ETV Bharat / business

ಈ ವಾರ Stock Marketನಲ್ಲಿ ಏರಿಳಿತ ಸಾಧ್ಯತೆ; ಹೊಸ ಗರಿಷ್ಠ ಮಟ್ಟಕ್ಕೇರುವುದು ಅನುಮಾನ - ನಿಫ್ಟಿ ಸೂಚ್ಯಂಕ 20 ಸಾವಿರ

Stock Market: ಕಳೆದ ವಾರ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಸಾಕಷ್ಟು ಏರಿಳಿತಗಳಾಗಿವೆ. ಬರುವ ವಾರದ ವಹಿವಾಟು ಹೇಗಿರಬಹುದು ಎಂಬ ಅವಲೋಕನ ಇಲ್ಲಿದೆ.

Markets to remain volatile with new high looking difficult currently

author img

By

Published : Jul 30, 2023, 3:19 PM IST

ನವದೆಹಲಿ: ಹಿಂದಿನ ವಾರದಲ್ಲಿ ಭಾರತೀಯ ಶೇರು ಮಾರುಕಟ್ಟೆಗಳು ಸಾಕಷ್ಟು ಏರಿಳಿತದ ವಹಿವಾಟಿಗೆ ಸಾಕ್ಷಿಯಾದವು. ನಿಫ್ಟಿ ಸೂಚ್ಯಂಕ 20 ಸಾವಿರ ಅಂಕಗಳನ್ನು ದಾಟಲಿದೆ ಎಂಬ ನಿರೀಕ್ಷೆ ಈ ವಾರ ಹುಸಿಯಾಯಿತು. ಜುಲೈ 20 ರಂದು 20 ಸಾವಿರಕ್ಕೆ ತಲುಪಲು ನಿಫ್ಟಿ ಕೇವಲ 8.85 ಅಂಕಗಳಷ್ಟು ದೂರದಲ್ಲಿತ್ತು. ಆದರೆ ಈಗ ಆ ಮಟ್ಟಕ್ಕೇರಲು ಇಬ್ಬೂ 354 ಅಂಕಗಳ ಕೊರತೆಯಿದೆ. ಇದೇ ವಾರದಲ್ಲಿ ನಿಫ್ಟಿ 20 ಸಾವಿರದ ಮಟ್ಟಕ್ಕೇರಬೇಕಾದರೆ ಏನಾದರೂ ವಿಶೇಷ ನಡೆಯಲೇಬೇಕು. ಕಳೆದ ವಾರದಲ್ಲಿ ಮಾರುಕಟ್ಟೆಗಳು ಒಂದು ದಿನ ಏರಿಕೆಯಲ್ಲಿದ್ದರೆ ಮೂರು ದಿನ ಇಳಿಕೆ ಕಂಡವು. ವಾರದ 5ನೇ ದಿನ ವಹಿವಾಟು ಬಹುತೇಕ ಸ್ಥಿರವಾಗಿತ್ತು.

ವಾರದ ಅಂತ್ಯದ ವೇಳೆಗೆ, ಬಿಎಸ್‌ಇ ಸೆನ್ಸೆಕ್ಸ್ 524.06 ಪಾಯಿಂಟ್‌ಗಳು ಅಥವಾ ಶೇಕಡಾ 0.79 ರಷ್ಟು ಕಳೆದುಕೊಂಡು 66,160.20 ಪಾಯಿಂಟ್‌ಗಳಿಗೆ ತಲುಪಿದರೆ, ನಿಫ್ಟಿ 98.95 ಪಾಯಿಂಟ್ ಅಥವಾ 0.50 ರಷ್ಟು ಕಳೆದುಕೊಂಡು 19,646.05 ಪಾಯಿಂಟ್‌ಗಳಿಗೆ ತಲುಪಿದೆ. ವಿಶಾಲ ಮಾರುಕಟ್ಟೆಗಳಲ್ಲಿ BSE100, BSE200 ಮತ್ತು BSE500 ಶೇಕಡಾ 0.15ರಷ್ಟು ಕಳೆದುಕೊಂಡು, ಕ್ರಮವಾಗಿ ಶೇಕಡಾ 0.14 ಮತ್ತು ಶೇಕಡಾ 0.29ರಷ್ಟು ಏರಿಕೆ ಕಂಡಿವೆ. BSE MIDCAP ಶೇಕಡಾ 2.07 ರಷ್ಟು ಏರಿಕೆಯಾಗಿದೆ ಮತ್ತು BSE SMALLCAP ಶೇಕಡಾ 1.18 ರಷ್ಟು ಏರಿಕೆಯಾಗಿದೆ.

