ಮುಂಬೈ: ಜಾಗತಿಕ ಮಾರುಕಟ್ಟೆ ದುರ್ಬಲಗೊಂಡ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯ ಮೇಲೂ ಬೀರಿದೆ. ಇಂದು ಆರಂಭಿಕ ವಹಿವಾಟಿನಲ್ಲೇ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,154.78 ಅಂಶ ಕುಸಿಯಿತು.
ನಿರಂತರ ವಿದೇಶಿ ಹೊರಹರಿವು ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಷೇರುದಾರರ ಭಾವನೆಯನ್ನು ಕುಗ್ಗಿಸಿದೆ. 30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ 1,154.78 ಅಂಶಗಳ ಇಳಿಕೆಯೊಂದಿಗೆ 53,053.75ರಲ್ಲಿ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 335.65 ಅಂಶ ಕುಸಿದು 15,904.65 ರಲ್ಲಿದೆ.
ಟೆಕ್ ಮಹೀಂದ್ರಾ, ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್, ವಿಪ್ರೋ, ಟಾಟಾ ಸ್ಟೀಲ್, ಹೆಚ್‌ಸಿಎಲ್ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಕ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ. ಐಟಿಸಿ ಕಂಪನಿ ಮಾತ್ರ ಲಾಭದಾಯಕವಾಗಿ ಹೊರಹೊಮ್ಮಿದೆ.
ಯುಎಸ್ ಷೇರು ವಿನಿಮಯ ಕೇಂದ್ರಗಳು ಬುಧವಾರ ಗಣನೀಯವಾಗಿ ಇಳಿಕೆ ಕಂಡಿದ್ದವು. ಹಣದುಬ್ಬರದ ಭಯ ಹೆಚ್ಚಾಗುತ್ತಿದ್ದಂತೆ ಅಲ್ಲಿನ ಮಾರುಕಟ್ಟೆಗಳು ಜೂನ್ 2020 ರಿಂದ ಕುಸಿತದ ಹಾದಿ ಹಿಡಿದಿದೆ ಎಂದು ಹೆಮ್ ಸೆಕ್ಯುರಿಟೀಸ್‌ನ ಪಿಎಂಎಸ್ ಮುಖ್ಯಸ್ಥ ಮೋಹಿತ್ ನಿಗಮ್ ಹೇಳಿದರು. ಅಂತರರಾಷ್ಟ್ರೀಯ ತೈಲ ಬೆಂಚ್‌ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 1.61 ರಷ್ಟು ಏರಿಕೆಯಾಗಿದ್ದು, 110.87 ಡಾಲರ್ಗೆ ತಲುಪಿದೆ.