ETV Bharat / city

ಕೃಷ್ಣೆಯ ಪ್ರವಾಹಕ್ಕೆ ​​ಬೆಳೆ ನಾಶ: ಜಾನುವಾರಗಳಿಗೆ ಮೇವಿಲ್ಲದೆ ಕಂಗಾಲಾದ ನಿರಾಶ್ರಿತರು

ಕೃಷ್ಣೆಯ ಪ್ರವಾಹದಿಂದಾಗಿ ಹೊಲ-ಗದ್ದೆಗಳಲ್ಲಿ ಸಮುದ್ರೋಪಾದಿಯಲ್ಲಿ ನೀರು ಹರಿದು ಕಬ್ಬು, ಗೋವಿನಜೋಳ, ಸೋಯಾಬೀನ್‌, ದನಗಳಿಗಾಗಿ ಬೆಳೆದ ಹುಲ್ಲು ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಲ್ಬಣಗೊಂಡಿದೆ.

author img

By

Published : Aug 30, 2019, 3:50 AM IST

ಜಾನುವಾರಗಳಿಗೆ ಮೇವಿಲ್ಲದೇ ಕಂಗಾಲಾದ ನಿರಾಶ್ರಿತರು

ಚಿಕ್ಕೋಡಿ: ಪ್ರವಾಹ ಇಳಿದು ಗ್ರಾಮಗಳಲ್ಲಿ ನೀರು ಖಾಲಿಯಾಗಿದ್ದರಿಂದ ಸಂತ್ರಸ್ತರು ತಮ್ಮ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ. ಆದರೆ, ಪ್ರವಾಹದಿಂದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಲ್ಬಣಗೊಂಡಿದೆ.

ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ ತಾಲೂಕಿನಲ್ಲಿರುವ ಎಲ್ಲ ಕಾಳಜಿ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ನಿರಾಶ್ರಿತರಿಗೆ ಆರಂಭಿಸಿದ ಗೋಶಾಲೆಗಳಲ್ಲಿ ಬಿಟ್ಟಿದ್ದ ತಮ್ಮ ದನ-ಕರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರೂ ಅವುಗಳಿಗೆ ಮೇವು ಎಲ್ಲಿಂದ ತರಬೇಕೆಂಬುದೇ ಸಮಸ್ಯೆಯಾಗಿದೆ.

ಕೃಷ್ಣೆಯ ಪ್ರವಾಹಕ್ಕೆ ​​ಬೆಳೆಗಳು ನಾಶ

ಹೊಲ-ಗದ್ದೆಗಳಲ್ಲಿ ಸಮುದ್ರೋಪಾದಿಯಲ್ಲಿ ನೀರು ಹರಿದು ಕಬ್ಬು, ಗೋವಿನಜೋಳ, ಸೋಯಾಬೀನ್‌, ದನಗಳಿಗಾಗಿ ಬೆಳೆದ ಹುಲ್ಲು ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇನ್ನು ಶಾಲಾ ಪುನಾರಂಭವಾಗುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ತೆರೆದಿದ್ದ ಗೋಶಾಲೆಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ. ಒಟ್ಟಾರೆಯಾಗಿ ಪ್ರವಾಹದ ನಂತರ ಸೃಷ್ಟಿಯಾಗಿರುವ ಸಂದಿಗ್ಧತೆ ಇನ್ನಷ್ಟು ಘೋರ ಎನಿಸಿದೆ.

ಚಿಕ್ಕೋಡಿ ವಿಭಾಗದಲ್ಲಿ ನೂರಾರು ದನಕರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರಾತ್ರೋರಾತ್ರಿ ನದಿ ಪ್ರವಾಹ ಹೆಚ್ಚಾಗಿದ್ದರಿಂದ ಮನೆ ಮುಂದೆ ಹಿತ್ತಲಿನಲ್ಲಿ ಕಟ್ಟಿದ್ದ ದನ-ಕರುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರಿಂದ ಅವು ನೀರಲ್ಲಿ‌ ಮುಳಗಿ‌ ಸಾವನ್ನಪ್ಪಿವೆ.

Intro:ಜಾನುವಾರಗಳಿಗೆ ಮೇವಿಲ್ಲ : ಕಂಗಾಲಾದ ನಿರಾಶ್ರಿತರುBody:

ಚಿಕ್ಕೋಡಿ :
ಸ್ಟೋರಿ

ಮೊನ್ನಿ ಬಂದ ಪ್ರವಾಹಕ್ಕ ನಮ್ಮ ಜೀವನಾ ಹಾಳ ಆದಂಗ ಆಗೈತರಿ ಇರಾಕ‌ ಮನಿ ಇಲ್ಲ ಇದ್ದದ ಕಾಳ ಕಡಿ ನೀರಿನ್ಯಾಗ ತೊದ ಹೊಗ್ಯಾವ ಇದ್ದದ್ದ ದನಾಕರಕ್ಕ ಮೇವ ಇಲ್ಲಾ ಕಟ್ಟಾಕ ಜಾಗ ಇಲ್ಲದಂಗ ಆಗೈತ್ರಿ ಈಗ ಈ ದನಗೊಳ ಮನಿ ಮುಂದ ಹೋಗಿ ಕಟ್ಟಿ ಅವಕ ಏನ ಹಾಕ್ಕೊದ ತಿಳಿದಂಗ ಆಗೈತರಿ ಇದ್ದದ ದನಗೊಳ ಪ್ಯಾಟ್ಯಾಗ ಹೋಗಿ‌ ಮಾರಬೇಕ ಅಂದರ ಬಾಯಿಗಿ‌ ಬಂದ ದರಕ್ಕ ಬೇಡತಾರಿ ಈಗ ದನಕ್ಕ ಮೇವ ಎಲ್ಲಿಂದ ಹಾಕುದ ತಿಳಿವಾತರ್ರಿ.

