ETV Bharat / business

ಕ್ರೆಡಿಟ್ ಸ್ಕೋರ್ ಕಡಿಮೆಯಾದರೆ ಬಡ್ಡಿ ಹೊರೆ ಜಾಸ್ತಿ! ಹೆಚ್ಚಿಸಿಕೊಳ್ಳುವುದು ಹೇಗೆ?

ನೀವು ಗೃಹ ಸಾಲ ಪಡೆದಿದ್ದರೆ ನಿಮ್ಮ ಕ್ರೆಡಿಟ್​ ಸ್ಕೋರ್​ ಕಡಿಮೆಯಾಗದಂತೆ ನೋಡಿಕೊಳ್ಳಲೇಬೇಕು. ಇಲ್ಲವಾದಲ್ಲಿ ಬಡ್ಡಿ ಹೊರೆ ಹೆಚ್ಚು. ಹಾಗಾದರೆ, ಕ್ರೆಡಿಟ್​ ಸ್ಕೋರ್​ ಹೆಚ್ಚಿಸಿಕೊಳ್ಳುವ ಬಗೆ ಹೇಗೆ?. ಈ ವಿಚಾರಗಳು ನಿಮಗೆ ಗೊತ್ತಿರಲಿ.

How credit score can determine  your home loan interest  credit score  home loan interest  ಕ್ರೆಡಿಟ್ ಸ್ಕೋರ್ ಕಡಿಮೆ  ಬಡ್ಡಿ ಹೊರೆ ಜಾಸ್ತಿ  ಕ್ರೆಡಿಟ್​ ಸ್ಕೋರ್​ ಹೆಚ್ಚಿಸಿಕೊಳ್ಳುವುದಾದರೂ ಹೇಗೆ  ನಿಮಗೆ ಬಡ್ಡಿ ಹೊರೆಯಿಂದ ಮುಕ್ತಿ  ಗೃಹ ಸಾಲದ ಬಡ್ಡಿದರ
ಕ್ರೆಡಿಟ್​ ಸ್ಕೋರ್​ ಹೆಚ್ಚಿಸಿಕೊಳ್ಳುವುದಾದರೂ ಹೇಗೆ
author img

By ETV Bharat Karnataka Team

Published : Sep 8, 2023, 11:09 AM IST

ಹೈದರಾಬಾದ್​: ನೀವು ಗೃಹ ಸಾಲ ತೆಗೆದುಕೊಂಡಿದ್ದೀರಾ?. ಹೌದು, ಎಂದಾದಲ್ಲಿ ಯಾವುದೇ ಸಂದರ್ಭದಲ್ಲೂ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ. ಆಗಲೇ ನಿಮಗೆ ಬಡ್ಡಿ ಹೊರೆಯಿಂದ ಮುಕ್ತಿ ಸಿಗುತ್ತದೆ. ಏಕೆಂದರೆ, ಈಗ ಬ್ಯಾಂಕ್‌ಗಳು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಶೇಕಡಾ 0.75 ರಿಂದ ಶೇ 1 ರವರೆಗೆ ಬಡ್ಡಿ ರಿಯಾಯಿತಿ ನೀಡುತ್ತಿವೆ.

ಗೃಹ ಸಾಲದ ಬಡ್ಡಿದರಗಳು ವರ್ಷದಲ್ಲಿ ಹೆಚ್ಚಿವೆ. ಇತ್ತೀಚಿನ ದಿನಗಳಲ್ಲಿ ಇವು ಸ್ಥಿರವಾಗಿವೆ. ಆದ್ರೆ ಕೆಲವು ಬ್ಯಾಂಕ್‌ಗಳು ಮತ್ತು ಗೃಹ ಸಾಲ ಕಂಪನಿಗಳು ಬಡ್ಡಿ ತಗ್ಗಿಸಲು ಸಾಲಗಾರರಿಗೆ ರಿಯಾಯಿತಿ ನೀಡುತ್ತವೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸ್ವಲ್ಪ ಮೊತ್ತವನ್ನು ಶುಲ್ಕವಾಗಿ ವಸೂಲಿ ಮಾಡಿ, ಬಡ್ಡಿ ಕಡಿಮೆ ಮಾಡಲಾಗುತ್ತದೆ. ನೀವು ನಿಮ್ಮ ಬ್ಯಾಂಕ್‌ಗೆ ಹೋಗಿ ಈ ಸೌಲಭ್ಯ ಲಭ್ಯವಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿ.

