ETV Bharat / business

BSE Sensex: ಮೊದಲ ಬಾರಿಗೆ 66,000 ಗಡಿ ಮೀರಿ ಹೊಸ ದಾಖಲೆ! - ವಿಶಾಲವಾದ ಎನ್‌ಎಸ್‌ಇ ನಿಫ್ಟಿ

ಭಾರತದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಬಿಎಸ್​ಇ ಸೆನ್ಸೆಕ್ಸ್​ ಇದೇ ಮೊದಲ ಬಾರಿಗೆ 66000 ಗಡಿ ದಾಟಿದೆ.

BSE Sensex crosses milestone of 66,000 points led by IT heavyweights

author img

By

Published : Jul 13, 2023, 12:16 PM IST

ನವದೆಹಲಿ: ಗುರುವಾರ ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 66,000 ಅಂಕಗಳ ಮೈಲಿಗಲ್ಲನ್ನು ದಾಟಿದೆ. ಬಿಎಸ್‌ಇ ಸೆನ್ಸೆಕ್ಸ್ 625 ಪಾಯಿಂಟ್‌ಗಳ ಏರಿಕೆಯೊಂದಿಗೆ 66,019 ಗೆ ತಲುಪಿದೆ. ಯುಎಸ್ ಮಾರುಕಟ್ಟೆಯ ಧನಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಬಿಎಸ್​ಇ ಸೆನ್ಸೆಕ್ಸ್​ ಏರಿಕೆ ಕಾಣುತ್ತಿದೆ. ನಂತರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 586 ಅಂಕಗಳ ಏರಿಕೆಯೊಂದಿಗೆ 65,980ಕ್ಕೆ ತಲುಪಿದೆ. ಐಟಿ ಷೇರುಗಳಾದ ಟಿಸಿಎಸ್, ಇನ್ಫೋಸಿಸ್, ಟೆಕ್ ಮಹೀಂದ್ರಾ ಶೇಕಡಾ 2 ಕ್ಕಿಂತ ಹೆಚ್ಚಾಗಿವೆ.

ಬೆಳಗ್ಗೆ 10.30 ರ ಹೊತ್ತಿಗೆ, ಸೆನ್ಸೆಕ್ಸ್ 638.48 ಪಾಯಿಂಟ್‌ಗಳು ಅಥವಾ 0.98 ಶೇಕಡಾ ಏರಿಕೆಯಾಗಿ 66,032.38 ಕ್ಕೆ ವಹಿವಾಟು ನಡೆಸುತ್ತಿತ್ತು. ಹಾಗೆಯೇ ವಿಶಾಲವಾದ ಎನ್‌ಎಸ್‌ಇ ನಿಫ್ಟಿ-50 ಇದು 175.15 ಪಾಯಿಂಟ್‌ಗಳು ಅಥವಾ ಶೇಕಡಾ 0.9 ರಷ್ಟು ಏರಿಕೆಯಾಗಿ 19,559.45 ರಲ್ಲಿ ವಹಿವಾಟು ನಡೆಸಿತು.

ಹೂಡಿಕೆ ತಜ್ಞರ ಪ್ರತಿಕ್ರಿಯೆ: ಇತ್ತೀಚಿನ ಅಮೆರಿಕದಲ್ಲಿನ ಗ್ರಾಹಕ ಹಣದುಬ್ಬರ ದರ ಶೇ 3ಕ್ಕೆ ಇಳಿಕೆಯಾಗಿರುವುದರಿಂದ ಜಾಗತಿಕ ಷೇರು ಮಾರುಕಟ್ಟೆಗೆ ಮತ್ತೆ ಒಂದಿಷ್ಟು ಉತ್ತೇಜನ ಸಿಗಲಿದೆ. ಗ್ರಾಹಕ ಹಣದುಬ್ಬರ ದರ ಶೇಕಡಾ 3.1 ರಷ್ಟು ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಮುಖ್ಯವಾಗಿ ಪ್ರಮುಖ ಹಣದುಬ್ಬರ ದರವು ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಜಯ ಕುಮಾರ್ ವಿ.ಕೆ ಹೇಳಿದರು.

ಅಮೆರಿಕದಲ್ಲಿ ಹಣದುಬ್ಬರವಿಳಿತ ಪ್ರಕ್ರಿಯೆ ನಡೆಯುತ್ತಿರುವುದು ಮತ್ತು ಜುಲೈ 26 ರ ದರ ನಿರ್ಧಾರದಲ್ಲಿ ಮತ್ತೊಮ್ಮೆ ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಹೋಗಬಹುದು ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ. ಇದು ಜಾಗತಿಕವಾಗಿ ಪ್ರಮುಖ ಸಕಾರಾತ್ಮಕ ಸೂಚನೆಯಾಗಿದೆ ಎಂದು ಅವರು ಹೇಳಿದರು.

ಫೆಡರಲ್ ರಿಸರ್ವ್ ಅಮೆರಿಕದಲ್ಲಿ ಮತ್ತೆ ಬಡ್ಡಿದರ ಹೆಚ್ಚಳ ಮಾಡದಿರಬಹುದು ಎಂಬ ಸೂಚನೆಗಳ ಹಿನ್ನೆಲೆಯಲ್ಲಿ ಗುರುವಾರ ಏಷ್ಯಾದ ಆರಂಭಿಕ ವ್ಯಾಪಾರದಲ್ಲಿ ತೈಲ ಬೆಲೆಗಳು ಏರಿದವು. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ 0004 GMT ವೇಳೆಗೆ ಪ್ರತಿ ಬ್ಯಾರೆಲ್‌ಗೆ $80.17 ಕ್ಕೆ 6 ಸೆಂಟ್‌ಗಳಷ್ಟು ಏರಿತು ಮತ್ತು U.S. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕ್ರೂಡ್ ಫ್ಯೂಚರ್ಸ್​ 4 ಸೆಂಟ್ಸ್ ಅಥವಾ $75.79 ಕ್ಕೆ ಹೆಚ್ಚಾಗಿದೆ. ಕಚ್ಚಾ ತೈಲದ ಅಗ್ರ ಉತ್ಪಾದಕ ಸೌದಿ ಅರೇಬಿಯಾ ಕಳೆದ ವಾರ ಆಗಸ್ಟ್‌ನಲ್ಲಿ ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಳಷ್ಟು ಉತ್ಪಾದನೆಯನ್ನು (ಬಿಪಿಡಿ) ಹೆಚ್ಚಿಸುವ ವಾಗ್ದಾನ ಮಾಡಿತ್ತು. ಆದರೆ ರಷ್ಯಾ ತನ್ನ ರಫ್ತುಗಳಲ್ಲಿ 5,00,000 ಬಿಪಿಡಿಗಳಷ್ಟು ಕಡಿತಗೊಳಿಸುತ್ತಿದೆ.

ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ಅದರ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಇಂದು ಬೆಂಗಳೂರಿನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ರೂ. 2,700 ಆಗಿದೆ. ಹಾಗೆಯೇ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಗೋಲ್ಡ್​ ಫ್ಯೂಚರ್ಸ್​ ಸಕಾರಾತ್ಮಕವಾಗಿ ವಹಿವಾಟು ನಡೆಸಿವೆ.

ಇದನ್ನೂ ಓದಿ : ಅಮೆಜಾನ್​ ಪ್ರೈಮ್​​ನಲ್ಲಿ ಬರಲಿದೆ ಸ್ಟಾರ್ಟಪ್ ಕೇಂದ್ರಿತ ಶೋ; ಸೆಲೆಬ್ರಿಟಿಗಳು, ಹೂಡಿಕೆದಾರರು ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.