ETV Bharat / business

ಹೈಪರ್​​ ಲೋಕಲ್​ ಉದ್ಯೋಗ ಸೃಷ್ಟಿಗೆ ಮುಂದಾದ ಸ್ವಿಗ್ಗಿ; 10 ಸಾವಿರ ನೇಮಕಾತಿಗೆ ನಿರ್ಧಾರ - ಡೆಲಿವರಿ ಪಾರ್ಟನರ್​ ಉದ್ಯೋಗ ಕೂಡ

ಹೈಪರ್​ ಲೋಕಲ್​ ಉದ್ಯೋಗ ಸೃಷ್ಟಿಗೆ ಸ್ವಿಗ್ಗಿ ಮುಂದಾಗಿದ್ದೆ. ಸ್ವಿಗ್ಗಿ ಶೀಘ್ರವಾಗಿ ತಮ್ಮ ವಾಣಿಜ್ಯ ದಿನಸಿ ಸೇವೆಗಳ ರವಾನೆಗೆ 10 ಸಾವಿರ ಉದ್ಯೋಗ ಸೃಷ್ಟಿಗೆ ಮುಂದಾಗಿದೆ

10-thousand-jobs-created-by-swiggy-participant-apna

author img

By

Published : Apr 27, 2023, 5:33 PM IST

ನವದೆಹಲಿ: ಇ ಕಾಮರ್ಸ್​ ಮಾರುಕಟ್ಟೆ ದೇಶದಲ್ಲಿ ಅಗಾಧವಾಗಿ ಬೆಳೆಯುತ್ತಿದ್ದು, ಡೆಲಿವರಿ ಪಾರ್ಟನರ್​ ಉದ್ಯೋಗ ಕೂಡ ಏರಿಕೆ ಕಾಡುತ್ತಿದೆ. ಕೇವಲ ದೊಡ್ಡ ದೊಡ್ಡ ನಗರದಲ್ಲಿ ಹೆಚ್ಚಾಗಿ ಸೃಷ್ಟಿಯಾಗುತ್ತಿರುವ ಈ ಉದ್ಯೋಗವನ್ನು ಇದೀಗ ಟೈರ್​ 2 ಮತ್ತು ಟೈರ್​ 3 ನಗರಗಳಲ್ಲಿ ಬೇಡಿಕೆ ಪಡೆದಿದೆ. ಇದೇ ಹಿನ್ನೆಲೆಯಲ್ಲಿ ಹೈಪರ್​ ಲೋಕಲ್​ ಉದ್ಯೋಗ ಸೃಷ್ಟಿಗೆ ಸ್ವಿಗ್ಗಿ ಮುಂದಾಗಿದೆ.

ಸ್ವಿಗ್ಗಿ ಶೀಘ್ರವಾಗಿ ತಮ್ಮ ವಾಣಿಜ್ಯ ದಿನಸಿ ಸೇವೆಗಳ ರವಾನೆಗೆ 10 ಸಾವಿರ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಇದಕ್ಕಾಗಿ ಸ್ವಿಗ್ಗೊ ವೃತ್ತಿಪರ ನೆಟ್​ವರ್ಕಿಂಗ್​ ಕಂಪನಿ ಅಪ್ನಾ ಮುಂದಾಗಿದೆ. ಇದಕ್ಕಾಗಿ ಎರಡು ಸಂಸ್ಥೆಗಳು ಜಂಟಿಯಾಗಿ ಶೀಘ್ರದಲ್ಲೇ ವಾಣಿಜ್ಯ ದಿನಸಿ ಸೇವೆ ನೀಡುವ ಇನ್​ಸ್ಟಾಮಾರ್ಟ್​ನೊಂದಿಗೆ ಪಾಲುದಾರಿಕೆ ನಡೆಸಲು ಮುಂದಾಗಿದೆ ಎಂದು ಪ್ರಕಟಿಸಿದೆ. ರೆಡ್​ಸೀರ್​ ಮಾರುಕಟ್ಟೆ ಸಂಶೋಧನೆ ಅನುಸಾರ, ಈ ವಾಣಿಜ್ಯ ಸಂಸ್ಥೆ 2025ರ ಹೊತ್ತಿಗೆ 5.5 ಡಾಲರ್​ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಶೀಘ್ರಗತಿಯ ವಿತರಣೆಗೆ ಹೆಚ್ಚಿನ ಡೆಲಿವರಿ ಪಾಲುದಾರರ ಅವಶ್ಯಕತೆ ಇದ್ದು, ಈ ಬೇಡಿಕೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.

