ETV Bharat / business

ಆದಾಯ ನಿಂತಾಗ EMI ನಿರ್ವಹಣೆ ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ - ಸಾಲದ ವಿಮಾ ಪಾಲಿಸಿ

ಕೆಲಸ ಹೋದಾಗ ಅಥವಾ ವ್ಯಾಪಾರದಲ್ಲಿ ನಷ್ಟ ಉಂಟಾದಾಗ ಸಾಲದ ಕಂತುಗಳ ಪಾವತಿ ಬಹಳೇ ಕಷ್ಟವಾಗುತ್ತದೆ. ಇಂಥ ಪರಿಸ್ಥಿತಿಗಳಲ್ಲಿ ಸಾಲಗಳನ್ನು ಹೇಗೆ ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯುವುದು ಅಗತ್ಯ.

What to do when you can't pay EMIs
What to do when you can't pay EMIs
author img

By

Published : Feb 5, 2023, 8:19 PM IST

ಹೈದರಾಬಾದ್: ಉದ್ಯೋಗ ಕಳೆದುಕೊಂಡಾಗ ಅಥವಾ ವ್ಯಾಪಾರದಲ್ಲಿ ನಷ್ಟ ಉಂಟಾದಾಗ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ. ಇಂಥ ಪರಿಸ್ಥಿತಿಗಳಲ್ಲಿ ನಿಮ್ಮ ನಿಯಮಿತ ಆದಾಯ ನಿಂತು ಹೋಗುವುದರಿಂದ ಸಾಲದ ಕಂತುಗಳನ್ನು ಪಾವತಿಸುವುದು ಸಾಧ್ಯವಾಗುವುದಿಲ್ಲ. ಸಾಲದ ಬಾಕಿಗಳು ಹೆಚ್ಚಾಗಿ ನಿಮ್ಮ ಸಾಲವನ್ನು ಬ್ಯಾಡ್ ಲೋನ್ ಅಥವಾ NPA ಎಂದು ಬ್ಯಾಂಕ್​ಗಳು ಘೋಷಿಸುವುದರಿಂದ ನೀವು ಡಿಫಾಲ್ಟರ್ ಆಗಬಹುದು. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಸಾಲದ ಹೊರೆಗಳನ್ನು ನಿಭಾಯಿಸುವುದು ಹೇಗೆ? ಇಲ್ಲಿವೆ ಒಂದಿಷ್ಟು ಉಪಯುಕ್ತ ಸಲಹೆ.

ಉದ್ಯೋಗ ಕಡಿತದ ಸುದ್ದಿಗಳು ಮೇಲಿಂದ ಮೇಲೆ ಬರುತ್ತಿರುವುದರಿಂದ ಅನೇಕರು ತಮ್ಮ ಸಾಲದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಗಳು ಹೀಗೆ ಯಾವುದಾದರೊಂದು ರೀತಿಯ ಸಾಲ ಇದ್ದೇ ಇರುತ್ತದೆ. ಸಂಬಳ ಸಿಗದಿದ್ದರೆ ಇಎಂಐ ಕಟ್ಟುವುದು ಹೇಗೆ ಎಂದು ಯೋಚಿಸುವಂತಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ ಕಂತುಗಳನ್ನು ಪಾವತಿಸದಿದ್ದಾಗ, ಸಾಲಗಾರನ ವಿರುದ್ಧ ಬ್ಯಾಂಕುಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

NPA ಎಂದರೇನು?: ಯಾವುದೇ ಸಾಲಗಾರನು ಸತತ ಮೂರು ತಿಂಗಳು ಕಂತುಗಳನ್ನು ಪಾವತಿಸದಿದ್ದರೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅಂಥ ಸಾಲವನ್ನು ತಾತ್ಕಾಲಿಕ ಕೆಟ್ಟ ಸಾಲವೆಂದು ಪರಿಗಣಿಸುತ್ತವೆ. ಇಂಥ ಸಂದರ್ಭದಲ್ಲಿ ಸಾಲಗಾರನಿಗೆ ನೋಟಿಸ್ ಕಳುಹಿಸಲಾಗುತ್ತದೆ. ಕಂತುಗಳು ವಿಳಂಬವಾದಾಗ ಬ್ಯಾಂಕ್‌ಗಳು ಕಂತು ಮೊತ್ತದ 1 ರಿಂದ 2 ಪ್ರತಿಶತದಷ್ಟು ದಂಡ ಶುಲ್ಕವನ್ನು ವಿಧಿಸುತ್ತವೆ. EMI ಗಳನ್ನು 6 ತಿಂಗಳವರೆಗೆ ಪಾವತಿಸದಿದ್ದರೆ, ಬ್ಯಾಂಕ್‌ಗಳು ಅದನ್ನು ಅನುತ್ಪಾದಕ ಆಸ್ತಿ (NPA) ಎಂದು ಪರಿಗಣಿಸುತ್ತವೆ. ಸಾಲವು ಎನ್‌ಪಿಎ ಆಗಿ ಬದಲಾದಾಗ ಪರಿಸ್ಥಿತಿ ಬಿಗಿಯಾಗುತ್ತದೆ. ಆಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಪರಿಗಣಿಸುತ್ತವೆ. ಕೆಲವು ಹಣಕಾಸು ಸಂಸ್ಥೆಗಳು ತಮ್ಮ ಎನ್‌ಪಿಎಗಳನ್ನು ಮೂರನೇ ವ್ಯಕ್ತಿಗಳಿಗೆ ಹಸ್ತಾಂತರಿಸುತ್ತಿವೆ.

