ETV Bharat / city

'ಪಾಪು' ವಿಚಾರದಲ್ಲಿ ಸರ್ಕಾರದ ನಡೆ ಖಂಡನೀಯ: ಅಶೋಕ ಚಂದರಗಿ - Senior journalist Ashoka Chandaragi

'ಹಿರಿಯ ಚೇತನ ಕನ್ನಡದ ಕಟ್ಟಾಳು ಡಾ. ಪಾಟೀಲ ಪುಟ್ಟಪ್ಪನವರ ಹೆಸರಿನಲ್ಲಿ ಜಿಲ್ಲೆಯ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಬೇಕು. ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಅವರ ವಿಷಯವನ್ನು ತರಲು ಚಿಂತನೆ ನಡೆಸಬೇಕು'

Government's condemnation of Papu is intolerable: Senior journalist Ashoka Chandragi
ಪಾಪು ವಿಚಾರದಲ್ಲಿ ಸರ್ಕಾರದ ನಡೆ ಖಂಡನೀಯ: ಹಿರಿಯ ಪತ್ರಕರ್ತ ಅಶೋಕ ಚಂದರಗಿ
author img

By

Published : Mar 19, 2020, 9:27 AM IST

ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡದ ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಪ್ರಶಸ್ತಿ ಪುರಸ್ಕೃತ ಪಾಟೀಲ ಪುಟ್ಟಪ್ಪನವರ ನಿಧನಕ್ಕೆ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಹಾಗೂ ಗಣ್ಯರ ನೇತೃತ್ವದಲ್ಲಿ ನಿನ್ನೆ ಸಂಜೆ ಶ್ರದ್ಧಾಂಜಲಿ ಕೋರಿದರು.

ಪಾಟೀಲ ಪುಟ್ಟಪ್ಪನವರ ನಿಧನ ಹಿನ್ನೆಲೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಈ ವೇಳೆ ಹಿರಿಯ ಪತ್ರಕರ್ತ ಅಶೋಕ ಚಂದರಗಿ ಮಾತನಾಡಿ, ಡಾ. ಪಾಟೀಲ ಪುಟ್ಟಪ್ಪನವರ ವಿಷಯದಲ್ಲಿ ರಾಜ್ಯ ಸರ್ಕಾರ ಕೀಳಾಗಿ ನಡೆದುಕೊಳ್ಳುತ್ತಿದೆ. ಪಾಪು ನಾಡು-ನುಡಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದರು. ಇದಲ್ಲದೇ ಕರ್ನಾಟಕ ಏಕೀಕರಣ, ಕನ್ನಡ ಉಳಿವಿಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಆದರೆ, ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಶೋಕಾಚರಣೆ ಮಾಡದೆ ಅಗೌರವ ತೋರಿದೆ. ಕೊನೆಪಕ್ಷ ಧಾರವಾಡ ಜಿಲ್ಲಾ ಮಟ್ಟಿಗಾದರೂ ಶೋಕಾಚರಣೆ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಕಾರಂಜಿಮಠದ ಗುರುಸಿದ್ಧ ಶ್ರೀಗಳು ಮಾತನಾಡಿ, ಹಿರಿಯ ಚೇತನ ಕನ್ನಡದ ಕಟ್ಟಾಳು ಡಾ. ಪಾಟೀಲ ಪುಟ್ಟಪ್ಪನವರ ಹೆಸರಿನಲ್ಲಿ ಜಿಲ್ಲೆಯ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಬೇಕು. ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಅವರ ವಿಷಯವನ್ನ ತರಲು ಚಿಂತನೆ ನಡೆಸಬೇಕು. ಪಾಪು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಲೋಕಕ್ಕೆ ಹಾಗೂ ಪತ್ರಿಕಾ ಮಾಧ್ಯಮ ಕ್ಷೇತ್ರಕ್ಕೆ ಶ್ರಮಿಸಿದ ಸರಳ‌ ಸಜ್ಜನ ವ್ಯಕ್ತಿ ಎಂದು ಇದೇ ವೇಳೆ ಸ್ಮರಿಸಿಕೊಂಡರು.

ಅನಂತರ ನಾಗನೂರು ಅಲ್ಲಮಪ್ರಭು ಶ್ರೀ ಮಾತನಾಡಿ, ಪಾಪು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಅವರನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ. ರಾಜಶೇಖರ್ ಪಾಟೀಲ್, ಮಾಜಿ ಮೇಯರ್ ಸಿದ್ದನಗೌಡ ಪಾಟೀಲ್, ರಾಜು ತಳವಾರ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.