ಈಗಾಗಲೇ 500 ನಗರಗಳಲ್ಲಿ ಸ್ವಿಗ್ಗಿ ತನ್ನ ಆಹಾರ ವಿತರಣೆ ಉಪಸ್ಥಿತಿಯನ್ನು ಹೊಂದಿದ್ದು, ಇನ್ಸ್ಟಾಮಾರ್ಟ್​ 25 ನಗರದಲ್ಲಿ ತನ್ನ ಅಧಿಪತ್ಯ ಹೊಂದಿದೆ. ಇದೀಗ ಟೈರ್​ 2 ಮತ್ತು ಟೈರ್​​​​​​ 3 ನಗರಗಳಲ್ಲಿ ನಾವು ಆನ್​ಬೋರ್ಡ್​ ಗ್ರಾಹಕರ ಮೇಲೆ ಗಮನಹರಿಸಿದ್ದೇವೆ. ಅಪ್ನಾ ಜೊತೆಗಿನ ಸಹಭಾಗಿತ್ವ ನಮ್ಮ ಡೆಲಿವರಿ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಜೊತೆಗೆ ಸಣ್ಣ ನಗರದಲ್ಲಿ ಇನ್ಸ್ಟಾಮಾರ್ಟ್​ ಬೆಳವಣಿಗೆ ಬೇಡಿಕೆಯನ್ನು ಮುಟ್ಟುವ ಗುರಿ ಹೊಂದಿದೆ ಎಂದು ಸ್ವಿಗ್ಗಿ ಕಂಪನಿ ಉಪಾಧ್ಯಕ್ಷ ಆಗಿರುವ ಕೇದರ್​ ಗೋಖುಲೆ ತಿಳಿಸಿದ್ದಾರೆ.

ಭಾರತದಲ್ಲಿ ಶೀಘ್ರ ವಾಣಿಜ್ಯ ಉದಯವಾಗುತ್ತಿದ್ದು, ಗ್ರಾಹಕರು ಶಾಂಪಿಂಗ್​ ಸೌಕರ್ಯವನ್ನು ಅನುಭವಿಸುತ್ತಿದ್ದಾರೆ. ಇ ಕಾರ್ಮಸ್​ ಉದ್ಯಮದಲ್ಲಿ ಈ ಬೆಳವಣಿಯಿಂದಾಗಿ ದೇಶಾದ್ಯಂತ ಡೆಲಿವರಿ ಬಾಯ್​ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇನ್ನು 2029-30ರ ಹೊತ್ತಿಗೆ ದೇಶದಲ್ಲಿ 23.5 ಡೆಲಿವರಿ ವರ್ಕ್​ಫೋರ್ಸ್​ ಇರಲಿದೆ ಎಂದು ಉದ್ಯಮ ವಲಯದ ವರದಿ ತಿಳಿಸಿದೆ.

2022ರಲ್ಲಿ ಟೈರ್​ 2, ಟೈರ್​ 3 ನಗರಗಳಲ್ಲಿ 1.5 ಮಿಲಿನ್​ ಬಳಕೆದಾರರು ಅಪ್ನಾದಲ್ಲಿ 3 ಮಿಲಿಯನ್​ ವಿತರಣೆ ಮಾಡಿದ್ದಅರೆ. ಇದರಲ್ಲಿ ಶೇ 70ರಷ್ಟು ಬಳಕೆದಾರರ ಬೆಳವಣಿಗೆ ಮತ್ತು ಡೆಲಿವರಿ ವಲಯದಲ್ಲಿ ಕಾಣಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಅವಕಾಶಗಳಿಂದಾಗಿ ದೇಶದಲ್ಲಿ ಡೆಲಿವರಿ ಪಾರ್ಟನರ್​ ಉದ್ಯೋಗ ಸೃಷ್ಟಿಯಾಗುತ್ತಿದೆ. ಈ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಸ್ವಿಗ್ಗಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಮುಂದಿನ ದಿನಗಳಲ್ಲಿ ತುಂಬಲಿದೆ ಎಂದು ಅಪ್ನಾದ ಸಿಇಒ ಮತ್ತು ಸಂಸ್ಥಾಪಕರಾಗಿರುವ ನಿರ್ಮಿತಾ ಪರಿಖ್​ ತಿಳಿಸಿದ್ದಾರೆ.

ಇದನ್ನೂ ಓದಿ: ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಟಿಂಗ್ ಟಾಂಗ್ ಆ್ಯಪ್​ : ಇದು ಸ್ಲಂ ಯುವಕನ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.