ದೇವನಹಳ್ಳಿ : ಎಳನೀರು ಕುಡಿಯಲು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತನ ದೇಹ ಎರಡು ಭಾಗವಾಗಿ ಮೃತಪಟ್ಟ ಘಟನೆ ದೇವನಹಳ್ಳಿ ತಾಲೂಕಿನ ಬಾಲೇಪುರ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಬೆಟ್ಟಕೋಟೆ ನಿವಾಸಿ ಶಿವಪ್ರಸಾದ್ (35) ಸಾವನ್ನಪ್ಪಿದ್ದವರು. ರಸ್ತೆ ಬದಿಯಲ್ಲಿ ಎಳನೀರು ಕುಡಿಯಲೆಂದು ರಸ್ತೆ ದಾಟಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ವೇಗವಾಗಿ ಬಂದ ಲಾರಿಯು ವ್ಯಕ್ತಿಯ ಮೇಲೆ ಹರಿದ ಪರಿಣಾಮ ಆತನ ದೇಹ ಎರಡು ಭಾಗವಾಗಿದೆ. ಘಟನೆಯ ನಂತರ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ವಿಜಯ ಹಜಾರೆ ಕ್ವಾರ್ಟರ್ ಫೈನಲ್: ತಮಿಳುನಾಡು ವಿರುದ್ಧ ಲೀಗ್ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಮನೀಶ್ ಪಡೆ?)