ETV Bharat / business

Stock Market: ಆರಂಭಿಕ ಕುಸಿತದ ನಂತರ ಸೆನ್ಸೆಕ್ಸ್ 137 & ನಿಫ್ಟಿ 30 ಪಾಯಿಂಟ್​ ಏರಿಕೆ

author img

By

Published : Aug 16, 2023, 6:05 PM IST

Stock Market Today: ಭಾರತದ ಷೇರು ಮಾರುಕಟ್ಟೆಗಳು ಬುಧವಾರ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿವೆ.

Sensex, Nifty End In Green
Sensex, Nifty End In Green

ಮುಂಬೈ : ಭಾರತೀಯ ಷೇರು ಮಾರುಕಟ್ಟೆ ಬುಧವಾರದ ವಹಿವಾಟಿನಲ್ಲಿ ಸಕಾರಾತ್ಮಕ ಟಿಪ್ಪಣಿಯಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿತು. ಸೆನ್ಸೆಕ್ಸ್ 137.50 ಪಾಯಿಂಟ್ ಅಥವಾ ಶೇಕಡಾ 0.21 ರಷ್ಟು ಏರಿಕೆಯಾಗಿ 65,539.42 ಕ್ಕೆ ತಲುಪಿದೆ ಮತ್ತು ನಿಫ್ಟಿ 30.50 ಪಾಯಿಂಟ್ ಅಥವಾ ಶೇಕಡಾ 0.16 ಏರಿಕೆಯಾಗಿ 19,465 ಕ್ಕೆ ತಲುಪಿದೆ.

ಗೆದ್ದವರು, ಬಿದ್ದವರು: ಅಲ್ಟ್ರಾಟೆಕ್ ಸಿಮೆಂಟ್, ಅಪೊಲೊ ಆಸ್ಪತ್ರೆ, ಎನ್​ಟಿಪಿಸಿ, ಇನ್ಫೋಸಿಸ್ ಮತ್ತು ಟಾಟಾ ಮೋಟಾರ್ಸ್ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿದ್ದು, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಎಚ್​ಡಿಎಫ್​ಸಿ ಲೈಫ್ ಮತ್ತು ಭಾರ್ತಿ ಏರ್​ಟೆಲ್ ನಷ್ಟ ಅನುಭವಿಸಿದವು.

ಬ್ಯಾಂಕ್ ಮತ್ತು ಮೆಟಲ್ ಹೊರತುಪಡಿಸಿ ಎಲ್ಲಾ ವಲಯಗಳು ಏರಿಕೆಯಲ್ಲಿ ಕೊನೆಗೊಂಡವು. ಆಟೋ, ವಿದ್ಯುತ್, ರಿಯಾಲ್ಟಿ, ಐಟಿ, ಫಾರ್ಮಾ ಮತ್ತು ಬಂಡವಾಳ ಸರಕುಗಳು ಶೇ 0.5 ರಿಂದ ಶೇ 1 ರಷ್ಟು ಏರಿಕೆಯಾಗಿವೆ. ಸುಮಾರು 1741 ಷೇರುಗಳು ಏರಿಕೆಯಾದರೆ, 1763 ಷೇರುಗಳು ಕುಸಿದವು ಮತ್ತು 132 ಷೇರುಗಳು ಯಾವುದೇ ಬದಲಾವಣೆ ಆಗಲಿಲ್ಲ. ಬಿಎಸ್ಇ ಮಿಡ್​ಕ್ಯಾಪ್ ಸೂಚ್ಯಂಕವು ಶೇಕಡಾ 0.2 ರಷ್ಟು ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕವು ಶೇಕಡಾ 0.5 ರಷ್ಟು ಏರಿಕೆಯಾಗಿವೆ.

