ETV Bharat / city

ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ: ಓರ್ವ ಸಾವು - ಅಪಘಾತದಲ್ಲಿ ವ್ಯಕ್ತಿ ಸಾವು

ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ಸಮೀಪ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಾಯಗೊಂಡಿದ್ದಾನೆ.

Accident
ಅಪಘಾತ
author img

By

Published : Jun 20, 2020, 1:32 PM IST

ಅಥಣಿ: ತಾಲೂಕಿನ ಬುರ್ಲಟ್ಟಿ ಗ್ರಾಮದ ಬುರ್ಲಟ್ಟಿ ಕ್ರಾಸ್​​​ನಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸವಾರ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬುರ್ಲಟ್ಟಿ ಗ್ರಾಮದ ಶಿವಪುತ್ರ ಶಿಂಧೆ (30) ಮೃತ ವ್ಯಕ್ತಿ. ಬಳವಾಡ ಗ್ರಾಮದ ಆನಂದ ಮಹಾದೇವ ಹರೋಲಿ (28) ಗಾಯಗೊಂಡವರು.

Accident
ಅಪಘಾತದಲ್ಲಿ ಓರ್ವ ಸಾವು, ಒಬ್ಬರಿಗೆ ಗಾಯ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಶಿವಪುತ್ರ ಮೃತಪಟ್ಟಿದ್ದಾನೆ. ಗಾಯಾಳು ಆನಂದನನ್ನು ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಠಾಣೆಯ ಪಿಎಸ್‌ಐ ಶಿವರಾಜ್ ನಾಯಕವಾಡ ಭೇಟಿ ನೀಡಿ ಪರಿಶೀಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.