ETV Bharat / business

ವಾಹನ ಮಾಲೀಕರ ಜೇಬಿಗೆ ಯುಪಿ ಸರ್ಕಾರ ಕತ್ತರಿ.. ಪೆಟ್ರೋಲ್​ ಬೆಲೆ 2.35 ರೂ. ಹೆಚ್ಚಿಸಿದ ಸಿಎಂ ಯೋಗಿ..

ಪರಿಷ್ಕೃತ ನೂತನ ದರವು ಸೋಮವಾರದ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಉತ್ತರ ಪ್ರದೇಶದಾದ್ಯಂತ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ಕ್ರಮವಾಗಿ ಶೇ.26.80 ಮತ್ತು ಶೇ. 17.48ರಷ್ಟು ವ್ಯಾಟ್​ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Aug 20, 2019, 5:25 PM IST

ಲಖ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು​ ಡೀಸೆಲ್​ ಮೇಲಿನ ಮೌಲ್ಯ ಆಧಾರಿತ ತೆರಿಗೆಯನ್ನು (ವ್ಯಾಟ್​) ಹೆಚ್ಚಿಸಿದೆ.

ಪರಿಷ್ಕೃತ ನೂತನ ದರವು ಸೋಮವಾರದ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಉತ್ತರಪ್ರದೇಶದಾದ್ಯಂತ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ಕ್ರಮವಾಗಿ ಶೇ. 26.80 ಮತ್ತು ಶೇ. 17.48ರಷ್ಟು ವ್ಯಾಟ್​ ಏರಿಕೆಯಾಗಿದೆ.

ವಾಹನ ಚಾಲಕ/ಮಾಲೀಕರಿಗೆ ಪ್ರತಿ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಈಗಿನ ದರದ ಜತೆಗೆ ಹೆಚ್ಚುವರಿಯಾಗಿ ₹ 2.35 ಹಾಗೂ 98 ಪೈಸೆ ಪಾವತಿಸಬೇಕಿದೆ. ರಾಜ್ಯ ಸರ್ಕಾರದ ಈ ನಡೆಯಿಂದ ಜನಸಾಮಾನ್ಯರ ಅಗತ್ಯ ವಸ್ತುಗಳ ಹಾಗೂ ಸಾರಿಗೆ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.