ETV Bharat / business

Crude oil: ಕಚ್ಚಾ ತೈಲ ಬೇಡಿಕೆ 2028ಕ್ಕೆ ಗಮನಾರ್ಹ ಕುಸಿತ- IEA ವರದಿ - ಎಲೆಕ್ಟ್ರಿಕ್ ವಾಹನಗಳ ಹೆಚ್ಚಿದ ಬಳಕೆ

ಜಾಗತಿಕ ಕಚ್ಚಾ ತೈಲದ ಬೇಡಿಕೆ 2028ರ ವೇಳೆಗೆ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ.

Growth in global oil demand to slow significantly

author img

By

Published : Jun 14, 2023, 6:31 PM IST

ಲಂಡನ್ : ಜಾಗತಿಕ ಕಚ್ಚಾ ತೈಲ ಬೇಡಿಕೆಯ ಬೆಳವಣಿಗೆಯು 2028 ರ ವೇಳೆಗೆ ಗಣನೀಯವಾಗಿ ನಿಧಾನಗೊಳ್ಳಲಿದೆ ಮತ್ತು ದಶಕದ ಅಂತ್ಯದ ಮೊದಲು ಬೇಡಿಕೆಯು ಗರಿಷ್ಠ ಮಟ್ಟದಲ್ಲಿರಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹೊಸ 'ಮಧ್ಯಮ-ಅವಧಿಯ ವರದಿ'ಯಲ್ಲಿ ಇಂಟರ್ ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ಈ ಮಾಹಿತಿ ನೀಡಿದೆ ಎಂದು ವರದಿ ತಿಳಿಸಿದೆ. 2026 ರ ನಂತರ ಸಾರಿಗೆಗಾಗಿ ತೈಲ ಬಳಕೆಯು ಕ್ಷೀಣಿಸಲಿದೆ. ಎಲೆಕ್ಟ್ರಿಕ್ ವಾಹನಗಳ ಹೆಚ್ಚಿದ ಬಳಕೆ, ಜೈವಿಕ ಇಂಧನಗಳ ಬೆಳವಣಿಗೆ ಮತ್ತು ಇಂಧನ ಆರ್ಥಿಕತೆಯನ್ನು ಸುಧಾರಿಸುವುದರಿಂದ ತೈಲ ಬಳಕೆ ಕಡಿಮೆಯಾಗಲಿದೆ.

ಆದಾಗ್ಯೂ ಪೆಟ್ರೋಕೆಮಿಕಲ್ಸ್ ಬೇಡಿಕೆಯಿಂದ ಒಟ್ಟಾರೆ ಬಳಕೆಯು ಹೆಚ್ಚಾಗಿರಲಿದೆ ಎಂದು IEA ಹೇಳಿದೆ. ಪ್ರಪಂಚದಲ್ಲಿನ ತೈಲ ಬೇಡಿಕೆಯು ಮುಂಬರುವ ವರ್ಷಗಳಲ್ಲಿ ನಿಧಾನವಾಗಲಿದ್ದು, ಬಹುತೇಕ ಸ್ಥಗಿತವಾಗುವ ಹಂತಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ತೈಲ ಬೆಲೆಗಳ ಏರಿಕೆ ಮತ್ತು ಉಕ್ರೇನ್ ರಷ್ಯಾ ಯುದ್ಧದ ಕಾರಣದಿಂದ ತೈಲ ಸಾಗಾಟಕ್ಕೆ ಎದುರಾಗಬಹುದಾದ ಭದ್ರತಾ ಅಪಾಯಗಳ ಕಾರಣದಿಂದ ವಿಶ್ವವು ಹಸಿರು ಇಂಧನಗಳ ಕಡೆಗೆ ವಾಲುವ ಸಾಧ್ಯತೆಯಿದೆ.

ಪೆಟ್ರೋಕೆಮಿಕಲ್ ಮತ್ತು ವಾಯುಯಾನ ಕ್ಷೇತ್ರಗಳ ಸ್ಥಿರವಾದ ಬೇಡಿಕೆಯ ಕಾರಣದಿಂದ 2022 ಮತ್ತು 2028 ರ ನಡುವೆ ಜಾಗತಿಕ ತೈಲ ಬೇಡಿಕೆಯು ಶೇಕಡಾ 6 ರಷ್ಟು ಏರಿಕೆಯಾಗಿ ದಿನಕ್ಕೆ 105.7 ಮಿಲಿಯನ್ ಬ್ಯಾರೆಲ್‌ಗಳಿಗೆ (mb/d) ತಲುಪಲಿದೆ ಎಂದು IEA ಊಹಿಸಿದೆ. ಆದರೆ ವಾರ್ಷಿಕ ಬೇಡಿಕೆಯ ಬೆಳವಣಿಗೆಯು ಈ ವರ್ಷ ಇರುವ ದಿನಕ್ಕೆ 2.4 ಮಿಲಿಯನ್ ಬ್ಯಾರೆಲ್‌ಗಳಿಂದ 2028 ರಲ್ಲಿ ಕೇವಲ 0.4 mb/d ಗೆ ಕುಗ್ಗುವ ನಿರೀಕ್ಷೆಯಿದೆ.