ಹಿಂಡಾಲ್ಕೊ ಇಂಡಸ್ಟ್ರೀಸ್, ಎಚ್​ಡಿಎಫ್​​ಸಿ ಬ್ಯಾಂಕ್, ದಿವಿಸ್ ಲ್ಯಾಬ್ಸ್, ಐಷರ್ ಮೋಟಾರ್ಸ್ ಮತ್ತು ಎಚ್​ಡಿಎಫ್​ಸಿ ಲೈಫ್ ನಿಫ್ಟಿಯಲ್ಲಿ ಪ್ರಮುಖ ಕುಸಿತ ಕಂಡ ಷೇರುಗಳಾಗಿದ್ದು, ಇನ್ಫೋಸಿಸ್, ಟೆಕ್ ಮಹೀಂದ್ರಾ, ಐಟಿಸಿ, ಎಚ್​ಸಿಎಲ್​ ಟೆಕ್ನಾಲಜೀಸ್ ಮತ್ತು ಲಾರ್ಸನ್ ಅಂಡ್ ಟೂಬ್ರೊ ಲಾಭ ಗಳಿಸಿದವು.

ದುರ್ಬಲ ಜಾಗತಿಕ ಸೂಚನೆಗಳ ನಡುವೆ ಬುಧವಾರ ಮಾರುಕಟ್ಟೆ ಇಳಿಕೆಯೊಂದಿಗೆ ಪ್ರಾರಂಭವಾಯಿತು. ಆದರೆ ಆರಂಭಿಕ ಗಂಟೆಯಲ್ಲಿ ಚೇತರಿಸಿಕೊಂಡಿತು. ಸೆನ್ಸೆಕ್ಸ್ 285.44 ಪಾಯಿಂಟ್ ಅಥವಾ ಶೇಕಡಾ 0.44 ರಷ್ಟು ಕುಸಿದು 65,116.48 ಕ್ಕೆ ತಲುಪಿತ್ತು ಮತ್ತು ನಿಫ್ಟಿ 100.10 ಪಾಯಿಂಟ್ ಅಥವಾ 0.52 ಶೇಕಡಾ ಕುಸಿದು 19,334.40 ಕ್ಕೆ ತಲುಪಿತ್ತು. ದೇಶೀಯ ಚಿಲ್ಲರೆ ಹಣದುಬ್ಬರ ಹೆಚ್ಚಾಗಬಹುದು ಎಂಬ ಸೂಚನೆಗಳ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಗಳು ಬುಧವಾರದಂದು ಹೆಚ್ಚಿನ ಅವಧಿಗೆ ಇಳಿಕೆಯಲ್ಲಿಯೇ ವಹಿವಾಟು ನಡೆಸಿ ನಂತರ ಅಂತಿಮ ಗಂಟೆಯಲ್ಲಿ ಏರಿಕೆ ಕಂಡವು.

ಭಾರತದ ಸಿಪಿಐ ಹಣದುಬ್ಬರವು ಜುಲೈ 2023 ರಲ್ಲಿ 15 ತಿಂಗಳ ಗರಿಷ್ಠವಾದ ಶೇಕಡಾ 7.44 ಕ್ಕೆ ಏರಿದೆ. ಜುಲೈ ಸಿಪಿಐ ಮಟ್ಟವು ಐದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗರಿಷ್ಠ ಸಹಿಷ್ಣುತೆಯ ಮಿತಿಯಾದ ಶೇ 6 ನ್ನು ಮೀರಿದೆ. ಜುಲೈನಲ್ಲಿ ಸಿಎಫ್​​ಪಿಐ ಶೇ 11.51 ಕ್ಕೆ ಏರಿದೆ. ಇದು ಅಕ್ಟೋಬರ್ 2020 ರ ನಂತರದ ಗರಿಷ್ಠ ಮಟ್ಟವಾಗಿದೆ. ಚೀನಾದ ನಕಾರಾತ್ಮಕ ಆರ್ಥಿಕ ಡೇಟಾ ಮತ್ತು ಯುಎಸ್ ಆರ್ಥಿಕತೆಯ ಭವಿಷ್ಯದ ಬಗ್ಗೆ ಆತಂಕಗಳ ನಡುವೆ ಜಾಗತಿಕ ಷೇರುಗಳು ಬುಧವಾರ ಮಿಶ್ರ ರೀತಿಯಲ್ಲಿ ವಹಿವಾಟು ನಡೆಸುತ್ತಿವೆ.

ಇದನ್ನೂ ಓದಿ : Nepal: ಅಕ್ಕಿ, ಭತ್ತ ಮತ್ತು ಸಕ್ಕರೆ ನೀಡುವಂತೆ ಭಾರತಕ್ಕೆ ನೇಪಾಳ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.