ETV Bharat / city

ಡಿಸಿಎಂ ಸವದಿಯವರೇ ನಿಮ್ಗೇ ಗೊತ್ತಾ, 5 ವರ್ಷದಿಂದ ಅಥಣಿಯಲಿಲ್ಲ ಕ್ರೈಂ ಪಿಎಸ್ಐ!

ಈಗ ಒಂದು ತಿಂಗಳ ಹಿಂದೆ ಅಥಣಿ ಪಿಎಸ್ಐ ಉಸ್ಮಾನ ಅವಟಿ ಅಮಾನತು ಆದ ಮೇಲೆ ಆ ಸ್ಥಳದಲ್ಲಿ ಈವರೆಗೆ ಯಾರನ್ನೂ ನೇಮಕ‌ ಮಾಡಿಲ್ಲ. ಹಾಗಾಗಿ ಅಥಣಿ ಸಿಪಿಐ ಶಂಕರಗೌಡ ಬಸಗೌಡ್ರ ಅವರಿಗೆ ಪ್ರಭಾರಿಯಾಗಿ ಜವಾಬ್ದಾರಿ ವಹಿಸಲಾಗಿದೆ.

author img

By

Published : Feb 10, 2020, 7:30 PM IST

Athani Police Station
ಡಿಸಿಎಂ ‌ಕ್ಷೇತ್ರಕ್ಕಿಲ್ಲ ಕ್ರೈಂ ಪಿಎಸ್ಐ

ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಅಥಣಿ ಅತಿ ದೊಡ್ಡ ತಾಲೂಕು ಕೇಂದ್ರ. ಡಿಸಿಎಂ ‌ಲಕ್ಷ್ಮಣ ಸವದಿ ಅವರಿಗೆ ‌ರಾಜಕೀಯ‌ ನೆಲೆ‌ ಕೊಟ್ಟ ಕ್ಷೇತ್ರವೂ ಹೌದು. ವಿಪರ್ಯಾಸವೆಂದರೆ ‌ಕಳೆದ ಐದು‌ ವರ್ಷಗಳಿಂದ ಅಥಣಿ ಪೊಲೀಸ್ ‌ಠಾಣೆಗೆ ಕ್ರೈಂ ವಿಭಾಗದ ಪಿಎಸ್ಐ ನೇಮಕವಾಗಿಲ್ಲ. ಹೀಗಾಗಿ ಅಥಣಿ ತಾಲೂಕಿನಲ್ಲಿ ಅಪರಾಧಿಕ ಕೃತ್ಯಗಳು ಹೆಚ್ಚುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ತಾಲೂಕಿನ ವ್ಯಾಪ್ತಿಗೆ 54 ಹಳ್ಳಿಗಳಿವೆ. ಅಥಣಿ ಪಟ್ಟಣ ಶೈಕ್ಷಣಿಕ, ವಾಣಿಜ್ಯ, ಭೌಗೋಳಿಕ ಹಾಗೂ ಆರ್ಥಿಕವಾಗಿ ಬೆಳೆಯುತ್ತಿದೆ. ಇಲ್ಲಿ ಕೇವಲ‌ ಒಂದೇ ಒಂದು ಪೊಲೀಸ್ ಠಾಣೆ ಇದೆ. ಜನಸಂಖ್ಯೆ ಆಧಾರದ ಮೇಲೆ ಈವರೆಗೆ ಪೊಲೀಸ್ ಠಾಣೆ ಹೆಚ್ಚಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಳೆದ ಐದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್ಐ ಸ್ಥಾನ ಕೂಡ ಖಾಲಿ ಇದೆ. ಒಬ್ಬರೇ ಪಿಎಸ್ಐ ಅಥಣಿಯಲ್ಲಿದ್ದಾರೆ. ಅಪರಾಧ ಮತ್ತು ಟ್ರಾಫಿಕ್​ ಎರಡೂ ಒಬ್ಬರೇ ನೋಡಿಕೊಳ್ಳುತ್ತಿದ್ದಾರೆ.

ಸವದಿ ಸಾಹೇಬರೇ ಅಥಣಿ ಪೊಲೀಸ್ ‌ಠಾಣೆಗೆ ಕ್ರೈಂ ಪಿಎಸ್ಐ ನೇಮಕ ಯಾವಾಗ?

ಈಗ ಒಂದು ತಿಂಗಳ ಹಿಂದೆ ಅಥಣಿ ಪಿಎಸ್ಐ ಉಸ್ಮಾನ ಅವಟಿ ಅಮಾನತು ಆದ ಮೇಲೆ ಆ ಸ್ಥಳದಲ್ಲಿ ಈವರೆಗೆ ಯಾರನ್ನೂ ನೇಮಕ‌ ಮಾಡಿಲ್ಲ. ಹಾಗಾಗಿ ಅಥಣಿ ಸಿಪಿಐ ಶಂಕರಗೌಡ ಬಸಗೌಡ್ರ ಅವರಿಗೆ ಪ್ರಭಾರಿಯಾಗಿ ಜವಾಬ್ದಾರಿ ವಹಿಸಲಾಗಿದೆ.