ಕೋವಿಡ್​ ನಂತರದ ಅವಧಿಯಲ್ಲಿ ಚೀನಾದಲ್ಲಿ ತೈಲ ಬೇಡಿಕೆ ಅತ್ಯಧಿಕವಾಗಿದೆ. ಆದರೆ ಈ ಬೇಡಿಕೆಯು 2024ರ ನಂತರ ಇಳಿಕೆಯಾಗುವ ಸಾಧ್ಯತೆಯಿದೆ. "ಎಲೆಕ್ಟ್ರಿಕ್ ವಾಹನಗಳು, ಇಂಧನ ದಕ್ಷತೆ ಮತ್ತು ಇತರ ತಂತ್ರಜ್ಞಾನಗಳ ಪ್ರಗತಿಯ ಕಾರಣದಿಂದ ಶುದ್ಧ ಇಂಧನ ಆರ್ಥಿಕತೆಯತ್ತ ಬದಲಾಗುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತಿದೆ. ಈ ದಶಕದ ಅಂತ್ಯದ ಮೊದಲು ಜಾಗತಿಕ ತೈಲ ಬೇಡಿಕೆಯು ಅತ್ಯಧಿಕವಾಗಲಿದೆ" ಎಂದು ಐಇಎ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್ ಬಿರೋಲ್ ಹೇಳುತ್ತಾರೆ.

ಕಚ್ಚಾ ತೈಲವು ನೈಸರ್ಗಿಕವಾಗಿ ಲಭ್ಯವಾಗುವ ದ್ರವ ಪೆಟ್ರೋಲಿಯಂ ಉತ್ಪನ್ನವಾಗಿದ್ದು, ಹೈಡ್ರೋಕಾರ್ಬನ್ ನಿಕ್ಷೇಪಗಳು ಮತ್ತು ಲಕ್ಷಾಂತರ ವರ್ಷಗಳ ಹಿಂದೆ ವಾಸಿಸುತ್ತಿದ್ದ ಪ್ರಾಣಿಗಳು ಮತ್ತು ಸಸ್ಯಗಳ ಅವಶೇಷಗಳಿಂದ ರೂಪುಗೊಂಡ ಇತರ ಸಾವಯವ ವಸ್ತುಗಳಿಂದ ಕೂಡಿದೆ. ಕಚ್ಚಾ ತೈಲವು ನವೀಕರಿಸಲಾಗದ ಸಂಪನ್ಮೂಲವಾಗಿದೆ. ಅಂದರೆ ನಾವು ಅದನ್ನು ಬಳಸುವ ಮಟ್ಟದಲ್ಲಿ ಮತ್ತೆ ಅದನ್ನು ನೈಸರ್ಗಿಕವಾಗಿ ತಯಾರಿಸಲಾಗುವುದಿಲ್ಲ. ಹೀಗಾಗಿ ಇದು ಸೀಮಿತ ಸಂಪನ್ಮೂಲವಾಗಿದೆ.

ಕಚ್ಚಾ ತೈಲವು ಕಚ್ಚಾ ನೈಸರ್ಗಿಕ ಸಂಪನ್ಮೂಲವಾಗಿದ್ದು ಇದನ್ನು ಭೂಮಿಯಿಂದ ಹೊರತೆಗೆಯಲಾಗುತ್ತದೆ ಮತ್ತು ಗ್ಯಾಸೋಲಿನ್, ಜೆಟ್ ಇಂಧನ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳಂತಹ ಉತ್ಪನ್ನಗಳಾಗಿ ಸಂಸ್ಕರಿಸಲಾಗುತ್ತದೆ. ಪೆಟ್ರೋಲಿಯಂ ಎಂಬ ಪದವು ಕಚ್ಚಾ ತೈಲ, ನೆಲದಿಂದ ಹೊರತೆಗೆಯಲಾದ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಕಚ್ಚಾ ತೈಲದಿಂದ ರೂಪುಗೊಂಡ ಇತರ ಉತ್ಪನ್ನಗಳನ್ನು ಉಲ್ಲೇಖಿಸುವ ಹೆಚ್ಚು ಸಾಮಾನ್ಯ ಪದವಾಗಿದೆ.

ಇದನ್ನೂ ಓದಿ : Wheat price: ಗೋಧಿ ವ್ಯಾಪಾರಿಗಳಿಂದ ದಾಸ್ತಾನು ಮಾಹಿತಿ ಪಡೆಯುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.