ETV Bharat / business

ಭಾರತದ ಕಲ್ಲಿದ್ದಲು ಉತ್ಪಾದನೆ ಶೇ 12ರಷ್ಟು ಹೆಚ್ಚಳ

author img

By ETV Bharat Karnataka Team

Published : Dec 28, 2023, 1:07 PM IST

ಭಾರತದ ಕಲ್ಲಿದ್ದಲು ಉತ್ಪಾದನೆ ಶೇ 12ರಷ್ಟು ಹೆಚ್ಚಾಗಿದೆ.

India's coal output rises 12.3% to 664.37 mn tonnes in FY 2023-24

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್ 2023 ರಿಂದ ಡಿಸೆಂಬರ್ 25 ರವರೆಗೆ) ದೇಶದ ಕಲ್ಲಿದ್ದಲು ಉತ್ಪಾದನೆ 664.37 ಮಿಲಿಯನ್ ಟನ್​ಗಳಿಗೆ (ಎಂಟಿ) ಏರಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ 591.64 ಮೆಟ್ರಿಕ್ ಟನ್​ಗೆ ಹೋಲಿಸಿದರೆ ಶೇಕಡಾ 12.29 ರಷ್ಟು ಹೆಚ್ಚಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

ಕಲ್ಲಿದ್ದಲು ರವಾನೆಗೆ ಸಂಬಂಧಿಸಿದಂತೆ, ಈ ಅವಧಿಯಲ್ಲಿ ಸಂಚಿತ ಸಾಧನೆ 692.84 ಮೆಟ್ರಿಕ್ ಟನ್ ಆಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 11.32 ರಷ್ಟು ಬೆಳವಣಿಗೆಯಾಗಿದೆ. ಇದಲ್ಲದೆ, ಏಪ್ರಿಲ್ 2023 ರಿಂದ ಡಿಸೆಂಬರ್ 25, 2023 ರವರೆಗೆ ವಿದ್ಯುತ್ ಕ್ಷೇತ್ರಕ್ಕೆ ಒಟ್ಟಾರೆ ಕಲ್ಲಿದ್ದಲು ರವಾನೆ ಶೇಕಡಾ 8.39 ರಷ್ಟು ಏರಿಕೆಯಾಗಿದ್ದು, 577.11 ಮೆಟ್ರಿಕ್ ಟನ್ ತಲುಪಿದೆ.

ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು, ಸಾರಿಗೆ ಇತ್ಯಾದಿಗಳು ಸೇರಿದಂತೆ ಡಿಸೆಂಬರ್ 25 ರ ವೇಳೆಗೆ ಒಟ್ಟಾರೆ ಕಲ್ಲಿದ್ದಲು ದಾಸ್ತಾನು ಸ್ಥಿತಿ 91.05 ಮೆಟ್ರಿಕ್ ಟನ್ ತಲುಪಿದೆ. ಇದು ಶೇಕಡಾ 21.57 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.

ಇದಲ್ಲದೆ, ಡಿಸೆಂಬರ್ 25 ರ ವೇಳೆಗೆ ಕೋಲ್ ಇಂಡಿಯಾ ಲಿಮಿಟೆಡ್​ನಲ್ಲಿ ಪಿಟ್​ಹೆಡ್ ಕಲ್ಲಿದ್ದಲು ದಾಸ್ತಾನು 47.29 ಮೆಟ್ರಿಕ್ ಟನ್ ಆಗಿದ್ದು, 25.12.22 ರಂದು ಇದ್ದ 30.88 ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹಕ್ಕೆ ಹೋಲಿಸಿದರೆ ಶೇಕಡಾ 53.02 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಪ್ರದರ್ಶಿಸಿದೆ ಎಂದು ಸಚಿವಾಲಯ ತಿಳಿಸಿದೆ.

"ಥರ್ಮಲ್ ವಿದ್ಯುತ್ ಸ್ಥಾವರಗಳಿಗೆ ಅಗತ್ಯವಾದಷ್ಟು ಕಲ್ಲಿದ್ದಲನ್ನು ಪೂರೈಸಲಾಗುತ್ತಿರುವುದರಿಂದ ವಿವಿಧ ಪಿಟ್​ಹೆಡ್​ಗಳಲ್ಲಿ ಕಲ್ಲಿದ್ದಲು ದಾಸ್ತಾನು ಉತ್ತಮ ಮಟ್ಟದಲ್ಲಿದೆ." ಎಂದು ಸಚಿವಾಲಯ ಹೇಳಿದೆ.

ಹೀಟರ್​ಗಳು ಮತ್ತು ಗೀಸರ್ ಗಳ ಬಳಕೆಯಿಂದಾಗಿ ಚಳಿಗಾಲದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಕೆ ಈ ತಿಂಗಳು ಕ್ರಮೇಣ ಹೆಚ್ಚಾಗಿದ್ದರೂ ಕಲ್ಲಿದ್ದಲು ದಾಸ್ತಾನು ಸಾಕಷ್ಟಿರುವುದು ನಿರಾಳತೆ ಮೂಡಿಸಿದೆ. ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 20 ರಂದು ಈ ಸ್ಥಾವರಗಳಲ್ಲಿ ದೇಶೀಯ ಕಲ್ಲಿದ್ದಲು ಬಳಕೆ 2.16 ಮಿಲಿಯನ್ ಟನ್ ಗಳಷ್ಟಿತ್ತು. ಇದು ಡಿಸೆಂಬರ್ 3 ರಂದು 1.86 ಮಿಲಿಯನ್ ಟನ್ ಗಳಷ್ಟಿತ್ತು.

ಇದನ್ನೂ ಓದಿ : ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.