ETV Bharat / business

ಅರ್ಜೆಂಟೀನಾಗೆ ಮೇಡ್ ಇನ್ ಇಂಡಿಯಾ ತೇಜಸ್ ಏರ್​ಕ್ರಾಫ್ಟ್​ ನೀಡಲು ಭಾರತ ಒಪ್ಪಿಗೆ - india acknowledges argentinas interest in tejas

ಭಾರತ ಮತ್ತು ಅರ್ಜೆಂಟೀನಾ ರಕ್ಷಣಾ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದ ಕಾರ್ಯತಂತ್ರದ ವಲಯಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಪರಿಶೀಲಿಸಿದವು ಮತ್ತು ಪರಸ್ಪರ ಲಾಭಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು ಎಂದು ಜಂಟಿ ಹೇಳಿಕೆ ತಿಳಿಸಿದೆ.

ಅರ್ಜೆಂಟೀನಾಗೆ ಮೇಡ್ ಇನ್ ಇಂಡಿಯಾ ತೇಜಸ್ ಏರ್​ಕ್ರಾಫ್ಟ್​ ನೀಡಲು ಭಾರತ ಒಪ್ಪಿಗೆ
India acknowledges Argentina's interest in Tejas fighter aircraft
author img

By

Published : Aug 27, 2022, 12:51 PM IST

ಬ್ಯೂನಸ್ ಐರಸ್ (ಅರ್ಜೆಂಟೀನಾ): ಭಾರತದಲ್ಲಿ ತಯಾರಾದ ತೇಜಸ್ ಯುಧ್ಧವಿಮಾನಗಳನ್ನು ತನ್ನ ಸೇನಾಪಡೆಯಲ್ಲಿ ಸೇರಿಸಿಕೊಳ್ಳಲು ಅರ್ಜೆಂಟೀನಾ ಆಸಕ್ತಿ ವ್ಯಕ್ತಪಡಿಸಿದೆ ಎಂದು ಭಾರತ ಸರ್ಕಾರ ಶುಕ್ರವಾರ ತಿಳಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅರ್ಜೆಂಟೀನಾಗೆ ಎರಡು ದಿನಗಳ ಕಾಲ ಭೇಟಿ ನೀಡಿದ ಸಂದರ್ಭದಲ್ಲಿ ತೇಜಸ್ ಬಗ್ಗೆ ಮಾತುಕತೆಗಳು ನಡೆದಿವೆ.

ಅರ್ಜೆಂಟೀನಾ ವಿದೇಶಾಂಗ ಸಚಿವ ಸ್ಯಾಂಟಿಯಾಗೊ ಕಾಫಿರೊ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಇಎಎಂ ಜೈಶಂಕರ್ ಅವರು ರಕ್ಷಣಾ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದ ಕಾರ್ಯತಂತ್ರದ ವಲಯಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಪರಿಶೀಲಿಸಿದರು. ಜೈಶಂಕರ್ ಮತ್ತು ವಿದೇಶಾಂಗ ಸಚಿವ ಕೆಫಿರೋ ಎರಡೂ ದೇಶಗಳ ನಡುವಿನ ಜಂಟಿ ಆಯೋಗದ ಸಭೆ (ಜೆಸಿಎಂ) ಅಧ್ಯಕ್ಷತೆ ವಹಿಸಿದ್ದರು. ಭೇಟಿಯ ವೇಳೆ ಜೈಶಂಕರ್ ಅವರು ಅರ್ಜೆಂಟೀನಾ ಅಧ್ಯಕ್ಷ ಡಾ. ಅಲ್ಬರ್ಟೊ ಫೆರ್ನಾಂಡಿಸ್ ಅವರನ್ನು ಕೂಡ ಭೇಟಿ ಮಾಡಿದರು.

ಭಾರತ ಮತ್ತು ಅರ್ಜೆಂಟೀನಾ ರಕ್ಷಣಾ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದ ಕಾರ್ಯತಂತ್ರದ ವಲಯಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಪರಿಶೀಲಿಸಿದವು ಮತ್ತು ಪರಸ್ಪರ ಲಾಭಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆ ಪುನರುಚ್ಚರಿಸಿದವು ಎಂದು ಜಂಟಿ ಹೇಳಿಕೆ ತಿಳಿಸಿದೆ. 2019 ರಲ್ಲಿ ಸಹಿ ಹಾಕಲಾದ ರಕ್ಷಣಾ ಸಹಕಾರದ ಎಂಒಯು ಚೌಕಟ್ಟಿನೊಳಗೆ ರಕ್ಷಣಾ ವಲಯದಲ್ಲಿ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡೂ ದೇಶಗಳು ತಮ್ಮ ಪಾಲುದಾರಿಕೆಯ ವ್ಯಾಪ್ತಿಯನ್ನು ಮುಂದಿನ ಒಪ್ಪಂದಗಳ ತೀರ್ಮಾನದ ಮೂಲಕ ವಿಸ್ತರಿಸುವುದಕ್ಕೆ ಒಪ್ಪಿಗೆ ಸೂಚಿಸಿದವು. ಅರ್ಜೆಂಟೀನಾದ ವಾಯುಸೇನೆಗಾಗಿ ಮೇಡ್ ಇನ್ ಇಂಡಿಯಾ ತೇಜಸ್ ಯುದ್ಧ ವಿಮಾನಗಳ ಬಗ್ಗೆ ಅರ್ಜೆಂಟೀನಾದ ಆಸಕ್ತಿಯನ್ನು ಅಂಗೀಕರಿಸಿದ ಭಾರತದ ವಿದೇಶಾಂಗ ಸಚಿವಾಲಯದ ಕ್ರಮವು ದ್ವಿಪಕ್ಷೀಯ ಸಂಬಂಧದ ಕಾರ್ಯತಂತ್ರದ ಅಂಶವನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಸಶಸ್ತ್ರ ಪಡೆಗಳು, ರಕ್ಷಣಾ ತರಬೇತಿ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸುವಲ್ಲಿ ಸಹಕಾರದ ಹೆಚ್ಚಳಕ್ಕಾಗಿ ಎರಡೂ ದೇಶಗಳ ಮಧ್ಯೆ ಭೇಟಿಗಳನ್ನು ಹೆಚ್ಚಿಸಲು ಒಪ್ಪಿಕೊಳ್ಳಲಾಯಿತು.

ಇದನ್ನು ಓದಿ: ರಷ್ಯಾದ ತೈಲ ಬೆಲೆ ಮಿತಿಗೊಳಿಸುವ ಪ್ರಸ್ತಾವನೆಗೆ ಭಾರತ ಆಸಕ್ತಿ..ಅಮೆರಿಕ ಅಧಿಕಾರಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.