ETV Bharat / city

ರಾಜ್ಯದಲ್ಲಿ 2,60,000 ಸರ್ಕಾರಿ ಹುದ್ದೆಗಳು ಖಾಲಿ: ಸಿ ಎಸ್ ಷಡಾಕ್ಷರಿ

author img

By

Published : Apr 11, 2022, 1:00 PM IST

ರಾಜ್ಯದಲ್ಲಿ 2,60,000 ಸರ್ಕಾರಿ ನೌಕರರ ಹುದ್ದೆಗಳು ಖಾಲಿಯಿವೆ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ನಾವು ಮನವಿಯನ್ನು ಸಲ್ಲಿಸಿದ್ದೇವೆ. ಆದಷ್ಟು ಬೇಗ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕೆಂದು ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಒತ್ತಾಯಿಸಿದ್ದಾರೆ.

there-are-260000-vacancies-in-state-government-jobs-says-cs-shadakshari
ರಾಜ್ಯದಲ್ಲಿ 260000 ಸರ್ಕಾರಿ ನೌಕರ ಹುದ್ದೆಗಳು ಖಾಲಿಯಿದೆ: ಸಿ ಎಸ್ ಷಡಾಕ್ಷರಿ

ಅಥಣಿ(ಬೆಳಗಾವಿ): ರಾಜ್ಯ ಸೇರಿದಂತೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಲಕ್ಷ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿದ್ದರೂ ಸರ್ಕಾರ ತುಂಬುತ್ತಿಲ್ಲ. ರಾಜ್ಯದಲ್ಲಿ ಬರೋಬ್ಬರಿ 2,60,000 ಸರ್ಕಾರಿ ನೌಕರ ಹುದ್ದೆಗಳು ಖಾಲಿಯಿವೆ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ನಾವು ಮನವಿಯನ್ನು ಸಲ್ಲಿಸಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್​ ಷಡಾಕ್ಷರಿ ಮಾಹಿತಿ ನೀಡಿದ್ದಾರೆ.

ಅಥಣಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಜನಸಂಖ್ಯೆ ಹೆಚ್ಚಿದೆ ಹಾಗೂ ಹೊಸ ತಾಲೂಕುಗಳ ರಚನೆ ಆಗುವುದರಿಂದ ಕಾರ್ಯಾಂಗ ವ್ಯವಸ್ಥೆಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗನೆ ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಲಿ ಎಂದು ರಾಜ್ಯಾಧ್ಯಕ್ಷರು ಮನವಿ ಮಾಡಿದರು. ಸರ್ಕಾರ ನೌಕರರ ಬಹುದಿನಗಳ ಕನಸು ಹಾಗೂ ಬಹುದಿನಗಳ ಬೇಡಿಕೆಯಾದ ಸೆಂಟ್ರಲ್ ಪೇ ಕಮಿಷನ್ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆಂದು ಷಡಾಕ್ಷರಿ ಹೇಳಿದರು.

ಸರ್ಕಾರಿ ನೌಕರರ ಸಂಘದ ಬೇಡಿಕೆಗಳ ಬಗ್ಗೆ ಯಾವ ರೀತಿ ಚರ್ಚೆ ಮಾಡಬೇಕು ಎಂದು ಚಿಂತನ-ಮಂಥನ ನಡೆಸಲಾಗಿದೆ. ಕಳೆದ ಎರಡು ವರ್ಷಗಳಿಂದ ಸರ್ಕಾರ ಸರ್ಕಾರಿ ನೌಕರರನ್ನು ಸರಿಯಾಗಿಯೇ ನಡೆಸಿಕೊಂಡಿದೆ. ರಾಜ್ಯ ಸರ್ಕಾರಿ ನೌಕರರ ಪ್ರಮುಖ ಎರಡು ಸಮಸ್ಯೆಗಳಾದ ಸೆಂಟ್ರಲ್ ಪೇ ಕಮಿಷನ್ ಹಾಗೂ ಎನ್.ಪಿ.ಎಸ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಸುದ್ದಿಗಾರರೊಂದಿಗೆ ಮಾತನಾಡಿದರು..

ಕೆಲ ಸರ್ಕಾರಿ ನೌಕರರಿಂದ ಭ್ರಷ್ಟಾಚಾರ : ಭ್ರಷ್ಟಾಚಾರ ಆಗುವುದಕ್ಕೆ ಕಡಿಮೆ ಸಂಬಳ ಕಾರಣ. ರಾಜ್ಯ ಸರ್ಕಾರ ಕಡಿಮೆ ಸಂಬಳ ನೀಡಿದರೂ ನಾವು ಒತ್ತಡದಲ್ಲಿ ಜೊತೆ ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ರಂಗದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಸುಧಾರಣೆಯ ಅನಿವಾರ್ಯತೆ ಎದುರಾಗಿದೆ. ಯಾರು ಭ್ರಷ್ಟಾಚಾರ ಮಾಡುತ್ತಾರೆ ನಾವು ಅವರನ್ನು ಸಹಿಸುವುದಿಲ್ಲ. ಸರ್ಕಾರಿ ಸಂಬಳಕ್ಕೆ ಆತ್ಮಸಾಕ್ಷಿಯಾಗಿ ಕೆಲಸ ಮಾಡಬೇಕೆಂದು ಸಹ ಉದ್ಯೋಗಿಗಳಿಗೆ ಕರೆ ನೀಡಿದರು.

ಓದಿ : 'ಸರ್ಕಾರದಲ್ಲಿ ಇದ್ದು ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವವಾಗಿಲ್ಲ'

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.