ETV Bharat / city

ಚುನಾವಣೆಗೆ ಹೋಗುವ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿ: ಸಚಿವ ಕಾರಜೋಳ - ಮಹದಾಯಿ ಯೋಜನೆ

ಇದು ಕೃಷಿಗೆ ನೀರು ಕೊಡುವಂತಹ ಯೋಜನೆ ಅಲ್ಲ, ಕೇವಲ ಕುಡಿಯುವ ನೀರಿಗಾಗಿ ಇರುವ ಯೋಜನೆ ಎಂದು ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

Minister Govinda Karajola talked in pressmeet
ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
author img

By

Published : Aug 15, 2022, 8:04 PM IST

ಬೆಳಗಾವಿ: ಚುನಾವಣೆಗೆ ಹೋಗುವ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಜನೆ ಬೇಗ ಜಾರಿ ಆಗುವ ಸಾಧ್ಯತೆ ಇದೆ‌. ನಾವು ಒಂದು ಹಂತಕ್ಕೆ ತಲುಪಿದ್ದೇವೆ. ಮಹದಾಯಿಯಲ್ಲಿ 3.9 ಟಿಎಂಸಿ ಕುಡಿಯುವ ನೀರಿಗಾಗಿ ಅನುಮತಿ ಸಿಕ್ಕಿದೆ ಎಂದರು.

ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ಮಹದಾಯಿ ಯೋಜನೆ ಪ್ರಿ ಫೀಜಿಲಿಬಿಟಿ ರಿಪೋರ್ಟ್ ರಿವೈಸ್ ಮಾಡಿ ಕೇಂದ್ರದ ಮುಂದಿಟ್ಟಿದ್ದೇವೆ. ಕೆಲವೇ ದಿನಗಳಲ್ಲಿ ಒಪ್ಪಿಗೆ ಸಿಗುವ ಭರವಸೆಯೂ ಇದೆ. ಇದು ಕೃಷಿಗೆ ನೀರು ಕೊಡುವಂತಹ ಯೋಜನೆ ಅಲ್ಲ, ಕೇವಲ ಕುಡಿಯುವ ನೀರಿಗಾಗಿ ಇರುವ ಯೋಜನೆ. ಯಾವುದೇ ಮಾತುಗಳು ಭರವಸೆಗೆ ಸೀಮಿತವಲ್ಲ. ನಾವು ಯೋಜನೆ ಅನುಷ್ಠಾನ ಮಾಡಬೇಕೆಂಬ ಬದ್ಧತೆಯಿಂದ ಬಜೆಟ್​ನಲ್ಲಿ ಹಣ ಇಟ್ಟಿದ್ದೇವೆ. ಚುನಾವಣೆಗೆ ಹೋಗುವ ಮೊದಲೇ ಆ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.

ಚಿರತೆ ಹಿಡಿಯಲು ಮುಧೋಳ ನಾಯಿ ತರೋಣ: ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಕಾಟ ವಿಚಾರಕ್ಕೆ, ಬೆಳಗಾವಿ ಗಾಲ್ಫ್ ಮೈದಾನದಲ್ಲಿ 8 ಕಡೆ ಬೋನುಗಳನ್ನಿಟ್ಟು 50 ಸಿಬ್ಬಂದಿ ಕಾಯುತ್ತಿದ್ದಾರೆ. ಕಡೆಗೆ ಚಿರತೆ ಹಿಡಿಯೋದಕ್ಕೆ ಮುಧೋಳ ನಾಯಿಗಳನ್ನು ತರೋಣ. ತಮಾಷೆ ಅಲ್ಲ. ಮುಧೋಳ ನಾಯಿಗಳು ವಾಸನೆಯ ಮೇಲೆ ಚಿರತೆಯನ್ನು ಎಲ್ಲಿದ್ದರೂ ಪತ್ತೆ ಹಚ್ಚುತ್ತವೆ. ಚಿರತೆ ಅಷ್ಟೇ ಅಲ್ಲ, ಯಾವುದನ್ನೂ ಬೇಕಾದರೂ ವಾಸನೆ ಮೇಲೆ ಪತ್ತೆ ಹಚ್ಚುತ್ತದೆ ಎಂದು ಹೇಳಿದರು.

ಇದನ್ನೂ ಓದಿ : 140ಕ್ಕೂ ಹೆಚ್ಚು ಸ್ಥಾನ ಪಡೆದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರ್ತೇವೆ: ಯಡಿಯೂರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.