ಚಿಕ್ಕೋಡಿ: ವಿದ್ಯುತ್ ಬಿಲ್ (Electricity bill) ಕೇಳಲು ಮನೆಗೆ ಹೋದ ಹೆಸ್ಕಾಂ (Hescom) ಸಿಬ್ಬಂದಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ಕರೋಶಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿರುವ ಮನೆಯೊಂದಕ್ಕೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಹೆಸ್ಕಾಂ ಸಿಬ್ಬಂದಿ ಒತ್ತಾಯಿಸಿದ್ದಾರೆ. ಈ ವೇಳೆ, ಕುಟುಂಬಸ್ಥರು ಮತ್ತು ಹೆಸ್ಕಾಂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಹೆಸ್ಕಾಂ ಸಿಬ್ಬಂದಿ ಮೇಲೆ ಅಲ್ಲಿನ ಗ್ರಾಮಸ್ಥರು ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಕರ್ತವ್ಯ ನಿರತ ಸಿಬ್ಬಂದಿ ಕೊರಳಿನ ಪಟ್ಟಿ ಹಿಡಿದು ಎಳೆದಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.