ETV Bharat / business

10ರಲ್ಲಿ 7 ಭಾರತೀಯ ಉದ್ಯೋಗಾಕಾಂಕ್ಷಿಗಳು ವೇತನಕ್ಕಿಂತ ಅನುಕೂಲತೆಗೆ ಹೆಚ್ಚು ಒತ್ತು ನೀಡುತ್ತಾರೆ; ಅಧ್ಯಯನ

ಇಂದು ಕೆಲಸ ಎಂಬುದು ಕೇವಲ ಉದ್ಯೋಗಾದಾತರ ಅನುಕೂಲತೆಗಿಂತ ಉದ್ಯೋಗಿಗಳ ಅನುಕೂಲತೆಯಾಗಿ ಮಾರ್ಪಟ್ಟಿದೆ.

author img

By

Published : Jul 19, 2023, 3:36 PM IST

7 in 10 Indian job seekers looking for work flexibility than salary

ಬೆಂಗಳೂರು: 10ರಲ್ಲಿ 7 ಭಾರತೀಯ ಉದ್ಯೋಗಾಕಾಂಕ್ಷಿಗಳು ಸಂಬಳಕ್ಕಿಂತ ಹೆಚ್ಚಾಗಿ ಕೆಲಸದ ಆನುಕೂಲತೆಗೆ ಅಂದರೆ, ವರ್ಕ್​ ಫ್ರಂ ಹೋಂ, ತಮ್ಮದೇ ಮನೆಗೆ ಒಂದಷ್ಟು ಸಮಯ ಮೀಸಲು, ಕೆಲಸದ ನಡುವೆ ಅಗತ್ಯ ವಿರಾಮದಂತಹ ಅಂಶಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಎಂದು ಹೊಸ ವರದಿ ತಿಳಿಸಿದೆ.

ಪ್ರಮುಖ ಉದ್ಯೋಗ ತಾಣವಾಗಿರುವ ಇಂಡೀಡ್​ ಪ್ರಕಾರ, ಶೇ 70ರಷ್ಟು ಭಾರತೀಯ ಉದ್ಯೋಗಾಕಾಂಕ್ಷಿಗಳು ಹೈಬ್ರೀಡ್​ ಅಥವಾ ರಿಮೋಟ್​ ಕೆಲಸದಂಹ ವ್ಯವಸ್ಥೆಗಳು ಕೆಲಸದ ವಿಧಾನಗಳನ್ನು ಹೆಚ್ಚು ಪರಿಗಣಿಸುತ್ತಾರೆ.

ಉದ್ಯೋಗಾದಾತರ ಬೇಡಿಕೆಯ ಸ್ವರೂಪವೂ ಬದಲಾಗಬೇಕಿದೆ: ಕೆಲಸವನ್ನು ಅವರ ಗುರಿಯಾಗಿ ಕಾಣದೇ ಅದನ್ನು ಪ್ರಯಾಣವಾಗಿ ನಾವು ನೋಡಬೇಕಿದೆ. ಈ ಹಿನ್ನೆಲೆ ಕೆಲಸದ ಪ್ರಕ್ರಿಯೆಯನ್ನು ಸುಗಮಗೊಳಿಸುವುದು, ಆಕಾಂಕ್ಷೆ ನಿರ್ಮಾಣ ಮತ್ತು ಸಹಾನುಭೂತಿಗಳ ಪರಿಗಣನೆ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ನಾವು ಹಿಡಿದಿಡಬೇಕಿದೆ. ಈ ಹಿನ್ನೆಲೆ ಉದ್ಯೋಗಾದಾತರು, ಪ್ರತಿಭಾವಂತರನ್ನು ಉಳಿಸಿಕೊಳ್ಳಲು ಈ ಆದ್ಯತೆಗಳ ಬಗ್ಗೆ ಅರಿವು ಹೊಂದಿದ್ದು, ಅವುಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಇಂಡಿಡ್​ ಇಂಡಿಯಾದ ಸೇಲ್ಸ್​ ಮುಖ್ಯಸ್ಥ ಶಶಿ ಕುಮಾರ್​ ತಿಳಿಸಿದ್ದಾರೆ.

ಈ ಅಧ್ಯಯನದಲ್ಲಿ 1,810 ವ್ಯಕ್ತಿಗಳನ್ನು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ 561 ಮಂದಿ ಉದ್ಯೋಗದಾತರು ಆದರೆ, 1,249 ಮಂದಿ ಉದ್ಯೋಗಾಕಾಂಕ್ಷಿಗಳಾಗಿದ್ದಾರೆ.

