ಹೈದರಾಬಾದ್: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಇತ್ತೀಚೆಗೆ ರಾಷ್ಟ್ರೀಯ ಪಿಂಚಣಿ ನಿಧಿಯಲ್ಲಿ ಹೊಸ ನಿಯಮಗಳನ್ನು ಘೋಷಿಸಿದೆ. ಈ ಹೊಸ ನಿಯಮದಡಿ (ಪಿಎಫ್ಆರ್ಡಿಎ) ತನ್ನ ಗ್ರಾಹಕರಿಗೆ ವ್ಯವಸ್ಥಿತ ಹಿಂದೆಗೆದುಕೊಳ್ಳುವ (ಎಸ್ಎಲ್ ಡಬ್ಲ್ಯೂ) ಸೌಲಭ್ಯವನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ. ಇದು ಗ್ರಾಹಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ತಮ್ಮ ಹೂಡಿಕೆಯಿಂದ ಹಣವನ್ನು ಒಂದೇ ಬಾರಿಗೆ ಹಿಂಪಡೆಯುವ ಬದಲಾಗಿ, ನಿಯಮಿತವಾಗಿ ಪಡೆಯಲು ಅವಕಾಶ ನೀಡಿದ್ದು, ಇದರಿಂದ ಉದ್ಯೋಗಿಗಳು ಪ್ರಯೋಜನ ಪಡೆಯುತ್ತಾರೆ. ಪರಿಷ್ಕೃತ ನಿಯಮದ ಅನುಸಾರ, ಚಂದಾದಾರರು ಅವರ ಎನ್ಪಿಎಸ್ ಮೆಚ್ಯೂರಿಟಿ ಹಣದಲ್ಲಿ ಶೇ 60ರಷ್ಟು ಹಣವನ್ನು ಕಂತುಗಳ ಮೂಲಕ ಹಿಂತೆಗೆದುಕೊಳ್ಳಬಹುದಾಗಿದೆ.
-
Mandatory Penny drop verification - Instant Bank Account Verification for Enhanced Due Diligence w.r.t. Exit/Withdrawal requests and for modifying the subscriber's bank account details
— National Pension System Trust (@nps_trust) October 26, 2023 " class="align-text-top noRightClick twitterSection" data="
Please visit https://t.co/IPSoGjX0zT for more details. 🌐#PensionHaiToTensionNahi pic.twitter.com/RMx4aLjIYa
">Mandatory Penny drop verification - Instant Bank Account Verification for Enhanced Due Diligence w.r.t. Exit/Withdrawal requests and for modifying the subscriber's bank account details
— National Pension System Trust (@nps_trust) October 26, 2023
Please visit https://t.co/IPSoGjX0zT for more details. 🌐#PensionHaiToTensionNahi pic.twitter.com/RMx4aLjIYaMandatory Penny drop verification - Instant Bank Account Verification for Enhanced Due Diligence w.r.t. Exit/Withdrawal requests and for modifying the subscriber's bank account details
— National Pension System Trust (@nps_trust) October 26, 2023
Please visit https://t.co/IPSoGjX0zT for more details. 🌐#PensionHaiToTensionNahi pic.twitter.com/RMx4aLjIYa
ಹೊಸ ನಿಯಮ: ನಿಯಮಿತ ವ್ಯವಸ್ಥಿತ ಲಂಪ್ಸಮ್ ಹಿಂದೆಗೆದುಕೊಳ್ಳುವಿಕೆ ಮೂಲಕ ಗ್ರಾಹಕರು ಮಾಸಿಕ, ತ್ರೈಮಾಸಿಕ, ಅರ್ಧ- ವಾರ್ಷಿಕ ಮತ್ತು ವಾರ್ಷಿಕ ಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎನ್ಪಿಎಸ್ ವಾಪಸಾತಿಗಳನ್ನು ಪಡೆಯುವ ಸಂಬಂಧ ಅದನ್ನು ಪಾವತಿಯ ಆಯ್ಕೆ ಮಾಡುವ ಸಂದರ್ಭದಲ್ಲಿ ಅಧಿಕೃತ ಮಾಡಬೇಕಿದೆ. ಈ ಹಿಂದೆ ನೀಡಿದ ನಿಯಮಕ್ಕೆ ಕೊಂಚ ವಿನಾಯಿತಿ ನೀಡಿ ಶೇ 60ರಷ್ಟು ಹಣವನ್ನು ಹೊಸ ವ್ಯವಸ್ಥಿತ ಮೊತ್ತದ ಮೂಲಕ ಪಡೆಯಬಹುದು. 40ರಷ್ಟು ಕಾರ್ಪಸ್ ಅನ್ನು ವರ್ಷಾಶನ ಪಡೆಯಬಹುದಾಗಿದೆ. ಈ ಹೊಸ ವ್ಯವಸ್ಥೆಯನ್ನು ನವೀಕರಣ ಮಾಡಲು ಎನ್ಪಿಎಸ್ ಹೂಡಿಕೆಗಳಿಗೆ ಕೆವೈಸಿ ಸಂಬಂಧಿತ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಪಿಎಫ್ಆರ್ಡಿಎ ಕೇಂದ್ರಿಯ ದಾಖಲೆ ಕೀಪಿಂಗ್ ಏಜೆನ್ಸಿಗಳಿಗೆ ಕೋರಿದೆ.