ಸದ್ಯ ಅಥಣಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಇಲ್ಲದ್ದಕ್ಕೆ ಪಟ್ಟಣದಲ್ಲಿ ಹೆಚ್ಚಾಗಿ ಟ್ರಾಫಿಕ್ ಕಿರಿಕಿರಿ ಆಗುತ್ತಿದೆ. ಈ ಟ್ರಾಫಿಕ್ ಕಿರಿಕಿರಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಳೆದ ಐದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್ಐ ಇಲ್ಲದೇ ಇರುವುದರಿಂದ ಅಥಣಿ ಪಟ್ಟಣದಲ್ಲಿ ತುಂಬಾ ತೊಂದರೆಯಾಗುತ್ತಿದೆ. ಈವರಗೆ ಅಥಣಿ ಪಟ್ಟಣದಲ್ಲಿ ಅಪರಾಧ ವಿಭಾಗದಲ್ಲಿ ಒಟ್ಟು 11 ಪಿಎಸ್ಐಗಳು ಕಾರ್ಯನಿರ್ವಹಿಸಿದ್ದಾರೆ. ಅಥಣಿ ಪಟ್ಟಣದ ಅಪರಾಧ ವಿಭಾಗಕ್ಕೆ ಕೆ ಎನ್ ಹಲಗಲಿ ಅವರು ನವೆಂಬರ 07, 2004ರಲ್ಲಿ ಮೊದಲ ಅಪರಾಧ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದರು.

2017ರಲ್ಲಿ 109, 2018 ರಲ್ಲಿ 90, ಹಾಗೂ 2019 ರಲ್ಲಿ 93 ಅಪರಾಧ ಪ್ರಕರಣಗಳು ಈ ಠಾಣೆಯಲ್ಲಿ ದಾಖಲಾಗಿವೆ. ಆದಷ್ಟು ಬೇಗ ಈ ಪೊಲೀಸ್ ಠಾಣೆ ಅಪರಾಧ ವಿಭಾಗಕ್ಕೆ ಪಿಎಸ್ಐ ಅವರನ್ನು ನೇಮಕ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Intro:ಕಳೆದೈದು‌ ವರ್ಷಗಳಿಂದ‌ ಡಿಸಿಎಂ ‌ಕ್ಷೇತ್ರಕ್ಕಿಲ್ಲ ಕ್ರೈಂ ಎಸ್ಐ! Body:

ಚಿಕ್ಕೋಡಿ :

ಬೆಳಗಾವಿ ಜಿಲ್ಲೆಯ ಅಥಣಿ ಅತಿ ದೊಡ್ಡ ತಾಲೂಕು ಕೇಂದ್ರ. ಡಿಸಿಎಂ ‌ಲಕ್ಷ್ಮಣ ಸವದಿ ಅವರಿಗೆ ‌ರಾಜಕೀಯ‌ ನೆಲೆ‌ ಕೊಟ್ಟ ಕ್ಷೇತ್ರವೂ ಹೌದು. ವಿಪರ್ಯಾಸವೆಂದರೆ ‌ಕಳೆದ ಐದು‌ ವರ್ಷಗಳಿಂದ ಅಥಣಿ ಪೊಲೀಸ್ ‌ಠಾಣೆಗೆ ಕ್ರೈಂ ವಿಭಾಗದ ಪಿಎಸ್ಐ ಇಲ್ಲ. ಹೀಗಾಗಿ ಅಥಣಿ ತಾಲೂಕಿನಲ್ಲಿ ಅಪರಾಧಿಕ ಕೃತ್ಯಗಳು ಹೆಚ್ಚುತ್ತಿವೆ.
ಅತ್ಯಂತ ವಿಶಾಲ ಪ್ರದೇಶ ಹೊಂದಿರುವ ಅಥಣಿಯಲ್ಲಿ 54 ಹಳ್ಳಿಗಳಿವೆ. ಅಥಣಿ ಪಟ್ಟಣ ಶೈಕ್ಷಣಿಕ, ವಾಣಿಜ್ಯ, ಭೌಗೋಳಿಕ ಹಾಗೂ ಆರ್ಥಿಕವಾಗಿ ಬೆಳೆಯುತ್ತಿದ್ದು. ಇಲ್ಲಿ ಕೇವಲ‌ ಒಂದೇ ಒಂದು ಪೋಲಿಸ್ ಠಾಣೆ ಇದ್ದು. ಜನಸಂಖ್ಯೆ ಆಧಾರದ ಮೇಲೆ ಇಲ್ಲಿಯವರೆಗೆ ಜನಸಂಖ್ಯೆ ಅನಗುಣವಾಗಿ ಪೋಲಿಸ್ ಠಾಣೆ ಹೆಚ್ಚಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಳೆದ ಐದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್ಐ ಸ್ಥಾನ ಕೂಡ ಖಾಲಿ ಇದೆ. ಒಬ್ಬರೇ ಪಿಎಸ್ಐ ಅಥಣಿಯಲ್ಲಿ ಇದ್ದು ಇವರೇ ಅಪರಾಧ ವಿಭಾಗ, ಟ್ರಾಫೀಕ ವಿಭಾಗ ನೋಡಿಕೊಳ್ಳುತ್ತಿದ್ದಾರೆ.

