ಮುಂಬೈ: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತ್ತು ಜಾಗತಿಕ ಮಾರುಕಟ್ಟೆಗಳ ಅನುಕೂಲಕರ ವಹಿವಾಟನ ನಡುವೆಯೂ ಭಾರತೀಯ ಷೇರುಪೇಟೆ ಮಂಗಳವಾರದಂದು ಏರಿಕೆ ದಾಖಲಿಸಿದೆ.
ಮಂಗಳವಾರದ ವಹಿವಾಟಿನಂದು ಬ್ಯಾಂಕ್ ಮತ್ತು ಫೈನಾನ್ಷಿಯಲ್ ಷೇರುಗಳಿಗೆ ಬೇಡಿಕೆ ಮುಂದುವರೆದಿದೆ. ಇದು ಹೂಡಿಕೆದಾರರಲ್ಲಿ ದೃಢವಾದ ಜಾಗತಿಕ ಸೂಚನೆಗಳ ಭಾವನೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 503.55 ಅಂಕ ಏರಿಕೆಯಾಗಿ 40261.13 ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ 144.35 ಅಂಕ ಜಿಗಿದು 11813.50 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಐಸಿಐಸಿಐ, ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಎಕ್ಸಸ್ ಬ್ಯಾಂಕ್, ಐಟಿಎಸ್, ಎಸ್ಬಿಐಎನ್, ಟಿಸಿಎಸ್, ಬಜಾಜ್ ಫೈನನ್ಸ್, ಎಲ್ಟಿ ಮತ್ತು ಪವರ್ ಗ್ರಿಡ್ ದಿನದ ವಹಿವಾಟಿನಲ್ಲಿ ಗರಿಷ್ಠ ಗಳಿಕೆ ದಾಖಲಿಸಿದವು.
ಪೇಟೆಯ ಮೇಲೆ ಪ್ರಭಾವಿಸಿದ ಅಂಶಗಳು:
ಇದರ ನಡುವೆ ನವೆಂಬರ್ 5ರಂದು ನಿಷೇಧ ಅವಧಿಯ ಸಾಲದ ಮೇಲಿನ ಬಡ್ಡಿ ಮನ್ನಾ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಲಿದೆ. ಇದು ಬ್ಯಾಂಕ್ಗಳ ಪರವಾಗಿ ಇರಲಿದೆ ಎಂಬುದು ಹಲವರ ನಂಬಕೆ. ಇದು ಮಾರುಕಟ್ಟೆ ಉತ್ತೇಜನಕ್ಕೆ ಕಾರಣವಾಯಿತು.
ಅಮೆರಿಕ ಚುನಾವಣೆ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತದಾನ ನಡೆತಯುವ ಮುನ್ನ ಹೂಡಿಕೆದಾರರ ಮನಸ್ಸಿನಲ್ಲಿ ಒಂದು ರೀತಿಯ ನಿಶ್ಚಿತತೆಯು ಹರಿದಾಡತೊಡಗಿದೆ. ಬ್ಲ್ಯಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಕಾರ್ಯತಂತ್ರಜ್ಞ ಪ್ರಕಾರ, ಚುನಾವಣೆಯಲ್ಲಿ ಡೆಮಾಕ್ರಟಿಕ್ ಗೆಲುವು ಸಾಧಿಸುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ಸೂಚಿಸುತ್ತಿವೆ ಎಂದಿದೆ.
ಆರ್ಥಿಕ ಚಟುವಟಿಕೆ ಸುಧಾರಣೆ: ಅಕ್ಟೋಬರ್‌ನಲ್ಲಿ ಅಮೆರಿಕ ಉತ್ಪಾದನಾ ಚಟುವಟಿಕೆ ನಿರೀಕ್ಷೆಗಿಂತ ಹೆಚ್ಚಿನ ವೇಗ ಪಡೆದುಕೊಂಡವು. ಹೊಸ ಆರ್ಡರ್ಗಳು ಸುಮಾರು 17 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಯಿತು. ಚೀನಾದ ಕಾರ್ಖಾನೆಯ ಚಟುವಟಿಕೆಯು ಒಂದು ದಶಕದಲ್ಲಿ ವೇಗವಾಗಿ ವಿಸ್ತರಿಸಿದ್ದರೇ ಯೂರೋಜೋನ್ ಉತ್ಪಾದನೆಯೂ ವೇಗ ಪಡೆದುಕೊಂಡಿದೆ.
ಅಮೆರಿಕ ಫೆಡ್ ಸಭೆ: ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್‌ಒಎಂಸಿ) ಬಡ್ಡಿ ದರ ನೀತಿಯ ಕುರಿತು ಎರಡು ದಿನಗಳ ಸಭೆಯನ್ನು ಬುಧವಾರ ಪ್ರಾರಂಭಿಸಲಿದ್ದು, ಸಾಂಕ್ರಾಮಿಕ ಪೀಡಿತ ಆರ್ಥಿಕತೆಯನ್ನು ಬೆಂಬಲಿಸಲು ಮತ್ತು ಬಡ್ಡಿದರಗಳನ್ನು ಬದಲಾಗದೆ ಇರಿಸುವ ತನ್ನ ಬದ್ಧತೆಯನ್ನು ನೀತಿ ನಿರೂಪಕರು ಮರು ವ್ಯಾಖ್ಯಾನಿಸಿದ್ದಾರೆ.