ETV Bharat / business

ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್​ಬಿಐ ನಿರ್ಧಾರ.. ಜಿಡಿಪಿ ನಮ್ಮ ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದ ದಾಸ್​ - ಆರ್​ಬಿಐ ಆರ್ಥಿಕ ನೀತಿ

RBI MPC ಸಭೆ, ರೆಪೋ ದರವು ಈ ಹಿಂದಿನ 6.5ರಷ್ಟೇ ಇರಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
author img

By

Published : Jun 8, 2023, 10:24 AM IST

Updated : Jun 8, 2023, 11:30 AM IST

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮೂರು ದಿನಗಳ ಚರ್ಚೆಯ ನಂತರ, ಅದರ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಪ್ರಮುಖವಾಗಿ ರೆಪೊ ದರದಲ್ಲಿ ತಟಸ್ಥತೆ ಕಾಯ್ದುಕೊಂಡಿದ್ದರೆ, ಜಿಡಿಪಿ ದರ ಅಂದಾಜಿಗಿಂತ ಹೆಚ್ಚು ದಾಖಲಾಗಿದೆ ಎಂದು ತಿಳಿಸಿದರು.

ಆರ್ಥಿಕ ನೀತಿಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಿಸಿದ ಅವರು, ಆರ್ಥಿಕ ಬಿಕ್ಕಟ್ಟು ನಿಯಂತ್ರಣದಲ್ಲಿರುವ ಕಾರಣ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ಸಲ ಘೋಷಿಸಿದಂತೆ ಶೇಕಡಾ 6.5 ರಷ್ಟೇ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎಂದರು.

ಕೇಂದ್ರೀಯ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು FY24 ಗಾಗಿ ಅದರ ಹಣದುಬ್ಬರ ಮುನ್ಸೂಚನೆಯನ್ನು 5.3 ಶೇಕಡಾದಿಂದ 5.2 ಶೇಕಡಾಕ್ಕೆ ಕಡಿಮೆ ಮಾಡಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಏಪ್ರಿಲ್ 6 ರಂದು ಘೋಷಿಸಿದ್ದರು.

ಎಂಪಿಸಿಯು ಪಾಲಿಸಿ ದರವನ್ನು ಯಥಾಸ್ಥಿತಿಯಲ್ಲಿಟ್ಟಿದೆ "ನಮ್ಮ ಕೆಲಸ ಇನ್ನೂ ಮುಗಿದಿಲ್ಲ" ಎಂದು ದಾಸ್ ಇದೇ ವೇಳೆ ಹೇಳಿದರು. ಇದೇ ವೇಳೆ ಹಣದುಬ್ಬರದ ವಿರುದ್ಧದ ಯುದ್ಧವು ಮುಗಿದಿಲ್ಲ. ಇದು ಆರ್ಥಿಕತೆ ಸುಸ್ಥಿರತೆಗೆ ಬರುವವರೆಗೂ ಮುಂದುವರೆಯಲಿದೆ ಎಂದು ಆರ್​ಬಿಐ ಗವರ್ನರ್​ ಒತ್ತಿ ಹೇಳಿದ್ದಾರೆ.

ಜಿಡಿಪಿ ದರ ಬೆಳವಣಿಗೆ: ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2022-23 ರಲ್ಲಿ 7.2% ಬೆಳವಣಿಗೆಯನ್ನು ದಾಖಲಿಸಿದೆ. ಇದು ಹಿಂದಿನ ಅಂದಾಜು ಶೇ 7ಕ್ಕಿಂತ ಹೆಚ್ಚಾಗಿದೆ. ಇದು ತನ್ನ ಹಿಂದಿನ ವರ್ಷಕ್ಕಿಂತಲೂ 10.1% ರಷ್ಟು ಮೀರಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಮುಂದಿನ ವರ್ಷ ಅಂದರೆ 2023-24ರ ಜಿಡಿಪಿ ಬೆಳವಣಿಗೆಯನ್ನು 6.5% ಆಗಿರಲಿದೆ ಎಂದು ಅಂದಾಜಿಸಬಹುದು ಎಂದಿದ್ದಾರೆ.

ದೇಶದಲ್ಲಿ ಗ್ರಾಹಕ ಬೆಲೆ ಹಣದುಬ್ಬರವು ಈ ವರ್ಷದ ಮಾರ್ಚ್ - ಏಪ್ರಿಲ್ ಅವಧಿಯಲ್ಲಿ ಕಡಿಮೆಯಾಗಿದೆ. ಅಂದರೆ, 2022-23 ರಲ್ಲಿ 6.7% ರಷ್ಟು ಇಳಿಕೆಯಾಗಿದೆ. ಇದು ಮುಂದಿನ ವರ್ಷವೂ ಇದೇ ಹಂತದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಮೌಲ್ಯಮಾಪನದ ಪ್ರಕಾರ, 2023-24 ರ ಹಣದುಬ್ಬರ 4% ಕ್ಕಿಂತ ಹೆಚ್ಚಿರುತ್ತದೆ ಎಂದು ಆರ್​ಬಿಐ ಗವರ್ನರ್ ಹೇಳಿದರು.