ಸ್ವಲ್ಪ ವಿರಾಮದ ನಂತರ ಸ್ಮಾಲ್ ಕ್ಯಾಪ್ ಮತ್ತು ಮಿಡ್‌ಕ್ಯಾಪ್‌ಗಳು ಚಲನಶೀಲತೆ ಪಡೆದುಕೊಂಡಿವೆ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್‌ನ ಉತ್ತಮ ಕಾರ್ಯಕ್ಷಮತೆಯು ಚಿಲ್ಲರೆ ಹೂಡಿಕೆದಾರರನ್ನು ನಿಜವಾಗಿಯೂ ಸಂತೋಷಪಡಿಸಿದೆ.

ಕಳೆದ ವಾರದಲ್ಲಿ ಭಾರತೀಯ ರೂಪಾಯಿ 31 ಪೈಸೆ ಅಥವಾ ಶೇಕಡಾ 0.38 ಕಳೆದುಕೊಂಡು US ಡಾಲರ್‌ ಎದುರು 82.25 ರೂ. ಆಗಿದೆ. ಡೌ ಜೋನ್ಸ್ ಐದು ವಹಿವಾಟು ಅವಧಿಗಳಲ್ಲಿ ನಾಲ್ಕರಲ್ಲಿ ಲಾಭ ಗಳಿಸಿತು ಮತ್ತು ಒಂದರಲ್ಲಿ ಇಳಿಕೆ ಕಂಡಿತು. ಇದು 231.60 ಪಾಯಿಂಟ್ ಅಥವಾ 0.66 ರಷ್ಟು ಏರಿಕೆಯಾಗಿ 35,459.29 ಪಾಯಿಂಟ್‌ಗಳಿಗೆ ತಲುಪಿದೆ. US FED ಬಡ್ಡಿದರಗಳನ್ನು ಮತ್ತೊಮ್ಮೆ 25 ಬೇಸಿಸ್ ಪಾಯಿಂಟ್‌ಗಳಿಂದ ನಿರೀಕ್ಷಿತ ಸಾಲಿನಲ್ಲಿ 5.25 ಪ್ರತಿಶತ 5.50 ರಷ್ಟು ಮಟ್ಟಕ್ಕೆ ಹೆಚ್ಚಿಸಿದೆ. ಅಲ್ಲಿಗೆ ಪ್ರಸ್ತುತ ಬಡ್ಡಿದರಗಳು 2001 ರಿಂದ ಅತ್ಯಧಿಕವಾಗಿವೆ. US ಮತ್ತು ಭಾರತದಲ್ಲಿನ ದರದ ನಡುವಿನ ವ್ಯತ್ಯಾಸವು ಅತ್ಯಂತ ಕಡಿಮೆಯಾಗಿದೆ. ಇದು ಕೇವಲ 1.00 ಪ್ರತಿಶತದಿಂದ 1.25 ಪ್ರತಿಶತವಾಗಿದೆ. ಈ ಪರಿಸ್ಥಿತಿಗಳಲ್ಲಿ ಕ್ಯಾರಿ ಟ್ರೇಡ್​ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಖಚಿತವಾಗಿಲ್ಲ.

ಬೆಂಚ್ ಮಾರ್ಕ್​ ಸೂಚ್ಯಂಕಗಳ ಮಾರುಕಟ್ಟೆಯ ಕಾರ್ಯಕ್ಷಮತೆಯನ್ನು ನೋಡುವುದಾದರೆ, ಈ ಡೇಟಾ ಬಹಳ ಆಸಕ್ತಿದಾಯಕವಾಘಿದೆ. ಬಿಎಸ್​ಇ ಸೆನ್ಸೆಕ್ಸ್ ಮಾರ್ಚ್ 23 ರ ಕನಿಷ್ಠ ಮಟ್ಟವಾದ 57,500 ಪಾಯಿಂಟ್‌ಗಳಿಂದ ಗರಿಷ್ಠ 67,600 ಪಾಯಿಂಟ್‌ಗಳಿಗೆ ಏರಿತು. ಇದು 12,100 ಪಾಯಿಂಟ್‌ಗಳ ಏರಿಕೆ ಅಥವಾ ಮಾರ್ಚ್ ಕನಿಷ್ಠಕ್ಕಿಂತ 21 ಪ್ರತಿಶತವಾಗಿದೆ. ಅದೇ ರೀತಿ ನಿಫ್ಟಿ 3,078 ಪಾಯಿಂಟ್‌ಗಳನ್ನು ಅಥವಾ 18.19 ಶೇಕಡಾರಷ್ಟು ಏರಿಕೆಯಾಗಿದೆ. ಇದು ತನ್ನ ಕನಿಷ್ಠ 16,913 ಪಾಯಿಂಟ್‌ಗಳಿಂದ 19,991 ಪಾಯಿಂಟ್‌ಗಳಿಗೆ ಗಳಿಸಿದೆ. ನಿಜವಾದ BSEMIDCAP 6,560 ಪಾಯಿಂಟ್‌ಗಳನ್ನು ಅಥವಾ 27.79 ಶೇಕಡಾ ರಷ್ಟು ಗಳಿಸಿ 23,600 ಪಾಯಿಂಟ್‌ಗಳಿಂದ 30,160 ಪಾಯಿಂಟ್‌ಗಳಿಗೆ ಏರಿಕೆಯಾಗಿದೆ. BSESMALLCAP ನ ಕಾರ್ಯಕ್ಷಮತೆಯು ಇನ್ನೂ ಹೆಚ್ಚಿನದಾಗಿದೆ, ಇದು 8,428 ಪಾಯಿಂಟ್‌ಗಳನ್ನು ಅಥವಾ 32.26 ಶೇಕಡಾರಷ್ಟು ಗಳಿಸಿ ತನ್ನ ಕನಿಷ್ಠ 26,120 ಪಾಯಿಂಟ್‌ಗಳಿಂದ 34,548 ಪಾಯಿಂಟ್‌ಗಳಿಗೆ ಏರಿಕೆಯಾಗಿದೆ.

