ETV Bharat / business

ದುಡಿಮೆಯ ವಿರಾಮ ಜೀವನದ ಊರುಗೋಲು 'ಎನ್​ಪಿಎಸ್​ ಯೋಜನೆ'.. ಇದರ ಲಾಭಗಳ ವಿವರ ಹೀಗಿದೆ ನೋಡಿ..!

ಭವಿಷ್ಯದ ಭದ್ರತೆಗೆ ಹಣದ ಉಳಿತಾಯ ನೆರವಾಗುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಸೇವಿಂಗ್ಸ್​ ಯೋಜನೆಗಳಿವೆ. ಅದರಲ್ಲಿ ನಿಮ್ಮ ಆದಾಯ ಮತ್ತು ಉಳಿತಾಯಕ್ಕೆ ಸರಿ ಹೊಂದುವುದನ್ನ ಆಯ್ಕೆ ಮಾಡಿಕೊಳ್ಳಬೇಕು.

author img

By

Published : Jun 24, 2023, 11:19 AM IST

ಎನ್​ಪಿಎಸ್​ ಯೋಜನೆ
ಎನ್​ಪಿಎಸ್​ ಯೋಜನೆ

ಹೈದರಾಬಾದ್​: ಉಳಿತಾಯ ಮಾಡುವುದರಲ್ಲಿ ಭಾರತೀಯರು ಎತ್ತಿದ ಕೈ. ಭವಿಷ್ಯದ ಆರ್ಥಿಕ ಸಂಕಷ್ಟಗಳು ಎದುರಾಗದಿರಲು ಸಾಧ್ಯವಾದಷ್ಟು ಉಳಿತಾಯ ಮಾಡುವ ಆಲೋಚನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಮನೆ ಖರೀದಿ, ಮಕ್ಕಳ ಶಿಕ್ಷಣ, ಅವರ ಮದುವೆ ಕಾರ್ಯಗಳಿಗಾಗಿ ದುಡಿಮೆಯಲ್ಲಿ ಒಂದಿಷ್ಟು ಹಣ ಕೂಡಿಡುತ್ತಾರೆ. ಇದಕ್ಕಾಗಿ ಹಲವಾರು ಸೇವಿಂಗ್ಸ್​ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ದುಡಿಮೆಯ ವಿರಾಮದ ಬಳಿಕ ಪಿಂಚಣಿ ವ್ಯವಸ್ಥೆಗಳು ಬಹುಮುಖ್ಯವಾಗಿವೆ. ಅಂಥವುಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್​) ಕೂಡ ಒಂದಾಗಿದೆ. ಇದು ನಿವೃತ್ತಿ ಬಳಿಕ ನಮಗೆ ಹೇಗೆ ನೆರವು ನೀಡುತ್ತದೆ ಎಂಬುದರ ವಿವರ ಇಲ್ಲಿದೆ.

ಉದ್ಯೋಗ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಜೀವ ವಿಮಾ ಪಾಲಿಸಿಗಳು, ಮ್ಯೂಚುವಲ್ ಫಂಡ್‌ಗಳು, ಎನ್‌ಪಿಎಸ್‌ನಂತಹ ಹಲವು ಯೋಜನೆಗಳಿವೆ. ಪ್ರತಿಯೊಂದು ಯೋಜನೆಯೂ ನೀಡುವ ಲಾಭಗಳು ವಿಭಿನ್ನವಾಗಿವೆ. ಇವುಗಳಲ್ಲಿ ಯಾವುದನ್ನು ನಾವು ಆರಿಸಿಕೊಂಡರೂ ಸದ್ಯದ ಆರ್ಥಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಗಳಿಕೆಗೆ ಸಮನಾದ ಯೋಜನೆಗಳು ಮೊದಲ ಆದ್ಯತೆಯಾಗಬೇಕು.

ಶೀಘ್ರವೇ ಯೋಜನೆ ಪಡೆಯಿರಿ: ಹೂಡಿಕೆ ಯೋಜನೆಗಳು ದೀರ್ಘಾವಧಿಯವರೆಗೆ ಮುಂದುವರಿದಾಗ ಮಾತ್ರ ಉತ್ತಮ ಲಾಭಗಳು ಧಕ್ಕಲಿವೆ. ವರ್ಷಕ್ಕೆ 50 ಸಾವಿರ ರೂಪಾಯಿಯನ್ನು 20 ವರ್ಷಗಳ ಕಾಲ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಕನಿಷ್ಠ 8 ಪ್ರತಿಶತದಷ್ಟು ಬಡ್ಡಿಯೊಂದಿಗೆ ಅದು 40 ಲಕ್ಷದವರೆಗೆ ಲಾಭವನ್ನು ತಂದುಕೊಡುತ್ತದೆ. ಅದರಲ್ಲೇ 5 ವರ್ಷ ಕಡಿತವಾದರೆ, ನಿಮ್ಮ ಆದಾಯ ರೂ.15 ಲಕ್ಷಗಳಿಗೆ ಸೀಮಿತವಾಗಿರುತ್ತದೆ. ಆದ್ದರಿಂದ, ಹೂಡಿಕೆಗಳನ್ನು ಯಾವಾಗಲೂ ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು. ದೀರ್ಘಾವಧಿಯವರೆಗೆ ಮುಂದುವರಿಸಿದಲ್ಲಿ ಚಕ್ರಬಡ್ಡಿಯನ್ನೂ ಪಡೆಯಬಹುದು.