ಪಿಎಫ್ಆರ್ಡಿಎ ಅಕ್ಟೋಬರ್ 27, 2023ರಲ್ಲಿ ಹೊರಡಿಸಿದ ಹೊಸ ಸುತ್ತೋಲೆ ಅನುಸಾರ, ಒಟ್ಟು ಮೊತ್ತವನ್ನು ಹಿಂಪಡೆಯುವ ಆಯ್ಕೆಯ ವಿವರಗಳನ್ನು ಕೇಳಲಾಗಿದೆ. ಜೊತೆಗೆ ಹೂಡಿಕೆದಾರರಿಗೆ ಎನ್ಪಿಎಸ್ ಕಾರ್ಪಸ್ ಫಂಡ್ನ ಶೇ 60ರಷ್ಟು ಮುಕ್ತಾಯದ ಮೊತ್ತದ ಮೇಲೆ ಹಿಂಪಡೆಯಬಹುದಾಗಿದೆ.
ಎಸ್ಎಲ್ಡಬ್ಲ್ಯೂ ಪ್ರಯೋಜನ: ಎಸ್ಎಲ್ಡಬ್ಲ್ಯೂ ಹಣದ ನಿರಂತರ ಹರಿವನ್ನು ಮಾಡುವಲ್ಲಿ ಹಲವು ಪ್ರಯೋಜನವನ್ನು ಹೊಂದಿದೆ. ಇದು ವಾರ್ಷಿಕದ ಮೇಲೆ ಹೆಚ್ಚುವರಿ ಆದಾಯವನ್ನು ತರುತ್ತದೆ. ವಿತ್ಡ್ರಾ ಸೇರಿದಂತೆ ಸಂಪತ್ತಿನ ಸೃಷ್ಟಿ ಮತ್ತು ತೆರಿಗೆ ಪ್ರಯೋಜನವನ್ನೂ ಕೂಡಾ ಹೊಂದಿದೆ. ಎನ್ಪಿಎಸ್ ಚಂದದಾರಿಕೆಯು ಮುಕ್ತ ಲಂಪ್ಸಮ್ ಜೊತೆಗೆ ವ್ಯವಸ್ಥಿತ ವಿತ್ಡ್ರಾ ಹೊಂದಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಡೆವಲಪ್ಮೆಂಟ್ ಅಧಾರಿಟಿ (ಪಿಎಫ್ಆರ್ಡಿಎ)ಯ ವಾರ್ಷಿಕ ನಿಯಮದಲ್ಲಿ ಯಾವುದೇ ವ್ಯತ್ಯಾಸ ಇಲ್ಲ.
ಪರಿಶೀಲನೆ ಕಡ್ಡಾಯ: ಪಿಎಫ್ಆರ್ಡಿಎ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿ ಹಣವನ್ನು ಹಿಂಪಡೆಯಲು ಷೇರುದಾರರಿಗೆ ಪೆನ್ನಿ ಡ್ರಾಪ್ ಪರಿಶೀಲನೆ ಕಡ್ಡಾಯವಾಗಿದೆ. ಇದು ಷೇರುದಾರರಿಂದ ಹಣವನ್ನು ಸರಿಯಾದ ಸಮಯಕ್ಕೆ ವರ್ಗಾವಣೆಯ ಭರವಸೆಯನ್ನು ನೀಡುತ್ತದೆ. ಈ ಪೆನ್ನಿ ಡ್ರಾಪ್ ಪ್ರಕ್ರಿಯೆ, ಬ್ಯಾಂಕ್ ಉಳಿತಾಯ ಖಾತೆ ವ್ಯವಸ್ಥೆಯನ್ನು ಸಿಆರ್ಎ ಗಮನಿಸಲಿದೆ. ಎನ್ಪಿಎಸ್ ಸರ್ಕಾರ ಬೆಂಬಲಿತ ಪಿಂಚಣಿ ವ್ಯವಸ್ಥೆಯಾಗಿದ್ದು, ಇದನ್ನು ಜನವರಿ 2004ರಲ್ಲಿ ಸರ್ಕಾರದ ಉದ್ಯೋಗಿಗಳಿಗೆ ಶುರುಮಾಡಿದ ಯೋಜನೆಯಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಪ್ರಮುಖ ಹಣದುಬ್ಬರ ಶೇ 4.5ಕ್ಕೆ ಇಳಿಕೆ; ಹಣಕಾಸು ಸಚಿವಾಲಯ ಹೇಳಿಕೆ