ನವದೆಹಲಿ: ದಸರಾ ಬಳಿಕ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಈ ಹಬ್ಬಗಳು ಉದ್ಯೋಗಿಗಳ ಸೃಷ್ಟಿಗೆ ಅದರಲ್ಲೂ ಮಹಿಳೆಯರಿಗೆ ಕೆಲಸ ಒದಗಿಸುವಲ್ಲಿ ಸಹಕಾರಿಯಾಗುತ್ತಿವೆ. ದೇಶಾದ್ಯಂತ ಹಬ್ಬದ ಋತುವಿನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ಜುಲೈ- ಸೆಪ್ಟೆಂಬರ್ ಅವಧಿಗೆ ಹೋಲಿಕೆ ಮಾಡಿದಾಗ ಈ ವರ್ಷ ಮಹಿಳಾ ನೌಕರರ ಸಂಖ್ಯೆ ಶೇ 61ರಷ್ಟು ಆಗಿದೆ ಎಂದು ಹೊಸ ವರದಿ ತಿಳಿಸಿದೆ.
ಉದ್ಯೋಗ ಮತ್ತು ವೃತ್ತಿ ನೆಟ್ವರ್ಕಿಂಗ್ ಫ್ಲಾಟ್ಫಾರ್ಮ್ ಅಪ್ನಾ.ಕೊ (apna.co) ಪ್ರಕಾರ, ಉದ್ಯಮದಲ್ಲಿ ಮಹಿಳಾ ವೃತ್ತಿಪರರ ಬೇಡಿಕೆ ಹೆಚ್ಚಿರುವುದನ್ನು ಈ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳವು ಸೂಚಿಸುತ್ತದೆ. ಹಬ್ಬದ ಋತುಮಾನದಲ್ಲಿ ಕಂಪನಿಗಳು ಹೆಚ್ಚಿನ ಚಟುವಟಿಕೆ, ನೇಮಕಾತಿ ನಡೆಸುತ್ತವೆ. ಅದರಲ್ಲೂ ವಿಶೇಷವಾಗಿ ವಾಣಿಜ್ಯ, ಚಿಲ್ಲರೆ, ಮತ್ತು ಆತಿಥ್ಯ ಕ್ಷೇತ್ರದಲ್ಲಿ ಬೇಡಿಕೆ ಇರುತ್ತದೆ.
2022 ರಿಂದ 2023ರ ಉದ್ಯೋಗ ಮಾರುಕಟ್ಟೆಯ ಗಮನಾರ್ಹವಾಗಿ ಬದಲಾವಣೆ ಕಂಡಿದೆ. ಅದರಲ್ಲೂ ಪ್ರಮುಖವಾಗಿ ಟೆಲಿಕಾಲಿಂಗ್, ಅಕೌಂಟ್, ಉದ್ಯಮ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಡೆಲಿವರಿ ಕ್ಷೇತ್ರಗಳು ವಿಸ್ತರಣೆ ಕಂಡಿವೆ.
ಉದ್ಯೋಗಿಗಳ ರಕ್ಷಣೆ: ಹಬ್ಬದ ಸಮಯದಲ್ಲಿ ಬಜಾಜ್, ಅಕ್ಸಿಸ್ ಬ್ಯಾಂಕ್ ಪೇಟಿಎಂ, ಫ್ಲಿಪ್ಕಾರ್ಟ್ ಮತ್ತು ರಿಲಯನ್ಸ್ ಸೇರಿದಂತೆ ಹಲವು ಉದ್ಯಮ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸುತ್ತವೆ. ಅವರು ತಮ್ಮ ಸಂಸ್ಥೆಯ ಪ್ರತಿಭಾವಂತರ ರಕ್ಷಣೆಗಾಗಿ ಅತ್ಯಾಕರ್ಷಕ ಇನ್ಸೆಟಿವ್ಸ್ ಅನ್ನು ನೀಡುತ್ತಾರೆ.
ಕಳೆದ ವರ್ಷದಿಂದ ಉದ್ಯೋಗದಾತರು ಮತ್ತು ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ. ವೃತ್ತಿಪರರನ್ನು ಸಬಲೀಕರಣಗೊಳಿಸುವುದನ್ನು ಮುಂದುವರಿಸುವುದರಿಂದ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವಿನ ಅಂತರವನ್ನು ಕಡಿಮೆಗೊಳಿಸುವುದರಿಂದ ಉದ್ಯೋಗದಲ್ಲಿ ಮತ್ತಷ್ಟು ರೂಪಾಂತರಗಳನ್ನು ನಿರೀಕ್ಷಿಸುತ್ತೇವೆ ಎಂದು ಅಪ್ನಾ.ಕೊ ಸಂಸ್ಥಾಪಕಿ ಮತ್ತು ಸಿಇಒ ನಿರ್ಮಿತಾ ಪಾರಿಖ್ ತಿಳಿಸಿದ್ದಾರೆ.
ಇದಕ್ಕಿಂತ ಹೆಚ್ಚಾಗಿ, ವರದಿಗಳ ಪ್ರಕಾರ ಆಗಸ್ಟ್ ಮತ್ತು ಸೆಪ್ಟೆಂಬರ್ 2023ರಲ್ಲಿ 1.2 ಲಕ್ಷ ಜಾಬ್ ಓಪನಿಂಗ್ ಆಗಿವೆ. ಇದು ಹಬ್ಬದ ಸಮಯದಲ್ಲಿ ಉದ್ಯೋಗಿಗಳ ಸಂಖ್ಯೆ ಏರಿಕೆ ಕಾಣಲು ಪ್ರಮುಖ ಕಾರಣವಾಗಿದೆ.
ನಗರದ ಬೆಡಿಕೆ ವಿಶಿಷ್ಟ ಮಾದರಿ ಹೊಂದಿದೆ. ದೆಹಲಿಯಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್, ಕಸ್ಟಮರ್ ಸಪೋರ್ಟ್ ಅಂಡ್ ಸೇಲ್ಸ್ ಮತ್ತು ಅಕೌಂಟಿಂಗ್, ಟೆಕ್ನಿಶಿಯನ್ಗಳಿಗೆ ಮತ್ತು ಮುಂಬೈನಲ್ಲಿ ಹಣಕಾಸು ಮತ್ತು ಎಚ್ಆರ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಾಗೂ ಬ್ಯುಸಿನೆಸ್ ಡೆವೆಲಪ್ಮೆಂಟ್ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತೀಯರು ಮಹಿಳೆಯರು ದಶಕಗಳಿಂದ ವಾರಕ್ಕೆ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡ್ತಿದ್ದಾರೆ: ಎಡೆಲ್ವೆಸ್ ಎಂಡಿ ರಾಧಿಕಾ