ಈಗ ಒಂದು ತಿಂಗಳ ಹಿಂದೆ ಅಥಣಿ ಪಿಎಸ್ಐ ಉಸ್ಮಾನ ಅವಟಿ ಅವರನ್ನು ಅಮಾನತು ಆದ ಮೇಲೆ ಆ ಸ್ಥಳದಲ್ಲಿ ಇದುವರೆಗೆ ಯಾರನ್ನು ನೇಮಕ‌ ಮಾಡಿಲ್ಲ. ಆದರೆ, ಈಗ ಕಳೆದ ಒಂದು ತಿಂಗಳಿನಿಂದ ಅವರು ಕೂಡಾ ಈಗ ಇಲ್ಲಾ ಅದರ ಜವಾಬ್ದಾರಿಯನ್ನು ಕೂಡಾ ಅಥಣಿ ಸಿಪಿಐ ಶಂಕರಗೌಡ ಬಸಗೌಡ್ರ ಅವರಿಗೆ ಪ್ರಭಾರಿ ವಹಿಸಲಾಗಿದೆ.

ಸದ್ಯ ಅಥಣಿ ಪೋಲಿಸ್ ಠಾಣೆಯಲ್ಲಿ ಪಿಎಸ್ಐ ಇಲ್ಲದಕ್ಕೆ ಅಥಣಿ ಪಟ್ಟಣದಲ್ಲಿ ಹೆಚ್ಚಾಗಿ ಟ್ರಾಫೀಕ್ ಕಿರಕಿರಿ ಆಗುತ್ತಿದ್ದು ಈ ಟ್ರಾಫಿಕ್ ಕಿರಿಕಿರಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಳೆದ ಐದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್ಐ ಇಲ್ಲದೇ ಇರುವುದರಿಂದ ಅಥಣಿ ಪಟ್ಟಣದಲ್ಲಿ ತುಂಬಾ ತೊಂದರೆಯಾಗುತ್ತಿದೆ. ಈ ವರಗೆ ಅಥಣಿ ಪಟ್ಟಣದಲ್ಲಿ ಅಪರಾಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಒಟ್ಟು ಹನ್ನೊಂದು ಪಿಎಸ್ಐಗಳು ಕಾರ್ಯನಿರ್ವಹಿಸಿದ್ದು. ಇದರಲ್ಲಿ‌ ಅಥಣಿ ಪಟ್ಟಣದ ಅಪರಾಧಿ ವಿಭಾಗಕ್ಕೆ ಕೆ.ಎನ್.ಹಲಗಲಿ ಅವರು ನವೆಂಬರ 07, 2004 ರಲ್ಲಿ ಮೊದಲ ಅಪರಾಧ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದರು. ಕೊನೆಯದಾಗಿ 2017 ಏಪ್ರೀಲ್ ವರೆಗೆ ಎ.ಎನ್.ಥಕ್ಕನ್ನವರ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದು ಇವರ ಬಳಿಕ ಯಾರು ಕೂಡಾ ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಥಣಿ ಅಪರಾಧ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿಲ್ಲ.

ಒಟ್ಟಾರೆಯಾಗಿ 2017 ರಲ್ಲಿ 109, 2018 ರಲ್ಲಿ 90, ಹಾಗೂ 2019 ರಲ್ಲಿ 93 ಅಪರಾಧ ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಆದಷ್ಟು ಬೇಗೆ ಅಥಣಿ ಪೋಲಿಸ್ ಠಾಣೆಯಲ್ಲಿ ಅಪರಾಧ ವಿಭಾಗಕ್ಕೆ ಪಿಎಸ್ಐ ಅವರನ್ನು ನೇಮಕ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೈಟ್ 1 : ಪ್ರಮೋದ ಹಿರೇಮನಿ - ನ್ಯಾಯವಾದಿ

ಬೈಟ್ 2 : ಮಂಜು ಹೊಳ್ಳಿಕಟ್ಟಿ - ಸ್ಥಳೀಯರು

ಈ ಸುದ್ದಿಗೆ ಸಂಭಂದಿಸಿದಂತೆ ಎಸ್ ಪಿ ಅವರ ಬೈಟ್ ಅನ್ನು ಅನಿಲ ಕಾಜಗಾರ್ ಸರ್ ಕಳಿಸುತ್ತಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.