ರೆಪೋ ದರ ಅಂದರೇನು?: ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಸಾಲಕ್ಕೆ ತೆರಬೇಕಾದ ಬಡ್ಡಿ ದರವನ್ನು ರೆಪೋ ದರ ಎನ್ನಲಾಗುತ್ತದೆ. ಆರ್​ಬಿಐ ಕಾಲಕಾಲಕ್ಕೆ ಹಣದುಬ್ಬರದ ಆಧಾರದ ಮೇಲೆ ಏರಿಕೆ, ಇಳಿಕೆ ಮಾಡಲಿದೆ. ಹೆಚ್ಚಳವಾದರೆ ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿಯೂ ಏರಿಕೆಯಾಗುತ್ತದೆ. ರಿವರ್ಸ್ ರೆಪೋ ಎಂಬುದು ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಲ್ಲಿ ಇಡುವ ಠೇವಣಿಗಳಿಗೆ ಸಿಗುವ ಬಡ್ಡಿ ದರವಾಗಿದೆ.

2023-24ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಹಣದುಬ್ಬರ ಶೇ.5.1 ರಷ್ಟು ಇರಬಹುದು ಎಂದು ಆರ್​ಬಿಐ ಅಂದಾಜಿಸಿದೆ. ಒಂದು ವೇಳೆ ಮುಂಗಾರು ಮಳೆ ಉತ್ತಮವಾಗಿ ಸುರಿಯದೇ ಹೋದಲ್ಲಿ ಹಣದುಬ್ಬರ ಇನ್ನಷ್ಟು ಹೆಚ್ಚಾಗಬಹುದು. ಅಲ್ಲದೇ, ಆರ್​​ಬಿಐನ ಮುಂದಿನ ಮಾನಿಟರಿ ಪಾಲಿಸಿ ಕಮಿಟಿ ಸಭೆ 2023 ಆಗಸ್ಟ್ 8ರಿಂದ 10ರವರೆಗೂ ನಡೆಯಲಿದೆ.

ಸೆನ್ಸೆಕ್ಸ್​ ಮಾರುಕಟ್ಟೆ ಜಿಗಿತ: ಆರ್​ಬಿಐ ಎಂಪಿಸಿ ಸಭೆಯ ನಿರ್ಧಾರಗಳು ಪ್ರಕಟವಾಗುವ ಮುನ್ನ ಷೇರುಪೇಟೆ ಜಿಗಿತ ಕಂಡಿದೆ. ಜೂನ್ 6ರಂದು ಸೆನ್ಸೆಕ್ಸ್ ಸೂಚ್ಯಂಕ 63,000 ಅಂಕಗಳ ಮಟ್ಟ ದಾಟಿತ್ತು. ಆರ್​ಬಿಐ ನಿರ್ಧಾರಗಳ ಬಳಿಕ 300 ಅಂಕಗಳಷ್ಟು ಏರಿಕೆ ಕಂಡು, ಸದ್ಯ 63301 ರಲ್ಲಿ ವಹಿವಾಟು ನಡೆಸುತ್ತಿದೆ. ಷೇರುಪೇಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್​ 63 ಸಾವಿರ ಗಡಿ ದಾಟಿ ಮುನ್ನುಗ್ಗುತ್ತಿದೆ. ಇನ್ನು, ನಿಫ್ಟಿ ಸೂಚ್ಯಂಕವೂ ಪ್ರಗತಿಯಲ್ಲಿದ್ದು, 18773 ರಷ್ಟು ದಾಖಲಿಸಿದೆ.

ರೆಪೊ ದರವು 6.5% ನಲ್ಲಿ ಬದಲಾಗದೆ ಉಳಿಯುತ್ತದೆ ಎಂದು ಆರ್​ಬಿಐ ಪ್ರಕಟಿಸಿದ್ದು, ಆರ್‌ಬಿಐನ ನೀತಿ ಅನ್ವಯ ದರಗಳು ಇಂತಿವೆ.

  • ರೆಪೋ ದರ: 6.50%
  • SDF ದರ: 6.25%
  • MSF ದರ: 6.75%
  • ಬ್ಯಾಂಕ್ ದರ: 6.75%
  • ರಿವರ್ಸ್ ರೆಪೋ: 3.35%
  • CRR: 4.50%
  • SLR: 18.00%

ಇದನ್ನು ಓದಿ: ಮತ್ತಷ್ಟು ಚೇತರಿಕೆ ಕಂಡ ಭಾರತೀಯ ಷೇರು ಮಾರುಕಟ್ಟೆ: ನಾಳಿನ ಹಣಕಾಸು ನೀತಿ ಸಭೆ ಮೇಲೆ ಹೂಡಿಕೆದಾರರ ಚಿತ್ತ

Last Updated : Jun 8, 2023, 11:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.