ಸಾಮಾನ್ಯವಾಗಿ, 750 ಅಂಕಗಳಿಗಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ನೀವು ಉತ್ತಮ ಆರ್ಥಿಕ ಶಿಸ್ತು ಹೊಂದಿದ್ದೀರಿ ಎಂದರ್ಥ. ನೀವು ಹಳೆಯ ಸಾಲಗಳನ್ನು ಎಷ್ಟು ಚೆನ್ನಾಗಿ ಪಾವತಿಸುತ್ತಿದ್ದೀರಿ ಎಂಬುದನ್ನು ಕ್ರೆಡಿಟ್ ಸ್ಕೋರ್ ಸರಳವಾಗಿ ಹೇಳುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 800 ಅಂಕಗಳಾಗಿದ್ದರೆ ಬ್ಯಾಂಕ್‌ಗಳು ಹೊಸ ಸಾಲ ನೀಡಲು ಅಭ್ಯಂತರ ಇಲ್ಲದಿರಬಹುದು. ಆದರೆ, ನಿಮ್ಮ ಆದಾಯವನ್ನು ಗಮನಿಸಿದಾಗ ಮಾತ್ರ ನೀವು ನಿಜವಾಗಿಯೂ ಎಷ್ಟು ಸಾಲಕ್ಕೆ ಅರ್ಹರು ಎಂಬುದು ತಿಳಿಯುತ್ತದೆ. ಇದು ನಿಮಗೆ ಬಡ್ಡಿದರದ ಮೇಲೆ ಚೌಕಾಶಿ ಮಾಡುವ ಅವಕಾಶ ನೀಡುತ್ತದೆ.

ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಸಾಲದ ಕಂತುಗಳು, ವಿಮಾ ಪಾಲಿಸಿ ಪ್ರೀಮಿಯಂ, ಪೋಸ್ಟ್‌ಪೇಯ್ಡ್ ಫೋನ್ ಬಿಲ್‌ಗಳು ಇತ್ಯಾದಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಏಕೆಂದರೆ, ಇವು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿಷಯಗಳು. ನೀವು ವಿಳಂಬಿಸಿದರೆ ಕಡಿಮೆ ಬಡ್ಡಿದರದ ಸಾಲಗಳ ಲಭ್ಯತೆ ಸುಲಭವಲ್ಲ ಎಂಬುದನ್ನು ನೆನಪಿಡಿ. ಕಂತುಗಳು ನಿಮ್ಮ ಆದಾಯದ ಶೇ 40 ರಷ್ಟು ಮೀರದಂತೆ ನೋಡಿಕೊಳ್ಳುವುದು ಯಾವಾಗಲೂ ಉತ್ತಮ. ಕನಿಷ್ಠ ಮೂರು ತಿಂಗಳ ಕಂತುಗಳಿಗೆ ಸಾಕಷ್ಟು ಮೊತ್ತವು ಬ್ಯಾಂಕಿನಲ್ಲಿ ಲಭ್ಯವಿರಬೇಕು. ಆಗ ಮಾತ್ರ ಯಾವುದೇ ತೊಂದರೆಯಿಲ್ಲದೆ ಕಂತುಗಳನ್ನು ಪಾವತಿಸಬಹುದು.

ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿರುವುದು ಈಗ ಸಾಮಾನ್ಯ. ನೀವು ಮೊದಲು ಪಡೆದ ಅದೇ ಕಾರ್ಡ್ ಅನ್ನು ಯಾವಾಗಲೂ ಬಳಸುವುದೊಳಿತು. ಇದು ನಿಮ್ಮ ಕ್ರೆಡಿಟ್ ಇತಿಹಾಸ ಹೆಚ್ಚಿಸುತ್ತದೆ. ಇದಕ್ಕಾಗಿ ಸಕಾಲದಲ್ಲಿ ಹಣ ಪಾವತಿಸಿದರೆ, ನಿಮ್ಮ ಅಂಕ ಹೆಚ್ಚಾಗುವ ಅವಕಾಶವಿದೆ.

