ETV Bharat / business

ಷೇರುಪೇಟೆಯಲ್ಲಿ ಭಾರಿ ಕುಸಿತ.. ಸತತ ನಷ್ಟದಿಂದ ಹೂಡಿಕೆದಾರರು ಕಂಗಾಲು! - ಸತತ ನಷ್ಟದಿಂದ ಹೂಡಿಕೆದಾರರು ಕಂಗಾಲು

ನಿಫ್ಟಿ ಸಹ 255 ಅಂಕ ನಷ್ಟ ಅನುಭವಿಸಿದ್ದು, 17000 ಅಂಕಗಳೊಂದಿಗೆ ವ್ಯವಹಾರ ನಡೆಸುತ್ತಿದೆ. ಮಧ್ಯಮ ಮತ್ತು ಸ್ಮಾಲ್​​​​​​​​​​​ ಕ್ಯಾಪ್​ ಷೇರುಗಳ ಬೆಲೆಯಲ್ಲಿ ಸುಮಾರು ಶೇ 1.18ರಷ್ಟು ನಷ್ಟ ಕಂಡು ಬಂದಿದೆ. ಅಮೆರಿಕದ ಕೇಂದ್ರ ಬ್ಯಾಂಕ್​ ಬಡ್ಡಿ ದರ ಏರಿಸುವ ಸುಳಿವು ನೀಡಿದ್ದೇ ಈ ಇಳಿಕೆಗೆ ಕಾರಣ ಎನ್ನಲಾಗಿದೆ.

Sensex tumbles 888.89
ಷೇರುಪೇಟೆಯಲ್ಲಿ ಭಾರಿ ಕುಸಿತ.. ಸತತ ನಷ್ಟದಿಂದ ಹೂಡಿಕೆದಾರರು ಕಂಗಾಲು!
author img

By

Published : Jan 27, 2022, 10:32 AM IST

Updated : Jan 27, 2022, 12:08 PM IST

ಮುಂಬೈ: ಮಂಗಳವಾರದ ಆರಂಭಿಕ ವಹಿವಾಟಿನಲ್ಲೂ 800 ಅಂಕ ಕಳೆದುಕೊಂಡಿದ್ದ ಸೆನ್ಸಕ್ಸ್​ ಬಳಿಕ ಮಧ್ಯಾಹ್ನ ಚೇತರಿಸಿಕೊಂಡಿತ್ತು. ಇಂದು ಆರಂಭಿಕ ವಹಿವಾಟಿನಲ್ಲಿ ಮುಂಬೈ ಸಂವೇದಿ ಸೂಚ್ಯಂಕ 888 ಅಂಕ ಕಳೆದುಕೊಂಡು 56,696 ಪಾಯಿಂಟ್​ಗಳಿಗೆ ಕುಸಿತ ಕಂಡಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ 1252 ಅಂಕ ಕಳೆದುಕೊಂಡು 56,605 ಪಾಯಿಂಟ್​​​ನೊಂದಿಗೆ ವ್ಯವಹಾರ ಮುಂದುವರೆಸಿತ್ತು.

ಇನ್ನು ನಿಫ್ಟಿ ಸಹ ಬೆಳಗ್ಗೆ 9:30 ರ ಸುಮಾರಿಗೆ 255 ಅಂಕ ನಷ್ಟ ಅನುಭವಿಸಿದ್ದು, 17000 ಅಂಕಗಳೊಂದಿಗೆ ವ್ಯವಹಾರ ನಡೆಸುತ್ತಿದೆ. ಮಧ್ಯಮ ಮತ್ತು ಸ್ಮಾಲ್​​​​​​​​​​​ ಕ್ಯಾಪ್​ ಷೇರುಗಳ ಬೆಲೆಯಲ್ಲಿ ಸುಮಾರು ಶೇ 1.18ರಷ್ಟು ನಷ್ಟ ಕಂಡು ಬಂದಿದೆ. ಅದು ಅಪರಾಹ್ನ 12 ಗಂಟೆ ವೇಳೆಗೆ 365 ಅಂಕಗಳ ನಷ್ಟದೊಂದಿಗೆ 16912 ಪಾಯಿಂಟ್​ಗಳೊಂದಿಗೆ ವ್ಯವಹಾರ ನಡೆಸುತ್ತಿತ್ತು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪ್ರಮುಖ ಷೇರುಗಳಾದ ಡಾ ರೆಡ್ಡೀಸ್​​​​​ ಶೇ 2.85 ರಷ್ಟು ನಷ್ಟ ಅನುಭವಿಸಿದ್ದು, 4227 ರಲ್ಲಿ ವ್ಯವಹಾರ ನಿರತವಾಗಿತ್ತು. ಇನ್ನು ಟೈಟನ್​​, ಗ್ರೇಷಿಯಂ ಇಂಡಸ್ಟ್ರಿ, ಐಸರ್​​ ಮೋಟರ್ಸ್​​, ಹೆಚ್​ಡಿಎಫ್​ಸಿ ಬ್ಯಾಂಕ್​ ಷೇರುಗಳು ಕೂಡಾ ನಷ್ಟ ಅನುಭವಿಸಿವೆ.

ಇನ್ನೊಂದು ಬದಿಯಲ್ಲಿ ಒಎನ್​​​ಜಿಸಿ, ಆ್ಯಕ್ಸಿಸ್​​​​​​​ ಮತ್ತು ಮಾರುತಿ ಸುಜೂಕಿ ಷೇರುಗಳು ಏರಿಕೆ ಕಂಡಿವೆ. ಒಟ್ಟಾರೆ 1697 ಷೇರುಗಳ ನಷ್ಟ ಅನುಭವಿಸಿದರೆ, 1030 ಷೇರುಗಳು ಲಾಭದಲ್ಲಿವೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಮಾರ್ಚ್‌ನಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಇದನ್ನು ಓದಿ:ಟಿಕ್​ಟಾಕ್​​ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್​​​​​​​​​.. ಸ್ನ್ಯಾಪ್​​ಚಾಟ್​, ಯೂಟ್ಯೂಬ್​​​​​​​​ಗೂ ಸ್ಥಾನ

Last Updated : Jan 27, 2022, 12:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.