ಅಧಿಕ ಆದಾಯ ಪಡೆಯುವ ಹಾದಿ: ದೀರ್ಘಾವಧಿಯಲ್ಲಿ ಹಣದ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಬಹುಮುಖ್ಯವಾಗಿದೆ. ದೀರ್ಘಾವಧಿಯ ಹೂಡಿಕೆಗಾಗಿ ಇಕ್ವಿಟಿ ಆಧಾರಿತ ಯೋಜನೆಗಳನ್ನು (ಮ್ಯೂಚುವಲ್ ಫಂಡ್‌ಗಳು, ಎನ್​ಪಿಎಸ್​) ಆರಿಸಿಕೊಂಡರೆ ಒಳಿತು. ಆಗ ನೀವು ಎರಡಂಕಿಯ ಆದಾಯವನ್ನು ಗಳಿಸಬಹುದು. ಉದಾಹರಣೆಗೆ 1995 ರಿಂದ ನಿಫ್ಟಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಅಂದಿನಿಂದ ಇಲ್ಲಿಯವರೆಗೆ ಪ್ರತಿ ವರ್ಷ ಎರಡು ಸಲ ಹಣ ಸಂದಾಯವಾಗುತ್ತಿರುತ್ತದೆ. ಇದು ಲಾಭದ ಜೊತೆಗೆ ದೀರ್ಘಾವಧಿಯ ಹೂಡಿಕೆಯಲ್ಲೂ ಯಾವುದೇ ನಷ್ಟ ಇರುವುದಿಲ್ಲ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವಾಗಲೂ ಇದನ್ನು ಪರಿಗಣಿಸಬೇಕು.

ಕಡಿಮೆ ಶುಲ್ಕ: ಮಾರುಕಟ್ಟೆ ಆಧಾರಿತ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ಕೆಲವು ಶುಲ್ಕಗಳನ್ನು ವಿಧಿಸಲಾಗುತ್ತದೆ. ಕಡಿಮೆ ಶುಲ್ಕಗಳಿರುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಹಣ ನಿರ್ವಹಣಾ ವೆಚ್ಚವು 25 ವರ್ಷಗಳಲ್ಲಿ 1 ಪ್ರತಿಶತದಷ್ಟು ಇದ್ದರೂ, ನಿಮ್ಮ ನಿಧಿಯಲ್ಲಿ 10-15 ಪ್ರತಿಶತದಷ್ಟು ವ್ಯತ್ಯಾಸ ಉಂಟಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯೋಜನೆಗಾಗಿ ಕಡಿಮೆ ವೆಚ್ಚ ಪಾವತಿಸಿದರೆ, 12-15 ಪ್ರತಿಶತ ಹೆಚ್ಚು ಹಣವನ್ನು ಸಂಗ್ರಹಿಸಬಹುದು.

ಮಾರುಕಟ್ಟೆಯಲ್ಲಿ ಏರಿಳಿತ ಸಾಮಾನ್ಯ. ಹೀಗಾಗಿ ಪ್ರತಿ ಹೂಡಿಕೆಯಲ್ಲಿ ಕೌಶಲ್ಯ ಅತ್ಯಗತ್ಯ. ಹೂಡಿಕೆದಾರನ ವಯಸ್ಸು ಹೆಚ್ಚಾದಂತೆ ಈಕ್ವಿಟಿಗಳಲ್ಲಿ ಹೂಡಿಕೆಯನ್ನು ರದ್ದು ಮಾಡಬೇಕಾಗುತ್ತದೆ. ದರಗಳ ಏರಿಳಿತ ಮತ್ತು ಹೂಡಿಕೆದಾರನ ವಯಸ್ಸಿನ ಆಧಾರದ ಮೇಲೆ ಯೋಜನೆಗಳನ್ನು ಪಡೆದುಕೊಳ್ಳಬೇಕು. ಇದು ದೀರ್ಘಾವಧಿಯಲ್ಲಿ ನಿಮ್ಮ ಸಂಪತ್ತನ್ನು ಸೃಷ್ಟಿಸುವಲ್ಲಿ ಯಾವುದೇ ತೊಡಕಾಗದು.

