ETV Bharat / business

ಕೇಂದ್ರ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ: ಔಷಧಗಳ ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ

2023ರ ಕೇಂದ್ರ ಬಜೆಟ್ ಆರೋಗ್ಯ ಕ್ಷೇತ್ರಕ್ಕೆ ಒತ್ತು- ಆರೋಗ್ಯ ವಲಯಕ್ಕೆ ಹೊಸ ಯೋಜನೆಗಳ ಘೋಷಣೆ- ವರ್ಧಿತ ಐಸಿಎಂಆರ್ ಸೌಲಭ್ಯಗಳು- ವೈದ್ಯಕೀಯ ಸೌಲಭ್ಯಗಳ ಸಂಶೋಧನೆ

India Budget 2023
ಕೇಂದ್ರ ಬಜೆಟ್​
author img

By

Published : Feb 1, 2023, 1:44 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಆರೋಗ್ಯದ ವಿಷಯದಲ್ಲಿ, ಬಜೆಟ್ ಹೊಸ ನರ್ಸಿಂಗ್ ಕಾಲೇಜುಗಳಿಗೆ ವರ್ಧಿತ ಐಸಿಎಂಆರ್ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

2015ರಿಂದ ಸ್ಥಾಪಿಸಲಾಗಿರುವ ಒಟ್ಟು 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಸೀತಾರಾಮನ್ ತಿಳಿಸಿದ ಅವರು, 2047ರ ವೇಳೆಗೆ ಸಿಕಲ್ ಸೆಲ್ ಅನೀಮಿಯಾವನ್ನು ತೊಡೆದುಹಾಕಲು ಸರ್ಕಾರವು ಚಿಂತಿಸಿದೆ. ವೈದ್ಯಕೀಯ ಸಂಶೋಧನೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲ ಐಸಿಎಂಆರ್ ಲ್ಯಾಬ್‌ಗಳಲ್ಲಿ ಸಂಶೋಧನೆಗೆ ಪೂರಕವಾಗಿರುತ್ತವೆ. ಎಲ್ಲ ಸೆಂಟರ್ ಆಫ್ ಎಕ್ಸಲೆನ್ಸ್‌ ಕೇಂದ್ರಗಳಲ್ಲಿ ಔಷಧಗಳ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಅನುಕೂಲವಾಗುತ್ತವೆ.

ಆರೋಗ್ಯ ರಕ್ಷಣೆ ಹಾಗೂ ಮೂಲಸೌಕರ್ಯಗಳಿಗೆ ಆದ್ಯತೆ: "ಆಯ್ದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಲ್ಯಾಬ್‌ಗಳಲ್ಲಿನ ಸೌಲಭ್ಯಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ಸಂಶೋಧನೆಗೆ ಲಭ್ಯವಾಗುವಂತೆ ಮಾಡಲಾಗುವುದು" ಎಂದು ಹಣಕಾಸು ಸಚಿವರು ಹೇಳಿದರು.

2022-23ರ ಕೇಂದ್ರ ಬಜೆಟ್‌ನಲ್ಲಿ, ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ 86,200 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. 2020-21ರ ಹಣಕಾಸು ವರ್ಷದಲ್ಲಿ 73,932 ಕೋಟಿಗೆ ಹೋಲಿಕೆ ಮಾಡಿದರೆ, 16.5 ಶೇಕಡಾ ಹೆಚ್ಚಳವಾಗಿದೆ. ಹೆಚ್ಚಾಗಿರುವ ಹಂಚಿಕೆಯನ್ನು ಕೇಂದ್ರ ಪ್ರಾಯೋಜಿತ ಸಾರ್ವಜನಿಕರ ಸುಸ್ಥಿರ ಆರೋಗ್ಯಕ್ಕೆ ಮೀಸಲಿಡಲಾಗಿದೆ. ಮೂಲಸೌಕರ್ಯ ಒದಗಿಸಲು ಹಾಗೂ ದೇಶದ ಹೆಚ್ಚುತ್ತಿರುವ ಆರೋಗ್ಯ ಅಗತ್ಯಗಳನ್ನು ನಿರ್ವಹಿಸಲು ಈ ಆರೋಗ್ಯ ಯೋಜನೆಗಳ ಪೂರಕವಾಗಿವೆ. 2023ರ ಬಜೆಟ್‌ನಿಂದ ಆರೋಗ್ಯ ಕ್ಷೇತ್ರದ ಪ್ರಮುಖ ನಿರೀಕ್ಷೆಯೆಂದರೆ ಆರೋಗ್ಯ ರಕ್ಷಣೆ ಹಾಗೂ ಮೂಲಸೌಕರ್ಯಗಳ ಮೇಲಿನ ವೆಚ್ಚದಲ್ಲಿ ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರವು ಈ ಬಗ್ಗೆ ಹೆಚ್ಚು ಗಮನಹರಿಸಿದೆ.

