ನವದೆಹಲಿ: ಬ್ರಿಟನ್‌ನಲ್ಲಿ ಕೋವಿಡ್ನ ಹೊಸ ಸ್ವರೂಪ ಕಾಣಿಸಿಕೊಂಡ ನಂತರ ಭಾರತೀಯ ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1406 ಪಾಯಿಂಟ್ಸ್ ಕುಸಿತ ಕಂಡಿದೆ.
ರಾಷ್ಟ್ರೀಯ ಷೇರುಪೇಟೆ ನಿಫ್ಟಿ 432.15 ಪಾಯಿಂಟ್ಸ್ ಇಳಿಕೆ ಕಂಡಿದೆ. ಬಿಎಸ್‌ಇ ಸೂಚ್ಯಂಕವಾದ ಸೆನ್ಸೆಕ್ಸ್ 1,406.73 ಪಾಯಿಂಟ್ಸ್ ಅಥವಾ ಶೇ 3ರಷ್ಟು ಇಳಿಕೆಯಾಗಿದೆ. ಅಷ್ಟೇ ಅಲ್ಲದೆ, 45,553.73 ಪಾಯಿಂಟ್ಸ್‌ಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 432.15 ಪಾಯಿಂಟ್ಸ್ ಅಥವಾ ಶೇ 3.14ರಷ್ಟು ಕುಸಿದು 13,328.40 ಪಾಯಿಂಟ್ಸ್‌ಗೆ ತಲುಪಿದೆ.
ಓದಿ: 5 ಜಿಗಾಗಿ ಒಪ್ಪೋ & ಸ್ಯಾಮ್‌ಸಂಗ್ ಬ್ರಾಂಡ್ಗೆ ಭಾರತೀಯರ ಆದ್ಯತೆ: ಸಮೀಕ್ಷೆ
ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ 21 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌ಗೆ 73.78 ಕ್ಕೆ ತಲುಪಿದೆ.