ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಟ್ವಿಟರ್ ಸ್ವಾಧೀನ ಒಪ್ಪಂದದಲ್ಲಿ ನಾಟಕೀಯ ಬೆಳವಣಿಗೆಗಳ ನಂತರ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಶುಕ್ರವಾರ ಮೈಕ್ರೋಬ್ಲಾಗಿಂಗ್ ದೈತ್ಯ ಟ್ವಿಟರ್ ನೇತೃತ್ವವನ್ನು ಅಧಿಕೃತವಾಗಿ ವಹಿಸಿಕೊಂಡಿದ್ದಾರೆ. 'ಚೀಫ್ ಟ್ವಿಟ್' ಆಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮಾಡಿದ ಮೊದಲ ಕೆಲಸವೆಂದರೆ ಅದರ ಹಿಂದಿನ ಸಿಇಒ ಪರಾಗ್ ಅಗರ್ವಾಲ್ ಮತ್ತು ಇತರ ಮೂವರು ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ. ಅವರು ಈ ಹಿಂದೆ 'ಟ್ವಿಟರ್‌ನಲ್ಲಿ ಶೇ 75ರಷ್ಟು ಸಿಬ್ಬಂದಿಯನ್ನು ವಜಾ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು.
ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಹಣಕಾಸು ಮುಖ್ಯಸ್ಥ ನೆಡ್ ಸೆಗಲ್ ಅವರು ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಈಗಾಗಲೇ ಟ್ವಿಟರ್ನ ಪ್ರಧಾನ ಕಚೇರಿಯನ್ನು ತೊರೆದಿದ್ದಾರೆ. ಮಸ್ಕ್ ಅವರ ನಿರೀಕ್ಷಿತ ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅವರ ಕರ್ತವ್ಯದಿಂದ ಮುಕ್ತಗೊಳಿಸುತ್ತಿದ್ದು, ಶುದ್ಧೀಕರಣವನ್ನು ಪ್ರಾರಂಭಿಸಿದ್ದಾರೆ. ಕಾನೂನು ನೀತಿ, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನೂ ಆ ಸ್ಥಾನದಿಂದ ವಜಾ ಮಾಡಲಾಗಿದೆ.
ಇದನ್ನು ಓದಿ:ಕೈಯ್ಯಲ್ಲಿ ಸಿಂಕ್ ಹಿಡಿದು ಟ್ವಿಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಎಲಾನ್ ಮಸ್ಕ್
ಆಗರ್ಭ ಶ್ರೀಮಂತ ಮಸ್ಕ್ ಟ್ವಿಟರ್ ಜತೆಗಿನ ಒಪ್ಪಂದವನ್ನು ಅಂತಿಮಗೊಳಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಯೋಚನೆ ಮಾಡುತ್ತಿದ್ದರು. ಆದರೆ ಅಂತಿಮವಾಗಿ ಟ್ವಿಟರ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಮಸ್ಕ್ ಹಾಗೂ ಪರಾಗ್ ಅಗರವಾಲ್ ನಡುವೆ ಆಗಾಗ್ಗೆ ವಾದ- ಪ್ರತಿವಾದಗಳ ಸರಣಿ ನಡೆಯುತ್ತಲೇ ಸಾಗಿತ್ತು. ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ಇಬ್ಬರ ನಡುವೆ ಸೌಹಾರ್ದಯುತ ಸಂಬಂಧ ಇರಲಿಲ್ಲ. ಕಾನೂನು ಕಾರಣಗಳಿಗಾಗಿ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಾದ ಇಬ್ಬರ ನಡುವಿನ ಟ್ವೀಟ್ ವಾರ ಮುಂದುವರಿದೇ ಇತ್ತು.
ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ಅವರು ಕೆಳಗಿಳಿದ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಅಗರ್ವಾಲ್ ಟ್ವಿಟರ್ ಸಿಇಒ ಆಗಿ ನೇಮಕಗೊಂಡಿದ್ದರು. ಐಐಟಿ ಬಾಂಬೆ ಮತ್ತು ಸ್ಟ್ಯಾನ್‌ಫೋರ್ಡ್ ಹಳೆಯ ವಿದ್ಯಾರ್ಥಿ ಆಗಿರುವ ಅಗರವಾಲ್ ಕಂಪನಿಯಲ್ಲಿ 1,000 ಕ್ಕಿಂತ ಕಡಿಮೆ ಉದ್ಯೋಗಿಗಳಿದ್ದಾಗ ಒಂದು ದಶಕದ ಹಿಂದೆ ಟ್ವಿಟರ್‌ಗೆ ಸೇರಿದ್ದರು.
ಇದನ್ನು ಓದಿ: ಸಾಮೂಹಿಕ ವಜಾ ಕ್ರಮಕ್ಕೆ ಟ್ವಿಟರ್ ಉದ್ಯೋಗಿಗಳ ಪ್ರತಿರೋಧ: ಮಸ್ಕ್ಗೆ ಎಚ್ಚರಿಕೆ ಪತ್ರ