ಇದು ಕೃಷ್ಣೆಯ ಪ್ರವಾಹದಲ್ಲಿ ಬದುಕಿನ ಆಶಯಗಳೆಲ್ಲ ಕೊಚ್ಚಿ ಹೋಗಿ ಸಂತ್ರಸ್ತರಾದವರ ಒಡಲಾಳದ ನೋವಿನ ನುಡಿಗಳು. ಪ್ರವಾಹದಿಂದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಲ್ಬಣಗೊಂಡಿದೆ.

ಪ್ರವಾಹ ಇಳಿದು ಗ್ರಾಮಗಳಲ್ಲಿ ನೀರು ಖಾಲಿಯಾಗಿದ್ದರಿಂದ ಸಂತ್ರಸ್ತರು ಮನೆಗಳತ್ತ ಮುಖಮಾಡಿದ್ದಾರೆ. ಅಥಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ ತಾಲೂಕಿನಲ್ಲಿರುವ ಎಲ್ಲ ಕಾಳಜಿ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ನಿರಾಶ್ರಿತರಿಗೆ ಆರಂಭಿಸಿದ ಗೋಶಾಲೆಗಳಲ್ಲಿ ಬಿಟ್ಟಿದ್ದ ತಮ್ಮ ದನ-ಕರುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೂ ಅವುಗಳಿಗೆ ಮೇವು ಎಲ್ಲಿಂದ ತರಬೇಕೆಂಬುದೇ ಸಮಸ್ಯೆಯಾಗಿದೆ.

ಹೊಲ-ಗದ್ದೆಗಳಲ್ಲಿ ಸಮುದ್ರೋಪಾದಿಯಲ್ಲಿ ನೀರು ಹರಿದು ಕಬ್ಬು, ಗೋವಿನಜೋಳ, ಸೋಯಾಬೀನ್‌, ದನಗಳಿಗಾಗಿ ಬೆಳೆದ ಹುಲ್ಲು ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಅವು 15 ಕ್ಕೂ ಹೆಚ್ಚು ದಿನಗಳ ಕಾಲ ನೀರಿನಲ್ಲಿ ನಿಂತಿದ್ದರಿಂದ ರಾಡಿ ಮೆತ್ತಿ ಕೊಳೆತ ವಾಸನೆ ಹೊಡೆಯುತ್ತಿದೆ. ಅಳಿದುಳಿದವುಗಳನ್ನಾದರೂ ದನಕರುಗಳಿಗೆ ಹಾಕಬೇಕೆಂದರೆ ದುರ್ನಾತಕ್ಕೆ ಅವು ಮೇವು ತಿನ್ನಲು ಒಪ್ಪುತ್ತಿಲ್ಲ. ಶಾಲಾ ಪುನಾರಂಭದ ಹಿನ್ನೆಲೆಯಲ್ಲಿ ಅಲ್ಲಿ ತೆರೆದಿದ್ದ ಗೋಶಾಲೆಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ. ಒಟ್ಟಾರೆಯಾಗಿ ಪ್ರವಾಹದ ನಂತರ ಸೃಷ್ಟಿಯಾಗಿರುವ ಸಂದಿಗ್ಧತೆ ಇನ್ನಷ್ಟು ಘೋರ ಎನಿಸಿದೆ.

ಚಿಕ್ಕೋಡಿ ವಿಭಾಗದಲ್ಲಿ ನೂರಾರು ದನಕರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರಾತ್ರೋರಾತ್ರಿ ನದಿ ಪ್ರವಾಹ ಹೆಚ್ಚಾಗಿದ್ದರಿಂದ ಮನೆ ಮುಂದೆ ಹಿತ್ತಲಿನಲ್ಲಿ ಕಟ್ಟಿದ ದನಕರುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರಿಂದ ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ ದನಕರುಗಳು ನೀರಲ್ಲಿ‌ ಮುಳಗಿ‌ ಮನೆ ಮುಂದೆ ಸಾವನಪ್ಪಿವೆ. ಇನ್ನು ಕೆಲ ದನಕರುಗಳು ನೀರಿನಲ್ಲಿ ಹರಿದು ಹೋಗಿವೆ‌. ಮನೆ ಮುಂದೆ ಸತ್ತ ದನಗಳು ಗಬ್ಬೆಂದು ನಾರುತ್ತಿವೆ. ಇನ್ನು ಉಳಿದ ದನಗಳಿಗೆ ಮೇವು ತರಬೇಕೆಂದರೆ ಎಲ್ಲವೂ ಮುಳಗಡೆಯಾಗಿದೆ. ನೀರಿನಲ್ಲಿ ನಿಂತ ಪರಿಣಾಮ ಹಸಿರಾದವೆಲ್ಲವು ಒಣಗಿದ್ದು ಅವುಗಳನ್ನು ದನಗಳು ತಿನ್ನಲು‌ ಮುಂದಾಗುತ್ತಿಲ್ಲ. ಈಗ ನಿರಾಶ್ರಿತರಿಗೆ ಒಂದಿಲ್ಲ ಒಂದು ತೊಂದರೆಗಳು ಮುಂದಾಗುತ್ತಿದ್ದು ಇದರಿಂದ ನಿರಾಶ್ರಿತರು ಕಂಗಾಲಾಗಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.