ಕ್ರೆಡಿಟ್ ಸ್ಕೋರ್: ಕಂತುಗಳನ್ನು ಸರಿಯಾಗಿ ಪಾವತಿಸದಿದ್ದರೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. EMI ಗಳನ್ನು ನಿಯಮಿತವಾಗಿ ಪಾವತಿ ಮಾಡದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯಬಹುದು. ಪ್ರಸ್ತುತ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ರೆಪೊಗೆ ಲಿಂಕ್ ಮಾಡಿವೆ. ಇದಲ್ಲದೆ, ಸಾಲಗಾರನ ಕ್ರೆಡಿಟ್ ಸ್ಕೋರ್ ಆಧರಿಸಿ ಕೂಡ ಬಡ್ಡಿಯನ್ನು ನಿರ್ಧರಿಸಲಾಗುತ್ತದೆ. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಬಡ್ಡಿದರ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಬ್ಯಾಂಕ್‌ಗಳು ನಿಮ್ಮ ಸಾಲವನ್ನು ಎನ್‌ಪಿಎ ಎಂದು ತೋರಿಸಿದರೆ ನಿಮ್ಮ ವಿಶ್ವಾಸಾರ್ಹತೆ ಮತ್ತಷ್ಟು ಹಾಳಾಗುತ್ತದೆ.

ಕಂತುಗಳು: ತಾತ್ಕಾಲಿಕ ಹಣಕಾಸಿನ ತೊಂದರೆಗಳು ಮತ್ತು ಕಂತುಗಳನ್ನು ಪಾವತಿಸಲು ಅಸಮರ್ಥತೆಯ ಸಂದರ್ಭದಲ್ಲಿ ಸ್ಥಿರ ಠೇವಣಿ ಮತ್ತು ವಿಮಾ ಪಾಲಿಸಿಗಳಲ್ಲಿ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಬಳಸಿಕೊಳ್ಳಬೇಕು. ನೀವು ಆರ್ಥಿಕ ಸ್ಥಿರತೆಯನ್ನು ಮರಳಿ ಪಡೆದ ನಂತರ ಈ ಎಲ್ಲಾ ಬಾಕಿಗಳನ್ನು ತಕ್ಷಣವೇ ಪಾವತಿ ಮಾಡಬೇಕು. ನೀವು ತುಂಬಾ ಆರ್ಥಿಕ ಅನಿಶ್ಚಿತತೆಯನ್ನು ಅನುಭವಿಸಿದರೆ, ಮೊದಲು ಕಡಿಮೆ ಬಡ್ಡಿಯ ಹೂಡಿಕೆ ಯೋಜನೆಗಳಿಂದ ನಗದು ಹಿಂಪಡೆಯಬೇಕು. ತಾತ್ಕಾಲಿಕವಾಗಿ ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳಬಹುದು. ಸ್ನೇಹಿತರು ಮತ್ತು ಸಂಬಂಧಿಕರಿಂದ ಸಹ ನೀವು ಸಹಾಯ ಪಡೆಯುವ ಮಾರ್ಗಗಳನ್ನು ನೋಡಬಹುದು.

