ETV Bharat / business

5 ಸಾವಿರ ಉದ್ಯೋಗಿಗಳ ನೇಮಕಕ್ಕೆ ಗೋಲ್ಡಿ ಸೋಲಾರ್ ಕಂಪನಿ ಚಿಂತನೆ

ಗುಜರಾತ್​ನ ಗೋಲ್ಡಿ ಸೋಲಾರ್​ ಕಂಪನಿಯು 5 ಸಾವಿರ ಜನರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ. ಈ ಬಗ್ಗೆ ಅಧಿಕೃತವಾಗಿ ಕಂಪನಿ ಎಂಡಿ ಈಶ್ವರ್​ ಧೋಲಾಕಿಯಾ ಮಾಹಿತಿ ನೀಡಿದ್ದಾರೆ.

author img

By

Published : Feb 7, 2023, 5:33 PM IST

Goldi Solar
ಗೋಲ್ಡಿ ಸೋಲಾರ್ ಕಂಪನಿ

ನವದೆಹಲಿ: ಗ್ರೀನ್ ಎನರ್ಜಿ ಕಂಪನಿಯಾದ ಗೋಲ್ಡಿ ಸೋಲಾರ್ ಮುಂದಿನ ಎರಡು ವರ್ಷಗಳಲ್ಲಿ ಸೌರ ಉತ್ಪಾದನೆ​ ಮಾರಾಟ ಮತ್ತು ನಂತರದ ಸೇವೆಗಳಿಗಾಗಿ 5 ಸಾವಿರ ಜನರನ್ನು ನೇಮಿಸಿಕೊಳ್ಳಲು ಯೋಜಿಸಿರುವುದಾಗಿ ಕಂಪನಿಯ ಎಂಡಿ ಈಶ್ವರ್​ ಧೋಲಾಕಿಯಾ ಹೇಳಿದ್ದಾರೆ. ಗುಜರಾತ್ ಮೂಲದ ಈ ಕಂಪನಿಯು ತನ್ನ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು 6 ಗಿಗಾವ್ಯಾಟ್‌ಗೆ (GW) ವಿಸ್ತರಿಸಲು 5,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಪ್ರಕ್ರಿಯೆಯಲ್ಲಿದೆ.

"ಗೋಲ್ಡಿ ಸೋಲಾರ್ ಕಂಪನಿಯು ತಳಮಟ್ಟದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಯೋಜಿಸಿದೆ. ಕೌಶಲ ಅಭಿವೃದ್ಧಿ ಕಾರ್ಯಕ್ರಮವು FY25 ರ ವೇಳೆಗೆ ವಿವಿಧ ಕಾರ್ಯಗಳಲ್ಲಿ 5,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳುವ ಕಂಪನಿಯ ದೃಷ್ಟಿಗೆ ಸಹಾಯ ಮಾಡುತ್ತದೆ" ಎಂದು ಎಲ್ & ಟಿ ಪಬ್ಲಿಕ್ ಚಾರಿಟಬಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಧೋಲಾಕಿಯಾ ಹೇಳಿದ್ದಾರೆ. ಪಾಲುದಾರಿಕೆಯಲ್ಲಿ ಸೌರ ಉತ್ಪಾದನೆಯ ನುರಿತ ಉದ್ಯೋಗಿಗಳನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವನ್ನು ಹೆಚ್ಚಿಸಲು ಎರಡು ಸಂಸ್ಥೆಗಳಿಗೂ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

"ಕಂಪನಿಯು ಸೋಲಾರ್ ಉತ್ಪಾದನೆಯಲ್ಲಿ ನುರಿತ ಉದ್ಯೋಗಿಗಳಿಗೆ ತರಬೇತಿ ನೀಡಲು ಎಲ್ & ಟಿ ಪಬ್ಲಿಕ್ ಚಾರಿಟಬಲ್ ಜೊತೆ ಪಾಲುದಾರಿಕೆ ಹೊಂದಿದೆ" ಎಂದು ಕಂಪನಿಯು ಹೇಳಿಕೆಯಲ್ಲಿ ಉಲ್ಲೇಖಿಸಿದೆ. “ಈ ಸಹಯೋಗವು ಯುವ ಪೀಳಿಗೆಗೆ ಕೌಶಲ್ಯಗಳನ್ನು ನೀಡಲು ಮತ್ತು ಸೌರ ಕ್ಷೇತ್ರದಲ್ಲಿ ಮುಂಬರುವ ಅವಕಾಶಗಳಿಗೆ ಅವರನ್ನು ಸಿದ್ಧಪಡಿಸಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ಲಾರ್ಸೆನ್ ಮತ್ತು ಟೌಬ್ರೊ ಚಾರಿಟಬಲ್ ಟ್ರಸ್ಟ್​ನ ಟ್ರಸ್ಟಿ ಕೆ. ರಾಮಕೃಷ್ಣನ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯಲಿದೆ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆ

ಅಗ್ನಿವೀರ್​ ಸೇರಲು ಆನ್​ಲೈನ್​ ಪರೀಕ್ಷೆ:​ ಇನ್ನೊಂದೆಡೆ ಭಾರತೀಯ ಸೇನೆಯು ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಘೋಷಿಸಿದೆ. ಸೇನಾ ಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು. ಬಳಿಕ ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಪ್ರಕ್ರಿಯೆಯಲ್ಲಿನ ಬದಲಾವಣೆಯ ಕುರಿತಾಗಿ ವಿವಿಧ ಪತ್ರಿಕೆಗಳಲ್ಲಿ ಸೇನೆಯು ಜಾಹೀರಾತುಗಳನ್ನು ಪ್ರಕಟಿಸಿದೆ. ಈ ಬಗ್ಗೆ ಫೆಬ್ರವರಿ ಮಧ್ಯದಲ್ಲಿ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ.

ಏಪ್ರಿಲ್‌ನಲ್ಲಿ ಮೊದಲ ಆನ್‌ಲೈನ್ ಸಿಇಇಯು ದೇಶದಾದ್ಯಂತ ಸುಮಾರು 200 ಸ್ಥಳಗಳಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿನ ಈ ಬದಲಾವಣೆಯು ದೇಶಾದ್ಯಂತ ವ್ಯಾಪಕವಾದ ಪ್ರಭಾವವನ್ನು ಬೀರಲಿದೆ ಮತ್ತು ನೇಮಕಾತಿ ರ‍್ಯಾಲಿಗಳಲ್ಲಿ ಕಂಡುಬರುವ ದೊಡ್ಡ ಸಂಖ್ಯೆಯ ಜನಸಂದಣಿ ಈ ಮೂಲಕ ಕಡಿಮೆಯಾಗಲಿದೆ. ಹೀಗಾಗಿ ಸುಲಭದಲ್ಲಿ ಆನ್​ಲೈನ್​ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜಿ20 ದೇಶಗಳ ಪ್ರಸ್ತುತ ಆರ್ಥಿಕತೆಗೆ ರೆಡ್ಯೂಸ್ ರಿಯೂಸ್ ರಿಸೈಕಲ್ ಎನರ್ಜಿ ನೀತಿ ಅಗತ್ಯ: ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.