆ ಹನಿಟ್ರ್ಯಾಪ್ ಆಗಿದೆ. ಬೇದರಿಕೆ ಒಡ್ಡಿ ಹಣವನ್ನು ಪಡೆದಿದ್ದಾರೆ. ವಿಡಿಯೋದಿಂದ ನನ್ನ ಹಣ, ಮರ್ಯಾದೆ ಹಾಳಾಗಿದೆ ಎಂದರು.
ಇದನ್ನೂ ಓದಿ : ರಾಜಕುಮಾರ ಟಾಕಳೆ, ನವ್ಯಶ್ರೀ ಮಾತನಾಡಿರುವ ಆಡಿಯೋ ರಿಲೀಸ್
ರಾಜಕುಮಾರ ನೀಡಿರುವ ಸುಳ್ಳು ದೂರನ್ನು ತಿರಸ್ಕೃತ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ. ವಿಡಿಯೋ ನಡೆದಿರೋದು ಕುಮಾರ ಕೃಪ ಸರ್ಕಾರಿ ಅತಿಥಿ ಗೃಹ ದುರುಪಯೋಗ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇನೆ.
ನಿನ್ನೆ ಸಂಜೆ ಬೆಳಗಾವಿಯಲ್ಲಿ ಪೊಲೀಸ ಆಯುಕ್ತರನ್ನು ಭೇಟಿಯಾಗಿದ್ದೇನೆ. ಡಿಸಿಪಿ ಸ್ನೇಹಾ ಮೆಡಮ್ ಬಳಿ ನನಗೆ ಆದ ಅನ್ಯಾಯದ ಬಗ್ಗೆ ಹೇಳಿದಿನಿ. ಮನೆಯಲ್ಲಿ ಕೂಡಿಹಾಕಿ ಹಲ್ಲೆ ಬಗ್ಗೆಯೂ ತಿಳಿಸಿದ್ದೇನೆ ಎಂದರು.
ದೂರು ನೀಡಲು ಟಾಕಳೆ ಸಹಕಾರ ಆರೋಪ: ನಾನು ಇಂದು ಮಧ್ಯಾಹ್ನ ಹೋಗಿ ಎಪಿಎಂಸಿ ಠಾಣೆಗೆ ಪೊಲೀಸರಿಗೆ ದೂರು ನೀಡುತ್ತೇನೆ. ಹನಿಟ್ರ್ಯಾಪ್ ದೂರು ನೀಡಲು ರಾಜಕುಮಾರ ಟಾಕಳೆ ಸಹಕಾರ ಕೊಟ್ಟಿದ್ದಾನೆ. ಆತನಿಗೆ ನಾನು ಸೆಕ್ಸ್‌ಮೇಟ್ ತರಹ ಬೇಕು ಅನ್ನೋದು ಅವನ ಉದ್ದೇಶವಾಗಿತ್ತು.
ನನ್ನ ಬೆಳಗಾವಿಯ ಶಿವಬಸವ ನಗರದ ಮಹಿಳಾ ಪಿಜಿಯಲ್ಲಿ ಇರಿಸಿದ್ದನು. ಅಲ್ಲಿ ಯಾರೂ ಗಂಡಸರು ಬರಲ್ಲ ಅಂತಾ ಇರಿಸಿದ್ದನು. ಆ ಆಡಿಯೋ ಕ್ಲಿಪ್‌ನಲ್ಲಿ ಮಾತನಾಡಿದ ಮೇಲೆಯೇ ನಾನು ಆತನ ಮನೆಗೆ ಬಂದಿದ್ದೇನೆ. ರಾಜಕುಮಾರ ಟಾಕಳೆ ಗ್ರೂಪ್ ಬಿ ನೌಕರನಾಗಿದ್ದಾನೆ. 50 ಲಕ್ಷ ಕೊಡಲು ಅವರಿಂದ ಆಗಲ್ಲ ಅಂತಾ ಗೊತ್ತಿದೆ. ನಾನು ಅವರ ಬಳಿ 50ಲಕ್ಷ ಹಣವನ್ನು ಬೇಡಿಕೆ ಇಟ್ಟಿಲ್ಲ ಎಂದರು.
ನನಗೆ ಸಿಕ್ರೇಟ್ ಟಾಸ್ಕ್ ನೀಡಲಾಗಿತ್ತು: ಅತೃಪ್ತ ಶಾಸಕರು ಮುಂಬೈಗೆ ತೆರಳಿದಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಮುಂಬೈಗೆ ಹೋಗಲು ಸಿಕ್ರೇಟ್ ಟಾಸ್ಕ್ ನೀಡಿದ್ದರು. ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಸಿಕ್ರೇಟ್ ಟಾಸ್ಕ್ ವಹಿಸಲಾಗಿತ್ತು. ಆ ಸಿಕ್ರೇಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : '50 ಲಕ್ಷಕ್ಕೆ ನವ್ಯಶ್ರೀ ಬೇಡಿಕೆಯಿಟ್ಟಿದ್ದರು, ಈಗಾಗಲೇ 5 ಲಕ್ಷ ಪಡೆದುಕೊಂಡಿದ್ದಾರೆ': ಟಾಕಳೆ