ಇದಕ್ಕಿಂತ ಮಿಗಿಲಾಗಿ ಶೇ 69ರಷ್ಟು ಭಾರತೀಯ ಉದ್ಯೋಗಾಕಾಂಕ್ಷಿಗಳು ತಮ್ಮ ಮನೆ ಅಥವಾ ಪ್ರಸ್ತುತ ಕೆಲಸದ ಸ್ಥಳದ ನಡುವಿನ ಅಂತರವನ್ನು ಕೂಡ ಪ್ರಮುಖವಾಗಿ ಪರಿಗಣಿಸುತ್ತಾರೆ. ಶೇ 67 ಉದ್ಯೋಗಾಕಾಂಕ್ಷಿಗಳು ಸಂಬಳ, ಆರೋಗ್ಯ ವಿಮೆ, ಕುಟುಂಬ ರಜೆ ನಿಯಮ ಮತ್ತು ಕೆಲಸದ ಜೊತೆಗೆ ಇತರೆ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಗಣಿಸುತ್ತಾರೆ.

ಹೈಬ್ರಿಡ್​ ಕೆಲಸಕ್ಕೆ ಒತ್ತು: ಇನ್ನು ಶೇ 63ರಷ್ಟು ಉದ್ಯೋಗಾಕಾಂಕ್ಷಿಗಳು ಕೆಲಸದಲ್ಲಿ ಹೈಬ್ರಿಡ್​ ಅಂಶವನ್ನು ಗಮನಿಸುತ್ತಾರೆ. ಈ ಮೂಲಕ ಅವರು ಕೆಲವು ದಿನ ಮನೆಯಿಂದ ಮತ್ತು ಕೆಲವು ದಿನ ಕಚೇರಿಯಿಂದ ಕೆಲಸ ನಿರ್ವಹಣೆಗೆ ಮನ್ನಣೆ ನೀಡುತ್ತಾರೆ.

ಮತ್ತೆ ಕೆಲವು ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮತ್ತು ಸಂದರ್ಶನದ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ಅವರು ಬೇಡುತ್ತಾರೆ. ಶೇ 48ರಷ್ಟು ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅವರು ತಮ್ಮ ವೇತನ ಶ್ರೇಣಿ ಎಷ್ಟಿರಲಿದೆ ಎಂಬುದನ್ನು ತಿಳಿಯುವ ಉದ್ದೇಶವನ್ನು ಹೊಂದಿರುತ್ತಾರೆ. ಕೇವಲ 15 ಪ್ರತಿಶತದಷ್ಟು ಜನರು 10-15 ವ್ಯವಹಾರ ದಿನಗಳಲ್ಲಿ ನೇಮಕಾತಿದಾರರಿಂದ ಹಿಂತಿರುಗಿ ಕೇಳಿದ್ದಾರೆ ಎಂದು ಹೇಳಿದ್ದಾರೆ. ಆದರೆ 63 ಪ್ರತಿಶತದಷ್ಟು ಜನರು ಹೆಚ್ಚು ಸಮಯ ಕಾಯುತ್ತಿದ್ದಾರೆ.

ಕಾಲ ಕಳೆದಂತೆ ಉದ್ಯೋಗದ ಸ್ವರೂಪ ಬದಲಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳ ಬೇಡಿಕೆಗಳು ಬದಲಾಗುತ್ತಿದೆ. ಈ ಹಿಂದೆ ಕೆಲಸ, ವೇತನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ಉದ್ಯೋಗಾಕಾಂಕ್ಷಿಗಳು ಇಂದು ಕೆಲಸದ ಸ್ಥಳದಲ್ಲಿನ ಉತ್ತಮ ವಾತಾವಾರಣಕ್ಕೆ ಮನ್ನಣೆ ನೀಡುತ್ತಿದ್ದಾರೆ. ಕೆಲಸದ ಹೊರತಾಗಿ ವೈಯಕ್ತಿಕ ಜೀವನಕ್ಕೆ ಆದ್ಯತೆಯನ್ನು ಹೆಚ್ಚಿಸಿದ್ದು, ಅದಕ್ಕೆ ಪೂರಕವಾದ ಕೆಲಸಗಳನ್ನು ನೋಡುತ್ತಿದ್ದಾರೆ.

ಇದನ್ನೂ ಓದಿ: Job Alert: ರಾಯಚೂರು ಜಿಲ್ಲಾ ಪಂಚಾಯತಿಯಲ್ಲಿದೆ ಉದ್ಯೋಗ; 35 ಸಾವಿರ ರೂಪಾಯಿ ವೇತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.