ETV Bharat / business

Indian Startups: ಭಾರತೀಯ ಸ್ಟಾರ್ಟಪ್​ಗಳಿಗೆ ಶುಕ್ರದೆಸೆ; ಮತ್ತೆ ಫಂಡಿಂಗ್​​ಗೆ ಸಿದ್ಧರಾದ ಹೂಡಿಕೆದಾರರು

author img

By

Published : Aug 9, 2023, 3:58 PM IST

Indian startups: ಮುಂದಿನ ಆರು ತಿಂಗಳ ನಂತರ ಭಾರತದ ಸ್ಟಾರ್ಟಪ್​ಗಳಿಗೆ ಮತ್ತೆ ಹೂಡಿಕೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

Indian startups might see funding spring in 6-12 months

ನವದೆಹಲಿ : ಮುಂದಿನ 6 ರಿಂದ 8 ತಿಂಗಳಲ್ಲಿ ಭಾರತೀಯ ಸ್ಟಾರ್ಟಪ್​​ಗಳಿಗೆ ಫಂಡಿಂಗ್​ ಹರಿವು ಮತ್ತೆ ಪ್ರಾರಂಭವಾಗಬಹುದು ಎಂದು ಮೂವರಲ್ಲಿ ಇಬ್ಬರು (ಶೇ 50ರಷ್ಟು) ಹೂಡಿಕೆದಾರರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಫಂಡಿಂಗ್​​ ಕೊರತೆಯು ಶೀಘ್ರದಲ್ಲೇ ಕೊನೆಯಾಗಲಿದೆ ಎಂದು ಶೇ 17ರಷ್ಟು ಹೂಡಿಕೆದಾರರು ಹೇಳಿದ್ದರೆ, ಇನ್ನು ಕೆಲವರು ಫಂಡಿಂಗ್ ಮತ್ತೆ ಆರಂಭವಾಗಲು 12 ರಿಂದ 18 ತಿಂಗಳು ಬೇಕಾಗಬಹುದು ಎಂದಿದ್ದಾರೆ ಎಂದು ಬೆಂಗಳೂರು ಮೂಲದ ವಿಶ್ಲೇಷಕ ಸಂಸ್ಥೆ ರೆಡ್​ಸೀರ್ ಹೇಳಿದೆ.

ಒಟ್ಟಾರೆಯಾಗಿ ಯುಎಸ್, ಇಯು, ಯುಎಇ ಮತ್ತು ಜಪಾನ್ ದೇಶಗಳು ಭಾರತೀಯ ಸ್ಟಾರ್ಟಪ್​​​ಗಳಿಗೆ ಅತಿದೊಡ್ಡ ಧನಸಹಾಯದ ಮೂಲವಾಗಿವೆ. ಈ ದೇಶಗಳು ಒಟ್ಟು ಜಾಗತಿಕ ಫಂಡಿಂಗ್​ ನಿಧಿಯ ಶೇಕಡಾ 5 ಮತ್ತು ಒಟ್ಟು ಎಪಿಎಸಿ ನಿಧಿಯ ಶೇಕಡಾ 20 ರಷ್ಟು ಪಾಲು ಹೊಂದಿವೆ. ವರದಿಯ ಪ್ರಕಾರ, ಮುಂದಿನ ಯುನಿಕಾರ್ನ್​ಗಳು (ಸ್ಟಾರ್ಟಪ್​ಗಳು) ಡಿ 2 ಸಿ-ಬಿಪಿಸಿ, ಡಿ 2 ಸಿ-ಹೆಲ್ತ್ ಮತ್ತು ವೆಲ್​ನೆಸ್​, ಡಯಾಗ್ನೋಸ್ಟಿಕ್ಸ್ ಮತ್ತು ಕ್ಲಿನಿಕ್​ಗಳು, ಗೇಮಿಂಗ್ ಮತ್ತು ಅಪ್ಲಿಕೇಶನ್ ಸ್ಟುಡಿಯೋಗಳಂತಹ ಕ್ಷೇತ್ರಗಳಿಂದ ಹೊರಹೊಮ್ಮಲಿವೆ.