ತೆರಿಗೆ ಹೊರೆ ಇರಬಾರದೇ?.. ನಿಮ್ಮ ಹೂಡಿಕೆಗೂ ತೆರಿಗೆ ಭಾರ ತಪ್ಪಿದ್ದಲ್ಲ. ಆಯಾ ದೇಶಗಳು ಯೋಜನೆಗಳ ಮೇಲೆ ಇಂತಿಷ್ಟು ತೆರಿಗೆ ಹಾಕುತ್ತವೆ. ಅದರಲ್ಲಿ ಕೆಲವೊಂದರಲ್ಲಿ ವಿನಾಯಿತಿ, ರಿಯಾಯಿತಿ ನೀಡಲಾಗಿರುತ್ತದೆ. ಅದನ್ನು ನೀವು ಗಮನಿಸಬೇಕು. ಎನ್​ಪಿಎಸ್​, ಇಪಿಎಫ್​ನಂತಹ ಯೋಜನೆಗಳಿಗೆ ತೆರಿಗೆ ತೀರಾ ಕಮ್ಮಿ ಇದೆ. ಇದು ಹೂಡಿಕೆಗೆ ಉತ್ತಮ ಅವಕಾಶ. ಬೇರೆಲ್ಲಾ ಯೋಜನೆಗಳಿಗೆ ಹೋಲಿಸಿದರೆ ಇವುಗಳಿಗೆ ತೆರಿಗೆ ಹೊರೆ ಕಡಿಮೆ.

ಇವೆಲ್ಲವುಗಳಿಗಿಂತ ಎನ್​ಪಿಎಸ್​ ಉತ್ತಮ ಆಯ್ಕೆ

  • ಈಕ್ವಿಟಿಗಳು, ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಭದ್ರತೆಗಳು ಸೇರಿ ಇತ್ಯಾದಿಗಳನ್ನು ಎನ್‌ಪಿಎಸ್‌ನಲ್ಲಿ ಸೇರಿಸಲಾಗಿದೆ. ವಯಸ್ಸು ಮತ್ತು ಮಾರುಕಟ್ಟೆ ಏರಿಳಿತ, ಸಕ್ರಿಯ ಅಥವಾ ಸ್ವಯಂ ಚಾಲಿತ ಆಯ್ಕೆಗಳಿವೆ.
  • ಹೂಡಿಕೆ ಯೋಜನೆಗಳ ಆಯ್ಕೆಯು ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ. ಆದ್ದರಿಂದ, ಎನ್​ಪಿಎಸ್​​ನಲ್ಲಿ ಈ ಅಪಾಯ ಕಡಿಮೆ.
  • ಇತರ ಫಂಡ್‌ಗಳ ನಿರ್ವಹಣಾ ವೆಚ್ಚಗಳಿಗೆ ಹೋಲಿಸಿದರೆ ಸುಮಾರು 1/15 ಕಡಿಮೆ ವೆಚ್ಚದಲ್ಲಿ ಎನ್​ಪಿಎಸ್​ನಲ್ಲಿ ಹೂಡಿಕೆ ಮಾಡಬಹುದು.
  • ದೀರ್ಘಾವಧಿಯವರೆಗೆ ಹೂಡಿಕೆಯನ್ನು ಮುಂದುವರಿಸುವುದರಿಂದ, ವಿವಿಧ ಯೋಜನೆಗಳಷ್ಟೇ ಲಾಭವನ್ನು ಇಲ್ಲಿ ಪಡೆಯಬಹುದು.
  • ಎನ್​ಪಿಎಸ್​ ಹೂಡಿಕೆಯಲ್ಲಿ 2 ಎರಡು ರೀತಿಯ ತೆರಿಗೆ ಪ್ರಯೋಜನಗಳಿವೆ. ಕೆಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಾರ್ಪೊರೇಟ್ NPS ನೀಡುತ್ತವೆ. ಮೂಲ ವೇತನದ ಶೇ.10 ರಷ್ಟನ್ನು ಕಾರ್ಪೊರೇಟ್ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಬಹುದು. ಇದು ಸೆಕ್ಷನ್ 80CCD (2) ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಹಳೆಯ ತೆರಿಗೆ ಪದ್ಧತಿಯಲ್ಲಾದರೆ, ಸೆಕ್ಷನ್ 80CCD (1B) ಅಡಿಯಲ್ಲಿ 50,000 ರೂ.ವರೆಗೆ ಹೂಡಿಕೆ ಮಾಡಬಹುದು. ಇದು ಸೆಕ್ಷನ್ 80 C ಮಿತಿ 1,50,000 ರೂ.ಗೆ ಇರುತ್ತದೆ. ಇದು ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ.
  • NPS ಅನ್ನು PFRDA ಮೇಲ್ವಿಚಾರಣೆ ಮಾಡುತ್ತದೆ. ನಿಧಿ ವ್ಯವಸ್ಥಾಪಕರು ಈ ಹಣವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸ್ಪಷ್ಟವಾದ ಮಾರ್ಗಸೂಚಿಗಳನ್ನು ಹೊಂದಿದ್ದಾರೆ. ಆದ್ದರಿಂದ, ಹೂಡಿಕೆಯಲ್ಲಿ ಯಾವುದೇ ಅಪಾಯಗಳಿಲ್ಲ.

ಇದನ್ನೂ ಓದಿ: ಕಾಲ್ ಸೆಂಟರ್, ಡೆಲಿವರಿ ಉದ್ಯೋಗಗಳಿಗೆ ಹೆಚ್ಚಿದ ಬೇಡಿಕೆ: ಮುಂಬೈ, ಬೆಂಗಳೂರುಗಳಲ್ಲಿ ಅತ್ಯಧಿಕ ನೇಮಕಾತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.