ETV Bharat / city

ರಾಮದುರ್ಗ: ಭಾರೀ ಮಳೆಗೆ ಪ್ರೇರಣಾ ಶಾಲೆ ಮುಳುಗಡೆ

author img

By

Published : Aug 18, 2020, 1:28 PM IST

Updated : Aug 18, 2020, 2:50 PM IST

ರಾಮದುರ್ಗ ತಾಲೂಕಿನ ಸಂಗಮೇಶ್ವರ ನಗರದಲ್ಲಿರುವ ಪ್ರೇರಣಾ ಶಾಲೆ ಸಂಪೂರ್ಣವಾಗಿ ಮುಳುಗಡೆ ಆಗಿದ್ದು, ಮುಳುಗಡೆಯಾದ ಶಾಲೆಯನ್ನು ನೋಡಲು ಅಲ್ಲಿನ‌ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

prerana school outskirts of town full swing rain
ರಾಮದುರ್ಗ: ಮಳೆಗೆ ಸಂಪೂರ್ಣ ಮುಳುಗಡೆಯಾದ ಪ್ರೇರಣಾ ಶಾಲೆ

ರಾಮದುರ್ಗ(ಬೆಳಗಾವಿ): ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರೋ ಹಿನ್ನೆಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ಪ್ರೇರಣಾ ಶಾಲೆ ಸಂಪೂರ್ಣ ಮುಳುಗಡೆ ಆಗಿದೆ.

ರಾಮದುರ್ಗ: ಭಾರೀ ಮಳೆಗೆ ಪ್ರೇರಣಾ ಶಾಲೆ ಮುಳುಗಡೆ

ರಾಮದುರ್ಗ ತಾಲೂಕಿನ ಸಂಗಮೇಶ್ವರ ನಗರದಲ್ಲಿರುವ ಪ್ರೇರಣಾ ಶಾಲೆ ಸಂಪೂರ್ಣವಾಗಿ ಮುಳುಗಡೆ ಆಗಿದ್ದು, ಮುಳುಗಡೆಯಾದ ಶಾಲೆಯನ್ನು ನೋಡಲು ಅಲ್ಲಿನ‌ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇದಲ್ಲದೆ ನಿರ್ಮಾಣ ಹಂತದ ಪ್ರೇರಣಾ ಶಾಲೆಯ ಕಟ್ಟಡ ಹಾಗೂ ಅಕ್ಕಪಕ್ಕದ ಕೃಷಿ ಭೂಮಿಯೂ ಸಂಪೂರ್ಣ ಜಲಾವೃತವಾಗಿದೆ. ಕೊರೊನಾ ಹೊಡೆತಕ್ಕೆ ನಲುಗಿರುವ ಜನರಿಗೆ ಮಲಪ್ರಭಾ ನದಿಯ ಪ್ರವಾಹ ದೊಡ್ಡ ಆಘಾತವನ್ನೇ ನೀಡಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಮಲಪ್ರಭಾ ನದಿಯಲ್ಲಿ ನೀರು ಹೆಚ್ಚಾಗಿದೆ. ನವಿಲು ತೀರ್ಥ ಜಲಾಶಯದಿಂದ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡಲಾಗಿದೆ. ಇದರಿಂದ ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚಿನ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಜಿಲ್ಲೆಯಲ್ಲಿ ಮಳೆಯಾರ್ಭಟ ಮತ್ತೆ ಜೋರಾಗಿರೋದ್ರಿಂದ ಮತ್ತಷ್ಟು ಗ್ರಾಮಗಳು ನೀರಿನಲ್ಲಿ ಜಾಲವೃತವಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಆದಷ್ಟು ಬೇಗ ನೆರೆ ಪರಿಹಾರಕ್ಕೆ ಮುಂದಾಗಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.

Last Updated : Aug 18, 2020, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.