2017 ರಿಂದ 2020ರವರೆಗಿನ ಕ್ಯಾಲೆಂಡರ್​ ವರ್ಷಗಳಲ್ಲಿ ಇದ್ದ ಫಂಡಿಂಗ್​​ ಮಟ್ಟವು 2023ರಲ್ಲಿ ಮತ್ತೆ ಮರಳಲಿದೆ. ಈ ಫಂಡಿಂಗ್​ ಮೌಲ್ಯ 12 ರಿಂದ 15 ಬಿಲಿಯನ್ ಡಾಲರ್ ದಾಟಲಿದೆ. ಇದರ ನಂತರ 2024ರಲ್ಲಿಯೂ ಅತ್ಯಧಿಕ ಸ್ಟಾರ್ಟಪ್ ಫಂಡಿಂಗ್​ ಬಂಡವಾಳ ಹರಿದು ಬರಲಿದ್ದು, ಇದು 15 ರಿಂದ 20 ಬಿಲಿಯನ್​ ಡಾಲರ್​ಗಳಷ್ಟಾಗಬಹುದು ಎಂದು ವರದಿ ತಿಳಿಸಿದೆ.

ಕ್ಯಾಲೆಂಡರ್ ವರ್ಷ 2022ರಲ್ಲಿ 1519 ಸ್ಟಾರ್ಟಪ್ ಫಂಡಿಂಗ್​ ಡೀಲ್​​ಗಳಾಗಿದ್ದವು. ಇದಕ್ಕೆ ಹೋಲಿಸಿದರೆ 2023ರ ಪೂರ್ವಾರ್ಧದಲ್ಲಿ ಫಂಡಿಂಗ್ ಡೀಲ್​ಗಳ ಸಂಖ್ಯೆ ಕುಸಿದು 700 ರಿಂದ 900 ಆಗಿದೆ. ಆದರೆ ಇದು 2024 ರಲ್ಲಿ ಮತ್ತೆ 1000 ದಿಂದ 1200 ಡೀಲ್​​ಗಳಿಗೆ ಏರಿಕೆಯಾಗಬಹುದು ಎಂದು ರೆಡ್​ ಸೀರ್​ ತಿಳಿಸಿದೆ. ಇದಲ್ಲದೆ ವೆಂಚರ್ ಕ್ಯಾಪಿಟಲಿಸ್ಟ್​ಗಳು ಇಂದು ತಮ್ಮ ಕೈಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ನಿಧಿಯನ್ನು ಹೊಂದಿದ್ದಾರೆ. ಜೊತೆಗೆ 2017ರಲ್ಲಿ ಆಗಿದ್ದಂತೆ ಈ ವರ್ಷ ಶೇ 90ರಷ್ಟು ಫಂಡಿಂಗ್​​ಗಳು ಸೀಡ್​ ಫಂಡಿಂಗ್​ ಅಥವಾ ಆರಂಭಿಕ ಹಂತದ ಫಂಡಿಂಗ್ ಆಗಿರುವುದು ಆಶಾಭಾವನೆಯನ್ನು ಇಮ್ಮಡಿಗೊಳಿಸಿವೆ.

ಕಳೆದ ನಾಲ್ಕು ವರ್ಷಗಳಲ್ಲಿ ನೋಂದಾಯಿತ ಸ್ಟಾರ್ಟಪ್​ಗಳ ಸಂಖ್ಯೆ 9 ಪಟ್ಟು ಹೆಚ್ಚಾಗಿದೆ. 2018 ರಲ್ಲಿ ಇದ್ದ ಸುಮಾರು 10,000 ಸ್ಟಾರ್ಟಪ್​ಗಳಿಂದ 2022 ರಲ್ಲಿ ಈ ಸಂಖ್ಯೆ ಸುಮಾರು 90,000ಕ್ಕೆ ಏರಿಕೆಯಾಗಿದೆ. ಹಾಗೆಯೇ ಸಕ್ರಿಯ ಹೂಡಿಕೆದಾರರ ಸಂಖ್ಯೆ 2018 ರಲ್ಲಿ ಇದ್ದ 400 ಹೂಡಿಕೆದಾರರಿಂದ 2022 ರ ಹಣಕಾಸು ವರ್ಷದ ವೇಳೆಗೆ ಸುಮಾರು 900 ಹೂಡಿಕೆದಾರರಿಗೆ ಅಂದರೆ 2 ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಪಿಸಿ, ಲ್ಯಾಪ್​ಟಾಪ್​ ಲೈಸೆನ್ಸ್​ ನಿರ್ಬಂಧದ ಗಡುವು 1 ವರ್ಷ ವಿಸ್ತರಿಸಿ; ಕೇಂದ್ರಕ್ಕೆ ಟೆಕ್ ಕಂಪನಿಗಳ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.