ETV Bharat / city

ಬೆಳಗಾವಿ ಬೈ ಎಲೆಕ್ಷನ್‌ಗೆ ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಿ- ಜಯ ಮೃತ್ಯುಂಜಯ ಶ್ರೀ - kudalasangama peetha Jay Mritunjaya Swamiji

ಈ ಕುರಿತಂತೆ ಸುರೇಶ ಅಂಗಡಿ ಕುಟುಂಬಸ್ಥರು ಹಾಗೂ ಬಿಜೆಪಿ ಪಕ್ಷದವರು ವಿಚಾರ ಮಾಡಲಿದ್ದಾರೆ. ಅಂಗಡಿ ಕುಟುಂಬಸ್ಥರು ಒಂದು ವೇಳೆ ಟಿಕೆಟ್ ಬೇಡವೆಂದ್ರೆ ನಮ್ಮ ಸಮುದಾಯದಲ್ಲಿಯೇ ಸಾಕಷ್ಟು ಜನ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ..

Jaya Mritunjaya Swamiji reaction about Belgaum LokSabha ticket
ನಮ್ಮ ಸಮುದಾಯದ ಒಬ್ಬರಿಗೆ ಎಂಪಿ ಟಿಕೆಟ್ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡುವೆ: ಜಯ ಮೃತ್ಯುಂಜಯ ಸ್ವಾಮೀಜಿ
author img

By

Published : Oct 7, 2020, 6:04 PM IST

ಬೆಳಗಾವಿ: ದಿ.ಸುರೇಶ್​ ಅಂಗಡಿಯವರ ಕುಟುಬಂಸ್ಥರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ನೀಡದಿದ್ರೆ, ನಮ್ಮ ಸಮುದಾಯದಲ್ಲಿ ಯಾರಿಗಾದ್ರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡುವುದಾಗಿ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ನಮ್ಮ ಸಮುದಾಯದ ಒಬ್ಬರಿಗೆ ಎಂಪಿ ಟಿಕೆಟ್ ನೀಡುವಂತೆ ಸರ್ಕಾರಕ್ಕೆ ಸಲಹೆ.. ಜಯ ಮೃತ್ಯುಂಜಯ ಸ್ವಾಮೀಜಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಿಧನರಾದ್ರೇ ಅವರ ಮನೆತನಕ್ಕೆ ಟಿಕೆಟ್ ನೀಡುವ ಸಂಪ್ರದಾಯವಿದೆ. ಈ ಕುರಿತಂತೆ ಸುರೇಶ ಅಂಗಡಿ ಕುಟುಂಬಸ್ಥರು ಹಾಗೂ ಬಿಜೆಪಿ ಪಕ್ಷದವರು ವಿಚಾರ ಮಾಡಲಿದ್ದಾರೆ. ಅಂಗಡಿ ಕುಟುಂಬಸ್ಥರು ಒಂದು ವೇಳೆ ಟಿಕೆಟ್ ಬೇಡವೆಂದ್ರೆ ನಮ್ಮ ಸಮುದಾಯದಲ್ಲಿಯೇ ಸಾಕಷ್ಟು ಜನ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಸರ್ಕಾರ ಒಂದು ವೇಳೆ ನಮ್ಮ ಸಲಹೆ ಕೇಳಿದ್ರೆ ನಮ್ಮ ಸಮುದಾಯದ ಒಬ್ಬರಿಗೆ ಟಿಕೆಟ್​ ನೀಡುವಂತೆ ತಿಳಿಸುವೆ ಎಂದರು.

ಸುರೇಶ್​ ಅಂಗಡಿಯವರು ನಾಲ್ಕು ಬಾರಿ ಸಂಸದರಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಕೇಂದ್ರ ರೈಲ್ವೆ ಸಚಿವರಾದ ಮೇಲೆ ರಾಜ್ಯಕ್ಕೆ ಅನೇಕ ರೈಲ್ವೆ ಯೋಜನೆಗಳನ್ನು ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದರು. ಆದರೀಗ ಅಂಗಡಿಯವರ ಅಭಿವೃದ್ಧಿಯ ಬೆಳಕು ನಂದಿರುವುದು ಸಾಕಷ್ಟು ನೋವು ತಂದಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ. ಅಂಗಡಿಯವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.