ETV Bharat / business

ಚೀನಾದಲ್ಲಿ ಐಫೋನ್​ ಬ್ಯಾನ್ ಎಫೆಕ್ಸ್​; ಷೇರು ಕುಸಿತ, 200 ಬಿಲಿಯನ್ ಡಾಲರ್ ನಷ್ಟ - ಆ್ಯಪಲ್ ಷೇರುಗಳ ಮಾರಾಟಕ್ಕೆ ಹೂಡಿಕೆದಾರರು

ತನ್ನ ದೇಶದಲ್ಲಿ ಸರ್ಕಾರಿ ಉದ್ಯೋಗಿಗಳು ಐಫೋನ್ ಬಳಸದಂತೆ ಚೀನಾ ನಿಷೇಧ ಹೇರಿದ ನಂತರ ಆ್ಯಪಲ್ ಕಂಪನಿಯ ಷೇರುಗಳು ತೀವ್ರಗತಿಯಲ್ಲಿ ಕುಸಿದಿವೆ.

Apple shares tumble nearly $200 billion
Apple shares tumble nearly $200 billion
author img

By ETV Bharat Karnataka Team

Published : Sep 8, 2023, 4:02 PM IST

ನವದೆಹಲಿ: ಸರ್ಕಾರಿ ಒಡೆತನದ ಸಂಸ್ಥೆಗಳು ಮತ್ತು ಕಚೇರಿಗಳ ಉದ್ಯೋಗಿಗಳು ಐಫೋನ್​ಗಳನ್ನು ಬಳಸದಂತೆ ಚೀನಾ ನಿಷೇಧ ಹೇರಿದ ನಂತರ ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಇಂಕ್ ಷೇರುಗಳು ಸೆಪ್ಟೆಂಬರ್ 7 ರಂದು ತೀವ್ರವಾಗಿ ಕುಸಿದಿವೆ ಮತ್ತು ಕೇವಲ ಎರಡು ದಿನಗಳಲ್ಲಿ 200 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖ ಯುಎಸ್ ಈಕ್ವಿಟಿ ಸೂಚ್ಯಂಕಗಳಲ್ಲಿ, ಆ್ಯಪಲ್ ಅತಿದೊಡ್ಡ ಕಂಪನಿಯಾಗಿದೆ. ಆದರೆ, ಚೀನಾದಲ್ಲಿ ಎದುರಾದ ಸಮಸ್ಯೆಗಳ ಕಾರಣದಿಂದ ಆ್ಯಪಲ್ ಷೇರುಗಳ ಮಾರಾಟಕ್ಕೆ ಹೂಡಿಕೆದಾರರು ಮುಂದಾಗಿದ್ದಾರೆ. ಚೀನಾ ಆ್ಯಪಲ್​ನ ಅತಿದೊಡ್ಡ ಮಾರುಕಟ್ಟೆ ಹಾಗೂ ಉತ್ಪಾದನಾ ನೆಲೆಯೂ ಆಗಿರುವುದು ಗಮನಾರ್ಹ.

ಆದಾಗ್ಯೂ ಸರ್ಕಾರಿ ಉದ್ಯೋಗಿಗಳು ಆ್ಯಪಲ್ ಫೋನ್ ಬಳಸದಂತೆ ಚೀನಾ ಬಹಿರಂಗವಾಗಿ ಪ್ರಕಟಣೆ ಹೊರಡಿಸಿಲ್ಲ. ಆದರೆ, ಅಮೆರಿಕ ಮತ್ತು ಚೀನಾ ನಡುವಿನ ಅಂತಾರಾಷ್ಟ್ರೀಯ ತಿಕ್ಕಾಟದ ಮಧ್ಯೆ ಐಫೋನ್​ಗಳನ್ನು ಹ್ಯಾಕ್ ಮಾಡಿ ಅಮೆರಿಕ ತನ್ನ ವಿರುದ್ಧ ಬೇಹುಗಾರಿಕೆ ನಡೆಸಬಹುದು ಎಂಬ ಸಂಶಯ ಚೀನಾಕ್ಕಿದೆ ಎಂದು ವರದಿಗಳು ತಿಳಿಸಿವೆ.