ಆಗಸ್ಟ್ ತಿಂಗಳು ಪ್ರಾರಂಭವಾಗಿದೆ ಮತ್ತು ಈ ತಿಂಗಳು ಮಾರುಕಟ್ಟೆಗೆ ಒಂದೆರಡು ರಜಾ ದಿನಗಳು ಬರಬಹುದು. ತಿಂಗಳು ಮುಂದುವರೆದಂತೆ ಮಾರುಕಟ್ಟೆಗಳು ವಿಪರೀತ ಚಂಚಲವಾಗಬಹುದು ಮತ್ತು ಎರಡೂ ಬದಿಗಳಲ್ಲಿ ಚಲಿಸಬಹುದು. BSE SENSEX ನಲ್ಲಿ 66,100 ಮತ್ತು NIFTY ಯಲ್ಲಿ 19,600 ರ ಪ್ರಸ್ತುತ ಮಟ್ಟಗಳು ಎರಡೂ ದಿಕ್ಕಿನಲ್ಲಿ ನಡೆಯುವ ಚಲನೆಯೊಂದಿಗೆ ಪಿವೋಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. 19,200 ಮತ್ತು 65,000 ಮಟ್ಟದಲ್ಲಿ ಉತ್ತಮ ಸಪೋರ್ಟ್​ ಇದೆ. BSE SENSEX 67,600 ಮತ್ತು NIFTY ನಲ್ಲಿ 19,991 ರ ಹಿಂದಿನ ಗರಿಷ್ಠಗಳು ಬಲವಾದ ಪ್ರತಿರೋಧ ಮತ್ತು ಪೂರೈಕೆ ವಲಯಗಳಾಗಿ ಕಾರ್ಯನಿರ್ವಹಿಸುತ್ತವೆ.

ಯಾವುದೇ ಬಲವಾದ ಏರಿಕೆ ಕಂಡು ಬಂದರೆ ಲಾಭ ಮಾಡಿಕೊಳ್ಳಿ ಮತ್ತು ಕುಸಿತವಾದರೆ ಖರೀದಿಸಿ. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಕ್ಷೇತ್ರವು ಹೂಡಿಕೆದಾರರನ್ನು ಹೆಚ್ಚಾಗಿ ಆಕರ್ಷಿಸುತ್ತದೆ ಮತ್ತು ಇದೇ ಕಳವಳದ ವಿಷಯವೂ ಆಗಿದೆ. ಇಲ್ಲಿ ಯಾವುದೇ ಶೇರು ಖರೀದಿಸುವ ಮುನ್ನ ಜಾಗರೂಕರಾಗಿರಿ ಮತ್ತು ಬಲವಾದ ಮೂಲಭೂತ ಅಂಶಗಳನ್ನು ಹೊಂದಿದ ಶೇರುಗಳನ್ನೇ ಆಯ್ಕೆ ಮಾಡಿ. ಈ ವಾರ ಎಚ್ಚರಿಕೆಯಿಂದ ಟ್ರೇಡಿಂಗ್ ಮಾಡಿ.

ಇದನ್ನೂ ಓದಿ : Project Tiger: ತಮಿಳುನಾಡಿನ ಕಾಡುಗಳಲ್ಲಿರುವ ಹುಲಿಗಳ ಸಂಖ್ಯೆ 306; 16 ವರ್ಷಗಳಲ್ಲಿ ಸಂತತಿ 4 ಪಟ್ಟು ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.