ಇದನ್ನು ಓದಿ: ಕೇಂದ್ರ ಬಜೆಟ್​ನಲ್ಲಿ ಮಹತ್ವದ ಘೋಷಣೆ: ಕೃಷಿ ಕ್ರೆಡಿಟ್ ಗುರಿ 20 ಲಕ್ಷ ಕೋಟಿವರೆಗೆ ವಿಸ್ತರಣೆ

ಜನರ ಕ್ಷೇಮಕ್ಕಾಗಿ ಉತ್ತಮ ಆಡಳಿತದ ಪರಿಕಲ್ಪನೆ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ವಿಷಯದ ಕುರಿತು ಇತ್ತೀಚೆಗೆ ಬಜೆಟ್‌ನಲ್ಲಿ ಸೇರಿಸಲು ಸರ್ಕಾರಕ್ಕೆ ಸಲಹೆಗಳು ಬಂದಿದ್ದವು. ಅದನ್ನು ಪರಿಗಣಿಸಲಾಗಿದ್ದು, ಐಎಂಎ ಬಜೆಟ್‌ನಲ್ಲಿ ಸೇರಿಸಲು ಒಟ್ಟಾರೆ ಹನ್ನೆರಡು ಸಲಹೆಗಳನ್ನು ಸಲ್ಲಿಸಿತ್ತು. ಅವುಗಳಲ್ಲಿ ಕೆಲವು ಸೇರಿಲಾಗಿದೆ.

ಸುರಕ್ಷಿತ ನೀರು, ನೈರ್ಮಲ್ಯ, ಪೋಷಣೆ, ಪ್ರಾಥಮಿಕ ಶಿಕ್ಷಣ ಮತ್ತು ಬಡತನದ ನಿರ್ಮೂಲನೆ ಸೇರಿದಂತೆ ಉತ್ತಮ ಆರೋಗ್ಯ ವಿಚಾರಗಳು ರಾಷ್ಟ್ರ ಮೂಲಾಧಾರವಾಗಿವೆ. ಜನರ ಕ್ಷೇಮಕ್ಕಾಗಿ ಉತ್ತಮ ಆಡಳಿತದ ಪರಿಕಲ್ಪನೆಯನ್ನು ಹೊಂದಲಾಗಿದೆ. ಈ ಸೇವೆಗಳನ್ನು (ಕ್ಲಿನಿಕಲ್, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನಿರ್ಧಾರಕಗಳು) ಒಂದೇ ಸೂರಿನಡಿ ನೀಡಲು ಗಮನಹರಿಸಲಾಗಿದೆ. ಜನರ ಕ್ಷೇಮಕ್ಕಾಗಿ ಕನಿಷ್ಠ ಕುಡಿಯುವ ನೀರು, ನೈರ್ಮಲ್ಯ ಮತ್ತು ಬಡತನ ನಿರ್ಮೂಲನೆ ವಿಷಯಗಳನ್ನು ಆರೋಗ್ಯ ಸಚಿವಾಲಯಯಡಿ ಸೇರಿಸಲಾಗುತ್ತದೆ ಎಂದು ಹಣಕಾಸು ಸಚಿವೆ ತಿಳಿಸಿದರು.

ಇದನ್ನೂ ಓದಿ: ಕೇಂದ್ರ ಬಜೆಟ್​ 2023: 7 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.