ETV Bharat / business

2030ಕ್ಕೆ ಜಪಾನ್ ಹಿಂದಿಕ್ಕಿ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ಎಸ್&ಪಿ ವರದಿ

2030ರ ವೇಳೆಗೆ ಭಾರತದ ಜಿಡಿಪಿ ಜಪಾನ್ ಜಿಡಿಪಿಯನ್ನು ಹಿಂದಿಕ್ಕಲಿದೆ ಎಂದು ವರದಿ ಹೇಳಿದೆ.

India to surpass Japan and become Asia's 2nd largest economy

author img

By ETV Bharat Karnataka Team

Published : Oct 24, 2023, 5:17 PM IST

ನವದೆಹಲಿ: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತ 2030 ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ಎಸ್ &ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ತನ್ನ ಇತ್ತೀಚಿನ ಪಿಎಂಐ ಸಂಚಿಕೆಯಲ್ಲಿ ತಿಳಿಸಿದೆ. 2021 ಮತ್ತು 2022 ರಲ್ಲಿ ಎರಡು ವರ್ಷಗಳ ತ್ವರಿತ ಆರ್ಥಿಕ ಬೆಳವಣಿಗೆಯ ನಂತರ, ಭಾರತೀಯ ಆರ್ಥಿಕತೆಯು 2023 ಕ್ಯಾಲೆಂಡರ್ ವರ್ಷದಲ್ಲಿ ಬಲವಾದ ಸುಸ್ಥಿರ ಬೆಳವಣಿಗೆ ದಾಖಲಿಸುತ್ತಿದೆ.

ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 6.2 ರಿಂದ 6.3 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಭಾರತದ ಆರ್ಥಿಕತೆಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆ ಕಂಡಿದೆ.

ದೇಶೀಯ ಬೇಡಿಕೆಯಲ್ಲಿನ ಬಲವಾದ ಬೆಳವಣಿಗೆಯ ಬೆಂಬಲದೊಂದಿಗೆ 2023 ರ ಉಳಿದ ಅವಧಿಯಲ್ಲಿ ಮತ್ತು 2024 ರಲ್ಲಿ ತ್ವರಿತ ವಿಸ್ತರಣೆಯನ್ನು ಮುಂದುವರಿಸುವುದು ಹತ್ತಿರದ ಆರ್ಥಿಕ ದೃಷ್ಟಿಕೋನವಾಗಿದೆ ಎಂದು ಎಸ್ &ಪಿ ಗ್ಲೋಬಲ್ ಹೇಳಿದೆ. ಕಳೆದ ದಶಕದಲ್ಲಿ ಭಾರತಕ್ಕೆ ವಿದೇಶಿ ನೇರ ಹೂಡಿಕೆಯ ಒಳಹರಿವಿನ ವೇಗವರ್ಧನೆಯು ಭಾರತೀಯ ಆರ್ಥಿಕತೆಗೆ ಅನುಕೂಲಕರವಾದ ದೀರ್ಘಕಾಲೀನ ಬೆಳವಣಿಗೆಯ ದೃಷ್ಟಿಕೋನವನ್ನು ತೋರಿಸಿದೆ. ಯುವ ಜನಸಂಖ್ಯೆಯಲ್ಲಿನ ಹೆಚ್ಚಳ ಮತ್ತು ವೇಗವಾಗಿ ಹೆಚ್ಚುತ್ತಿರುವ ನಗರ ಕುಟುಂಬಗಳ ಆದಾಯಗಳು ಕೂಡ ಭಾರತದ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿವೆ.

2022ರಲ್ಲಿ 3.5 ಟ್ರಿಲಿಯನ್ ಡಾಲರ್ ಇದ್ದ ಭಾರತದ ಜಿಡಿಪಿ 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್​ಗೆ ಏರಿಕೆಯಾಗಲಿದೆ. ಆರ್ಥಿಕ ವಿಸ್ತರಣೆಯ ಈ ತ್ವರಿತ ವೇಗವು 2030 ರ ವೇಳೆಗೆ ಭಾರತೀಯ ಜಿಡಿಪಿ ಗಾತ್ರವು ಜಪಾನಿನ ಜಿಡಿಪಿಯನ್ನು ಮೀರಲಿದೆ. ಇದರಿಂದ ಭಾರತವು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವರದಿ ಹೇಳಿದೆ.

2022 ರ ಹೊತ್ತಿಗೆ ಭಾರತದ ಜಿಡಿಪಿ ಗಾತ್ರವು ಈಗಾಗಲೇ ಯುಕೆ ಮತ್ತು ಫ್ರಾನ್ಸ್​ನ ಜಿಡಿಪಿಗಿಂತ ದೊಡ್ಡದಾಗಿದೆ. 2030ರ ವೇಳೆಗೆ ಭಾರತದ ಜಿಡಿಪಿ ಜರ್ಮನಿಯನ್ನು ಹಿಂದಿಕ್ಕಲಿದೆ. ಯುಎಸ್ ಪ್ರಸ್ತುತ 25.5 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ವಿಶ್ವದ ಜಿಡಿಪಿಯ ಕಾಲು ಭಾಗದಷ್ಟಿದೆ. ಚೀನಾ ಸುಮಾರು 18 ಟ್ರಿಲಿಯನ್ ಡಾಲರ್ ಜಿಡಿಪಿ ಗಾತ್ರದೊಂದಿಗೆ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಇದು ವಿಶ್ವದ ಜಿಡಿಪಿಯ ಶೇಕಡಾ 17.9 ರಷ್ಟಿದೆ. ಜಪಾನ್ 4.2 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಜರ್ಮನಿ 4 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಬೈಜುಸ್ ಸಿಎಫ್​ಒ ಗೋಯಲ್ ರಾಜೀನಾಮೆ: ನಿತಿನ್ ಗೋಲಾನಿಗೆ ಹೆಚ್ಚುವರಿ ಹೊಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.