ಐಫೋನ್​ಗಳನ್ನು ಕಚೇರಿಗೆ ತರದಂತೆ ಅಥವಾ ಕೆಲಸಕ್ಕಾಗಿ ಬಳಸದಂತೆ ಚೀನಾ ಕೇಂದ್ರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳಿಗೆ ಆದೇಶಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ನಿಷೇಧಗಳು ಎಷ್ಟು ವ್ಯಾಪಕವಾಗಿವೆ ಎಂಬುದು ಸ್ಪಷ್ಟವಾಗಿಲ್ಲ. ಈ ನಿಷೇಧವು ಇತರ ರಾಜ್ಯಗಳ ಕಂಪನಿಗಳು ಮತ್ತು ಸರ್ಕಾರಿ ಒಡೆತನದ ಸಂಸ್ಥೆಗಳಿಗೆ ವಿಸ್ತರಿಸಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಚೀನಾದ ಎಲ್ಲಾ ಸರ್ಕಾರಿ ನೌಕರರು ಐಫೋನ್ ಬಳಸುವುದನ್ನು ನಿಲ್ಲಿಸಿದ್ದೇ ಆದಲ್ಲಿ ಆ ದೇಶದಲ್ಲಿ ಐಫೋನ್​ಗಳ ಮಾರಾಟ ಶೇಕಡಾ 5ರಷ್ಟು ಕಡಿಮೆಯಾಗಲಿದೆ ಎನ್ನುತ್ತಾರೆ ವಿಶ್ಲೇಷಕರು. ಸರ್ಕಾರಿ ನೌಕರರು ಇನ್ನು ಮುಂದೆ ಸ್ಥಳೀಯವಾಗಿ ತಯಾರಾದ ಫೋನ್​ಗಳನ್ನೇ ಬಳಸಬೇಕೆಂದು ಚೀನಾ ಸರ್ಕಾರ ಕಡ್ಡಾಯ ಮಾಡಿದಲ್ಲಿ ಅದು ಐಫೋನ್ ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡಬಹುದಾಗಿದೆ.

ಅಮೆರಿಕದ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಬೀಜಿಂಗ್ ಯಾವುದೇ ಅಮೆರಿಕ ಕಂಪನಿಯನ್ನು ಸುಮ್ಮನೆ ಬಿಡಲು ಸಿದ್ಧವಿಲ್ಲ ಎಂದು ಹಲವಾರು ವಿಶ್ಲೇಷಕರು ಹೇಳಿದ್ದಾರೆ. ಚೀನಾದ ಸ್ಮಾರ್ಟ್​ಫೋನ್ ತಯಾರಕ ಕಂಪನಿ ಹುವಾವೇ ಮತ್ತು ಚೀನಾದ ಬೈಟ್​ ಡಾನ್ಸ್​ ಒಡೆತನದ ಶಾರ್ಟ್​ ವೀಡಿಯೊ ಪ್ಲಾಟ್​ಫಾರ್ಮ್​ ಟಿಕ್ ಟಾಕ್ ವಿರುದ್ಧ ಅಮೆರಿಕ ತನ್ನ ದೇಶದಲ್ಲಿ ನಿಷೇಧ ಹೇರಿತ್ತು. ಈಗ ಚೀನಾದ ಕ್ರಮವನ್ನು ಇದಕ್ಕೆ ಪ್ರತೀಕಾರದ ಕ್ರಮವಾಗಿ ನೋಡಲಾಗುತ್ತಿದೆ.

ಕಳೆದ ಒಂದು ದಶಕದಿಂದ ಚೀನಾ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಬ್ಯಾಂಕ್​ಗಳು ಸೇರಿದಂತೆ ಸರ್ಕಾರಿ-ಸಂಯೋಜಿತ ಸಂಸ್ಥೆಗಳಲ್ಲಿ ವಿದೇಶಿ ಸಾಫ್ಟ್​ವೇರ್ ಬದಲಾಗಿ ಸ್ಥಳೀಯವಾಗಿ ತಯಾರಾದ ಸಾಫ್ಟ್​​ವೇರ್​ಗಳನ್ನು ಬಳಸಲು ಚೀನಾ ಉತ್ತೇಜನ ನೀಡುತ್ತಿದೆ.( ಐಎಎನ್​ಎಸ್​)

ಇದನ್ನೂ ಓದಿ: X​ನಲ್ಲಿ ಬರೆಯುವುದು 'Tweet​' ಅಲ್ಲ, ಅದು 'Post'; ನಿಯಮ ಬದಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.