ನೀವು ಕೆಲವು ವರ್ಷಗಳವರೆಗೆ EMI ಪಾವತಿಸಲು ಸಾಧ್ಯವಾಗದಿದ್ದರೆ ಸಾಲದ ವಿಮಾ ಪಾಲಿಸಿ (loan insurance policies) ಗಳಂಥ ಯೋಜನೆಗಳು ನಿಮ್ಮನ್ನು ರಕ್ಷಿಸುತ್ತವೆ. ತಾತ್ಕಾಲಿಕ ಉದ್ಯೋಗ ನಷ್ಟ ಅಥವಾ ಆದಾಯ ನಷ್ಟದ ಸಂದರ್ಭದಲ್ಲಿ ಈ ಪಾಲಿಸಿಗಳು ಸಹಾಯ ಮಾಡುತ್ತವೆ. ಕನಿಷ್ಠ 6 ತಿಂಗಳ EMI ಗೆ ಸಮಾನವಾದ ಮೊತ್ತವನ್ನು ಯಾವಾಗಲೂ ತುರ್ತು ನಿಧಿಯಾಗಿ ಇಟ್ಟುಕೊಂಡಿರಬೇಕು. ನಿಮ್ಮ ಮೇಲೆ ಯಾವುದೇ ಆರ್ಥಿಕ ಒತ್ತಡ ಬೀಳದಂತೆ ಇದರಿಂದ ಸಹಾಯವಾಗುತ್ತದೆ. ಕಡಿಮೆ EMI ಯೊಂದಿಗೆ ಲೋನ್ ಅವಧಿಯನ್ನು ಆಯ್ಕೆ ಮಾಡುವುದು ಮತ್ತು ನಿಮ್ಮ ಆದಾಯದ ಮಟ್ಟದೊಳಗೆ ಲೋನ್ ತೆಗೆದುಕೊಳ್ಳುವುದು ಯಾವಾಗಲೂ ಸುರಕ್ಷಿತವಾಗಿದೆ.

ಆದಾಯ ಮತ್ತು ವೆಚ್ಚಗಳು: ನಿಮ್ಮ ಆದಾಯವನ್ನು ಮೀರಿ ಪಾವತಿಸುವಷ್ಟು ಸಾಲದ ಕಂತುಗಳನ್ನು ಮಾಡಿಕೊಳ್ಳಬೇಡಿ. ಸಾಲದ ಕಂತುಗಳು ನಿಮ್ಮ ಆದಾಯದ ಶೇಕಡಾ 40 ಕ್ಕಿಂತ ಹೆಚ್ಚಾಗಿರಬಾರದು. ಉದಾಹರಣೆಗೆ- ರೂ 30,000 ಗಳಿಸುವ ವ್ಯಕ್ತಿಯು EMI ಗೆ 40 ಪ್ರತಿಶತವನ್ನು ಪಾವತಿಸಿದರೆ, ಅವನು ಉಳಿದ ರೂ 18,000 ದಿಂದ ಕುಟುಂಬ ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಅದೇ ರೀತಿ ಒಂದು ಲಕ್ಷ ಸಂಬಳ ಪಡೆಯುವ ವ್ಯಕ್ತಿ 40 ಸಾವಿರ ಕಂತು ಕಟ್ಟಿದರೂ ಉಳಿದ ಹಣವನ್ನು ನಿತ್ಯದ ಖರ್ಚಿಗೆ ಬಳಸಿಕೊಳ್ಳಬಹುದು. ಆದ್ದರಿಂದ, ಆದಾಯ ಮತ್ತು ವೆಚ್ಚಗಳ ನಡುವೆ ಆರೋಗ್ಯಕರ ಸಮತೋಲನವನ್ನು ಸಾಧಿಸಿ. ನೀವು ತ್ವರಿತವಾಗಿ ಸಾಲವನ್ನು ತೀರಿಸಲು ಬಯಸಿದರೆ, ನಿಮ್ಮ ಖರ್ಚುಗಳನ್ನು ಕಡಿತಗೊಳಿಸಿ. ನಿಮ್ಮ ಮಾಸಿಕ ಬಜೆಟ್ ಅನ್ನು ತಯಾರಿಸಿ. ಅದರಲ್ಲಿ ವೆಚ್ಚಗಳಿಗೆ ಆದ್ಯತೆ ನೀಡಿ. ಕಡ್ಡಾಯ ಬಿಲ್‌ಗಳು, ಶುಲ್ಕಗಳು ಮತ್ತು ಅನಗತ್ಯ ವೆಚ್ಚಗಳನ್ನು ಪ್ರತ್ಯೇಕವಾಗಿ ಬರೆಯಿರಿ. ಅಗತ್ಯ ವೆಚ್ಚಗಳಿಗೆ ಮೊದಲು ಹಣ ಹೊಂದಿಸಿ. ಅನಾವಶ್ಯಕ ಖರ್ಚುವೆಚ್ಚಗಳಿಗೆ ಕೈ ಹಾಕಬೇಡಿ. ಈ ಉಳಿಸಿದ ಹಣವನ್ನು ಸಾಲ ಮರುಪಾವತಿಗೆ ಬಳಸಿ.

ಇದನ್ನೂ ಓದಿ: ಅದಾನಿ ಗ್ರೂಪ್​​ನೊಂದಿಗಿನ ವ್ಯವಹಾರದ ಮಾಹಿತಿ ನೀಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಆರ್​ಬಿಐ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.