ETV Bharat / city

ವಾತಾವರಣ ಶುದ್ಧಿ ಆಗುತ್ತದೆ ಎಂದರೆ ಹೋಮ-ಹವನ ಏಕೆ ಮಾಡಬಾರದು : ಶಾಸಕ ಅಭಯ್ ಪಾಟೀಲ್

ಮೌಢ್ಯತೆ ಬಿತ್ತುತ್ತಾರೆ ಎನ್ನುವವರು ಸ್ವಂತ ಅವಲೋಕನ ಮಾಡಿಕೊಳ್ಳಬೇಕು. ವೈಜ್ಞಾನಿಕವಾಗಿ ಹೋಮ-ಹವನ ಮಾಡಿದರೆ, ಏನು ಉಪಯೋಗ ಆಗತ್ತೆ ಅಂತಾ ಸಲಹೆನೂ ಇದೆ, ಟೀಕೆ ಟಿಪ್ಪಣಿಗಳೂ ಇರಬಹುದು. ವೈಜ್ಞಾನಿಕವಾಗಿ ಉಪಯೋಗ ಇದೆ ಎಂದು ತಿಳಿದು ಬಂದಿದ್ದು, ಹೀಗಾಗಿ ಮಾಡುತ್ತಿದ್ದೇವೆ..

lawyer-abhay-patil-talk-
ಶಾಸಕ ಅಭಯ್ ಪಾಟೀಲ್
author img

By

Published : May 25, 2021, 5:12 PM IST

ಬೆಳಗಾವಿ : ಜನರೇ ಹೋಮ-ಹವನ ಮಾಡಲು ಮುಂದೆ ಬಂದಾಗ ವಾತಾವರಣ ಶುದ್ಧಿ ಆಗುತ್ತದೆ ಎಂದರೆ ಏಕೆ ಮಾಡಬಾರದು? ಎನ್ನುವ ಮೂಲಕ‌ ತಾವು ಮಾಡಿರುವ ಹೋಮ-ಹವನವನ್ನು ಶಾಸಕ ಅಭಯ್ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

ಹೋಮ-ಹವನ ಮಾಡಿದನ್ನ ಸಮರ್ಥಿಸಿಕೊಂಡ ಶಾಸಕ ಅಭಯ್ ಪಾಟೀಲ್

ಓದಿ: ವಾತಾವರಣ ಶುದ್ಧಿಗೆ ಹೋಮ, ಹವನ ಮಾಡಿ ಮೂಢನಂಬಿಕೆ ‌ಮೊರೆ ಹೋದ ಬಿಜೆಪಿ ಶಾಸಕ!?

ವಾತಾವರಣ ಶುದ್ಧೀಕರಣಕ್ಕೆ ಹೋಮ-ಹವನ ಮಾಡಿರುವ ವಿಚಾರಕ್ಕೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರೇ ಹೋಮ-ಹವನ ಮಾಡಲು ಮುಂದೆ ಬಂದಾಗ ಮಾಡಿದ್ದೇವೆ.

ವಿರೋಧ ಮಾಡುವವರು ಏಕೆ ವಿರೋಧ ಮಾಡ್ತಾರೆ ಅವರಿಗೆ ಬಿಟ್ಟ ವಿಷಯ. ಇವತ್ತು ನನಗೆ ಬಹಳ ಜನ ಫೋನ್ ಮಾಡಿ ಹೋಮ ಮಾಡೋದಾಗಿ ಹೇಳಿದ್ದು, ನಾನು ಮಾಡಿ ಎಂದಿದ್ದೇನೆ.

ಮೌಢ್ಯತೆ ಬಿತ್ತುತ್ತಾರೆ ಎನ್ನುವವರು ಸ್ವಂತ ಅವಲೋಕನ ಮಾಡಿಕೊಳ್ಳಬೇಕು. ವೈಜ್ಞಾನಿಕವಾಗಿ ಹೋಮ-ಹವನ ಮಾಡಿದರೆ ಏನು ಉಪಯೋಗ ಆಗತ್ತೆ ಅಂತ ಸಲಹೆನೂ ಇದೆ, ಟೀಕೆ ಟಿಪ್ಪಣಿಗಳೂ ಇರಬಹುದು.

ವೈಜ್ಞಾನಿಕವಾಗಿ ಉಪಯೋಗ ಇದೆ ಎಂದು ತಿಳಿದು ಬಂದಿದೆ. ಹೀಗಾಗಿ, ಮಾಡುತ್ತಿದ್ದೇವೆ. ಇದಲ್ಲದೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸರ್ವೇ ಮಾಡಿಸುತ್ತೇವೆ. ಸರ್ವೇ ಮಾಡಿದ ಬಳಿಕ ಇಂದಿನ ಪರಿಸ್ಥಿತಿ ಆಗಿನ ಪರಿಸ್ಥಿತಿ ಏನಿದೆ ಅಂತ ನೋಡೋಣ‌ ಎಂದರು.

ಹೋಮ-ಹವನವನ್ನು ಹೊಗೆ ಅಂತ ತಿಳಿದವರಿಗೆ ಉಸಿರಾಟ ಸಮಸ್ಯೆ ಆಗುತ್ತಿರಬಹುದು. ಆದರೆ, ಇದು ಹೊಗೆ ಅಲ್ಲ‌, ಕರ್ಪೂರ ಸೇರಿ ವಿವಿಧ ವಸ್ತು ಹಾಕಿ ಮಾಡುವಂತದ್ದು. ಆರೋಗ್ಯ ಸಮಸ್ಯೆ ಎದುರಿಸುವವರ ಮನೆ ಎದುರು ಮಾಡಬೇಡಿ ಅಂತ ಹೇಳಿದ್ದೇವೆ. ಬಹಳಷ್ಟು ಜನ ಹೋಮ-ಹವನ ಕಾರ್ಯ ಮಾಡಿ ವಾತಾವರಣ ಶುದ್ದೀಕರಣಕ್ಕೆ ಮುಂದೆ ಬಂದಿದ್ದಾರೆ. ಅಂತಹವರಿಗೆ ಸಹಕಾರ ಕೊಡುತ್ತೇವೆ ಎಂದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.