ಮುಂಬೈ: ರಷ್ಯಾ - ಉಕ್ರೇನ್ ಸಂಘರ್ಷದಿಂದಾಗಿ ಜಾಗತಿಕವಾಗಿ ಭಾರಿ ಅಪಾಯಗಳು ತೀವ್ರಗೊಳ್ಳುತ್ತಿರುವುದರಿಂದ ಇಂದಿನ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ 81 ಪೈಸೆ ಕುಸಿತ ಕಂಡು 76.98ಕ್ಕೆ ತಲುಪಿದೆ.
ಎರಡು ದೇಶಗಳ ನಡುವಿನ ಉದ್ವಿಗ್ನತೆಯು ಕಚ್ಚಾ ತೈಲ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಬಂದು ನಿಂತಿದೆ. ದೇಶೀಯ ಹಣದುಬ್ಬರ ಮತ್ತು ವ್ಯಾಪಕ ವ್ಯಾಪಾರ ಕೊರತೆಗಳ ಬಗ್ಗೆ ಆತಂಕ ಹೆಚ್ಚಿಸಿದೆ. ಇದಲ್ಲದೆ, ನಿರಂತರ ವಿದೇಶಿ ನಿಧಿಯ ಹೊರಹರಿವು ಮತ್ತು ದೇಶೀಯ ಷೇರುಗಳಲ್ಲಿನ ನೀರಸ ಪ್ರವೃತ್ತಿಯು ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ.
ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿಯು ಯುಎಸ್ ಡಾಲರ್ ಎದುರು 76.85ನಲ್ಲಿ ಪ್ರಾರಂಭವಾಯಿತು ನಂತರ 76.98 ರೂ.ಗೆ ಇಳಿಕೆ ಕಂಡು ಅಂತಿಮವಾಗಿ 81 ಪೈಸೆಯಷ್ಟು ಕುಸಿತ ಕಂಡಿದೆ. ಕಳೆದ ಶುಕ್ರವಾರ ಡಾಲರ್ ಎದುರು ರೂಪಾಯಿ 23 ಪೈಸೆ ನಷ್ಟದೊಂದಿಗೆ 76.17ಕ್ಕೆ ಕುಸಿದಿತ್ತು. 2021ರ ಡಿಸೆಂಬರ್ 15ರ ನಂತರದ ಅತ್ಯಂತ ಕಡಿಮೆ ಮಟ್ಟವಾಗಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಿಂದ ಗಗನಕ್ಕೇರಿದೆ ಗೋಧಿ ಬೆಲೆ; ಮಧ್ಯಪ್ರಾಚ್ಯ ದೇಶಗಳಲ್ಲಿ ಆಹಾರಕ್ಕೆ ಹಾಹಾಕಾರ...?