ETV Bharat / business

ಭಾರತದ ಷೇರು ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿ ಉಳಿದ ಎಫ್​ಪಿಐಗಳು - ರಾಷ್ಟ್ರೀಯ ಸೆಕ್ಯುರಿಟೀಸ್‌ ಡೆಪಾಸಿಟರಿಯ

ಭಾರತದ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ನಿವ್ವಳ ಖರೀದಿದಾರರಾಗಿ ಉಳಿದಿದ್ದಾರೆ ಎಂದು ರಾಷ್ಟ್ರೀಯ ಸೆಕ್ಯುರಿಟೀಸ್‌ ಡೆಪಾಸಿಟರಿ ಹೇಳಿದೆ.

Foreign investors remain net buyers in Indian stocks in April

author img

By

Published : Apr 28, 2023, 6:03 PM IST

ನವದೆಹಲಿ : ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ತಿಂಗಳ ಕಾಲ ತಾವು ಹಿಡಿದಿಟ್ಟುಕೊಂಡಿದ್ದ ಷೇರುಗಳನ್ನು ಮಾರಾಟ ಮಾಡಿದ ನಂತರ ಈಗ ಸತತ ಎರಡನೇ ತಿಂಗಳು ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ನಿವ್ವಳ ಖರೀದಿದಾರರಾಗಿ ಉಳಿದಿದ್ದಾರೆ ಎಂದು ರಾಷ್ಟ್ರೀಯ ಸೆಕ್ಯುರಿಟೀಸ್‌ ಡೆಪಾಸಿಟರಿಯ (National Securities Depository -NSDL) ಮಾಹಿತಿ ತಿಳಿಸಿದೆ.

NSDL ದತ್ತಾಂಶದ ಪ್ರಕಾರ, ಏಪ್ರಿಲ್ 2023 ರಲ್ಲಿ (ಏಪ್ರಿಲ್ 27 ರವರೆಗೆ) ಭಾರತೀಯ ಷೇರು ಮಾರುಕಟ್ಟೆಗಳಲ್ಲಿ 7,695 ಕೋಟಿ ಮೌಲ್ಯದ ಷೇರುಗಳನ್ನು FPI ಗಳು ಖರೀದಿಸಿದ್ದಾರೆ. ಮಾರ್ಚ್‌ನಲ್ಲಿ ಅವರು ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಸುಮಾರು 7,936 ಕೋಟಿ ಮೌಲ್ಯದ ಶೇರು ಖರೀದಿಸಿದ್ದಾರೆ. ಮಾರ್ಚ್ ಆರಂಭದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತದ ನಂತರ ಅಮೆರಿಕದಲ್ಲಿ ಉಂಟಾದ ಬ್ಯಾಂಕಿಂಗ್ ಬಿಕ್ಕಟ್ಟು ಮತ್ತು ತುಲನಾತ್ಮಕವಾಗಿ ಭಾರತದ ಬಲವಾದ ಆರ್ಥಿಕ ದೃಷ್ಟಿಕೋನಗಳ ಕಾರಣದಿಂದ ದೇಶೀಯ ಷೇರುಗಳಿಗೆ ಹೊಸ ಬೇಡಿಕೆ ಉಂಟುಮಾಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಟಾಟಾ ಮೋಟಾರ್ಸ್‌ ನಂಥ ಸ್ಟಾಕ್‌ಗಳಲ್ಲಿ ಭಾರಿ ಪ್ರಮಾಣದ ಮಾರಾಟವಾಗಿದ್ದು ಕಂಡುಬಂದಿತು. ಈ ಎಲ್ಲ ಖರೀದಿಗಳನ್ನು ಬಹುತೇಕ ಎಫ್‌ಪಿಐಗಳೇ ಮಾಡಿದ್ದಾರೆ ಎಂದು ಊಹಿಸಬಹುದು. ಎಫ್‌ಪಿಐಗಳು ಐಟಿಸಿ ಕಂಪನಿಯ ಷೇರುಗಳ ಖರೀದಿಯನ್ನು ಹೆಚ್ಚಿಸಿವೆ. ಎಫ್​ಪಿಐಗಳು ಹಿಡಿದಿಟ್ಟುಕೊಳ್ಳುತ್ತಿರುವ ಷೇರುಗಳು ಮಾರುಕಟ್ಟೆ ಕುಸಿತದ ಸಮಯದಲ್ಲಿಯೂ ನಿರಂತರವಾಗಿ ಸ್ಥಿರತೆಯನ್ನು ತೋರಿಸುತ್ತಿವೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್​​ನ ವಿಶ್ಲೇಷಕ ವಿಕೆ ವಿಜಯಕುಮಾರ್ ಹೇಳಿದರು.

ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಹೆಚ್ಚು ಸಾಲ ನೀಡುತ್ತಿದ್ದ ವಿಶ್ವಾಸಾರ್ಹ ಬ್ಯಾಂಕ್ ಆಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕಳೆದ ಮಾರ್ಚ್ 10 ರಂದು ಬಾಗಿಲು ಮುಚ್ಚಿತು. ಸಾಲ ಪಡೆದ ಕಂಪನಿಗಳು ಸಾಲ ಮರುಪಾವತಿ ಮಾಡಲು ವಿಫಲವಾದ ಕಾರಣದಿಂದ ಬ್ಯಾಂಕ್ ಬಾಗಿಲು ಮುಚ್ಚಿತು. ಇದರಿಂದ ಇನ್ನೂ ಅನೇಕ ಬ್ಯಾಂಕ್​ಗಳು ಮುಚ್ಚಿಹೋದವು. ಜನವರಿ ಮತ್ತು ಫೆಬ್ರವರಿಯಲ್ಲಿ ಎಫ್‌ಪಿಐಗಳು ಕ್ರಮವಾಗಿ 28,852 ಕೋಟಿ ರೂಪಾಯಿ ಮತ್ತು 5,294 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ ಎಂದು NSDL ಡೇಟಾ ತೋರಿಸಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು ಅಥವಾ ಎಫ್​​ಪಿಐ ಇದು ಹೂಡಿಕೆದಾರರಿಗೆ ವಿದೇಶಿ ದೇಶದಲ್ಲಿ ಗಮನಾರ್ಹ ಶೇರುಗಳನ್ನು ಖರೀದಿಸಲು ಅವಕಾಶ ನೀಡುವ ಹೂಡಿಕೆಯ ವಿಧಾನವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಎಫ್‌ಪಿಐಗಳು ಬಾಂಡ್‌ಗಳು, ಸ್ಟಾಕ್‌ಗಳು ಮತ್ತು ನಗದು ಸಮಾನ ಸೇರಿದಂತೆ ಹಲವಾರು ರೀತಿಯ ಸ್ವತ್ತುಗಳನ್ನು ಖರೀದಿಸುತ್ತಾರೆ. ಸರ್ಕಾರದಿಂದ ನೀಡಲಾದ ಖಜಾನೆ ಮತ್ತು ಉಳಿತಾಯ ಬಾಂಡ್‌ಗಳು, ಟಿ-ಬಿಲ್‌ಗಳು, ಮಾರ್ಕೆಟಬಲ್ ಸೆಕ್ಯುರಿಟೀಸ್ ಮತ್ತು 'ಮನಿ ಮಾರ್ಕೆಟ್ ಫಂಡ್‌ಗಳು ನಗದು ಸಮಾನ ಹೂಡಿಕೆ ವಿಧಾನಗಳಾಗಿವೆ.

FPI ಇದು ಹೂಡಿಕೆದಾರರಿಗೆ ತಮ್ಮ ಬಂಡವಾಳವನ್ನು ವೈವಿಧ್ಯಗೊಳಿಸಲು ಅವಕಾಶವನ್ನು ಒದಗಿಸುತ್ತದೆ. ಹೂಡಿಕೆದಾರರಾಗಿ ಹೆಚ್ಚಿನ ಆದಾಯವನ್ನು ಸಾಧಿಸಲು ನಿಮ್ಮ ಪೋರ್ಟ್‌ಫೋಲಿಯೊವನ್ನು ನೀವು ವೈವಿಧ್ಯಮಯಗೊಳಿಸಬಹುದು. ಎಫ್​​ಪಿಐ ಹೂಡಿಕೆದಾರರು ವಿದೇಶಿ ದೇಶಗಳಲ್ಲಿ ಹೆಚ್ಚಿನ ಮೊತ್ತದ ಸಾಲ ಪಡೆಯಬಹುದು. ಅಲ್ಲದೆ ಅವರು ತಮ್ಮ ಕ್ರೆಡಿಟ್ ಬೇಸ್ ಅನ್ನು ವಿಸ್ತರಿಸಬಹುದು.

ಇದನ್ನೂ ಓದಿ : ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಭದ್ರ, ಜಾಗತಿಕ ಅಸ್ಥಿರತೆಯ ಪರಿಣಾಮವಿಲ್ಲ: ಆರ್​ಬಿಐ ಗವರ್ನರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.