ಮುಂಬೈ: ಏಷ್ಯಾದ ಮಾರುಕಟ್ಟೆಗಳಲ್ಲಿನ ನಕಾರಾತ್ಮಕ ಬೆಳವಣಿಗೆ ಹಾಗೂ ನಿರಂತರ ವಿದೇಶಿ ನಿಧಿಯ ಹೊರಹರಿವಿನ ಹೊರತಾಗಿಯೂ ಮುಂಬೈ ಷೇರು ಪೇಟೆಯಲ್ಲಿಂದು ಗೂಳಿ ಓಟ ಮುಂದುವರಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 100 ಅಂಕಗಳ ಜಿಗಿತಕಂಡಿದ್ದು, 60,663.68ರಲ್ಲಿ ವಹಿವಾಟು ನಡೆಸುತ್ತಿದೆ.
ನಿಫ್ಟಿ ಕೂಡ 36.45 ಅಂಕಗಳ ಏರಿಕೆಯೊಂದಿಗೆ 18,105ರಲ್ಲಿತ್ತು. ಎಂ&ಎಂ ಷೇರುಗಳ ಮೌಲ್ಯ ಶೇ.2 ರಷ್ಟು ಏರಿಕೆಯಾಗಿ ಒಳ್ಳೆಯ ಲಾಭದಲ್ಲಿದೆ. ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಆಟೋ, ಎಲ್ & ಟಿ ಮತ್ತು ಟಿಸಿಎಸ್ ಷೇರುಗಳ ಮೌಲ್ಯದಲ್ಲಿ ಹೆಚ್ಚಾಗಿತ್ತು. ಮತ್ತೊಂದೆಡೆ, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಪವರ್‌ಗ್ರಿಡ್, ಹೆಚ್‌ಡಿಎಫ್‌ಸಿ ಮತ್ತು ಏಷ್ಯನ್ ಪೇಂಟ್‌ಗಳು ಷೇರುಗಳು ನಷ್ಟ ಅನುಭವಿಸಿದವು.
ನಿನ್ನೆ ಸೆನ್ಸೆಕ್ಸ್ 477.99 ಪಾಯಿಂಟ್‌ಗಳು ಏರಿಕೆಯಾಗಿ 60,545.61ರಲ್ಲಿ ದಿನದಾಂತ್ಯವನ್ನು ಕೊನೆಗೊಳಿಸಿತ್ತು. ನಿಫ್ಟಿ 151.75 ಜಿಗಿತದೊಂದಿಗೆ 18,068.55 ದಿನದ ವಹಿವಾಟನ್ನು ಮುಗಿಸಿತ್ತು.
ಏಷ್ಯಾದ ಇತರೆಡೆಗಳಲ್ಲಿ, ಶಾಂಘೈ, ಹಾಂಗ್ ಕಾಂಗ್, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಷೇರುಗಳು ಮಿಡ್-ಸೆಷನ್ ಡೀಲ್‌ಗಳಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಏತನ್ಮಧ್ಯೆ, ಅಂತಾರಾಷ್ಟ್ರೀಯ ತೈಲ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.10 ಪ್ರತಿಶತದಷ್ಟು ಕುಸಿತವಾಗಿ 83.35 ಡಾಲರ್‌ಗೆ ತಲುಪಿದೆ.