ಚಿಕ್ಕೋಡಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವ ಹುನ್ನಾರ ನಡಿಯುತ್ತಿದೆ. ಆದರೆ ಅವರನ್ನು ಅಲುಗಾಡಿಸುವ ಗಂಡಸು ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಐನಾಪೂರ ಪಟ್ಟಣದಲ್ಲಿ ಮತಯಾಚನೆ ನಡೆಸಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಗೆ ಕರ್ನಾಟಕ ತುಂಬೆಲ್ಲ ಡ್ಯಾಶ್ ಡ್ಯಾಶ್ ಫೇಮಸ್ ಆಗಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ...ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ,- - - ಕೂಡ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ನನ್ನ ಮಗನಿಗೆ ಶುಕ್ರವಾರ ಶುಕ್ರ ದೆಸೆ ಬರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವಗೌಡರ ಧ್ವನಿಯಲ್ಲೇ ಮಿಮಿಕ್ರಿ ಮಾಡಿದರು. ಗಂಡಸುತನ, ಡ್ಯಾಶ್ ಡ್ಯಾಶ್ ಎಂಬ ಮಾತು ಆಡಿದವರಿಗೆ ಸರಿಯಾಗಿ ಪಾಠ ಕಲಿಸಿ ಎಂದು ಹೆಬ್ಬಾಳ್ಕರ್ಗೆ ತಿರುಗೇಟು ನೀಡಿದರು.
ಉಮೇಶ್ ಕತ್ತಿ ಅವರೇ ಎರಡು ದಿನ ಕ್ಷೇತ್ರದಲ್ಲಿ ಕೆಲಸ ಮಾಡಿ. ಮುಂದೆ ನಿಮಗೂ ಸಚಿವ ಸ್ಥಾನ ಸಿಗುತ್ತದೆ, ಇಲ್ಲಾಂದ್ರ ಇಲ್ಲಾ. ಈ ಶ್ರೀಮಂತ ಪಾಟೀಲ ಗೆದ್ದರೆ ಮಾತ್ರ ನಿಮಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಶಾಸಕ ಉಮೇಶ್ ಕತ್ತಿ ಕಾಲೆಳೆದರು.
ಸವದಿ ಅವರೇ ನಮ್ಮ ಜಿಲ್ಲೇನೂ ಅಭಿವೃದ್ಧಿ ಮಾಡಿ. ನಿಮ್ಮ ಕ್ಷೇತ್ರ ಮಾತ್ರ ಅಭಿವೃದ್ಧಿ ಮಾಡಕೋಬೇಡಿ. ನೀವು ರಾಜ್ಯದ ಮಂತ್ರಿ ಆಗಿದ್ದೀರಿ. ನಾವು ಮಂತ್ರಿ ಆಗಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿಗೆ ಹೇಳಿದರು.