ಬ್ಯಾಂಕ್​ಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು, ಬ್ಯಾಂಕಿಂಗ್​ಯೇತರ ಹಣಕಾಸು ಸಂಸ್ಥೆಗಳು ಸಾಲ ನೀಡುವುದಾಗಿ ಸಂದೇಶ ಕಳುಹಿಸುತ್ತಲೇ ಇರುತ್ತವೆ. ಇವುಗಳ ಮೇಲೆ ಕ್ಲಿಕ್ ಮಾಡಿದರೆ ಕೇಳಿದ ಮೂಲ ವಿವರಗಳನ್ನು ಸಲ್ಲಿಸಿದ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಿದಂತಾಗುತ್ತದೆ. ಪರಿಣಾಮವಾಗಿ, ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ.

ಇತರರು ತೆಗೆದುಕೊಂಡ ಸಾಲಕ್ಕೆ ನೀವು ಗ್ಯಾರಂಟಿಗೆ ಸಹಿ ಹಾಕಿದ್ದೀರಾ? ಯಾರಾದರೂ ಸಹ-ಅರ್ಜಿಯನ್ನು ಮುಂದುವರಿಸುತ್ತಿದ್ದೀರಾ? ಅವರು ಸಾಲದ ಕಂತುಗಳನ್ನು ಸಮಯಕ್ಕೆ ಪಾವತಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ನೀವು ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸೂಕ್ತ. ಅವರು ಸರಿಯಾದ ಸಮಯಕ್ಕೆ ಹಣ ಪಾವತಿಸದಿದ್ದರೆ ನಿಮ್ಮ ಕ್ರೆಡಿಟ್ ವರದಿ ಪರಿಶೀಲಿಸುತ್ತಾರೆ. ಅದರ ಪರಿಣಾಮವಾಗಿ ಅಂಕ ಕಡಿಮೆಯಾಗುತ್ತದೆ. ಆದ್ದರಿಂದ, ಸಹಿ ಮಾಡುವಾಗ ಜಾಗರೂಕರಾಗಿರಿ.

ಕಂತುಗಳು ಮತ್ತು ಬಿಲ್‌ಗಳನ್ನು ನಿಗದಿತ ಸಮಯಕ್ಕೆ ಪಾವತಿಸಿದರೂ, ಕೆಲವೊಮ್ಮೆ ಕ್ರೆಡಿಟ್ ವರದಿಯಲ್ಲಿ ಅವುಗಳನ್ನು ಸರಿಯಾಗಿ ದಾಖಲಿಸದಿದ್ದರೆ ಅಂಕವನ್ನು ಕಡಿಮೆ ಮಾಡುವ ಅಪಾಯವಿದೆ. ಆದ್ದರಿಂದ, ಹೆಚ್ಚಿನ ಸಾಲಗಳು ಮತ್ತು ಕಾರ್ಡ್‌ಗಳನ್ನು ಹೊಂದಿರುವವರಿಗೆ ಕನಿಷ್ಠ 6 ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಿ. ಯಾವುದೇ ತಪ್ಪುಗಳಿದ್ದಲ್ಲಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಬ್ಯೂರೋಗಳನ್ನು ಸಂಪರ್ಕಿಸಿ ಮತ್ತು ಅವುಗಳನ್ನು ಸರಿಪಡಿಸಿ.

ಇದನ್ನೂ ಓದಿ: ಇದು ಈ ರಾಜ್ಯದ ಮೊದಲ ತೃತೀಯಲಿಂಗಿಗಳ ಸ್ಪೆಷಲ್​ ರೆಸ್ಟೋರೆಂಟ್​.. 200 ಬಗೆಯ ಖಾದ್ಯಗಳು ಇಲ್ಲುಂಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.