ETV Bharat / business

₹ 3.60 ಲಕ್ಷ ಕೋಟಿ ಒಡೆಯ ಮುಖೇಶ್​ ಅಂಬಾನಿಯ ಮಾರುಕಟ್ಟೆ ಬಂಡವಾಳ​ ಎಷ್ಟು ಗೊತ್ತಾ?

author img

By

Published : Nov 20, 2019, 4:55 PM IST

ದೇಶದ ಅತ್ಯಮೂಲ್ಯ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯಮಾಪನವು ತನ್ನ ಷೇರು ಬೆಲೆಯಲ್ಲಿ ನಿರಂತರವಾಗಿ ಏರಿಕೆಯಿಂದಾಗಿ ಎಂ - ಕ್ಯಾಪ್​ ಮೌಲ್ಯ 10 ಲಕ್ಷ ಕೋಟಿ ರೂ. ಹತ್ತಿರವಿದೆ. ಬುಧವಾರದಂದು ತನ್ನ ಷೇರು ಮೌಲ್ಯದಲ್ಲಿ ಶೇ 4.10ರಷ್ಟು ಏರಿಕೆ ಕಂಡು ₹ 1,571.85 ರೂ.ಗೆ ತಲುಪಿದ ಹಿನ್ನೆಲೆಯಲ್ಲಿ ಒಟ್ಟಾರೆ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ.

ಅಂಬಾನಿ

ನವದೆಹಲಿ: ಸತತ 11ನೇ ವರ್ಷವೂ 3.6 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಬಿಲಿಯೇನರ್​ ಮುಖೇಶ್ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ (ಆರ್​ಐಎಲ್​) ಮಾರುಕಟ್ಟೆ ಬಂಡವಾಳ (ಎಂ- ಕ್ಯಾಪಿಟಲ್​) ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.

ದೇಶದ ಅತ್ಯಮೂಲ್ಯ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯಮಾಪನವು ತನ್ನ ಷೇರು ಬೆಲೆಯಲ್ಲಿ ನಿರಂತರವಾಗಿ ಏರಿಕೆಯಿಂದಾಗಿ ಎಂ - ಕ್ಯಾಪ್​ ಮೌಲ್ಯ 10 ಲಕ್ಷ ಕೋಟಿ ರೂ. ಹತ್ತಿರವಿದೆ. ಬುಧವಾರದಂದು ತನ್ನ ಷೇರು ಮೌಲ್ಯದಲ್ಲಿ ಶೇ 4.10ರಷ್ಟು ಏರಿಕೆ ಕಂಡು ₹ 1,571.85 ರೂ.ಗೆ ತಲುಪಿದೆ.

ಮುಂದಿನ ಕೆಲವು ವಾರಗಳಲ್ಲಿ ಟೆಲಿಕಾಂ ನಿಯಮಗಳಿಗೆ ಅನುಸಾರವಾಗಿ ಮೊಬೈಲ್ ಕರೆ ಮತ್ತು ಡೇಟಾ ಶುಲ್ಕ ಹೆಚ್ಚಿಸುವುದಾಗಿ ಜಿಯೋ ಮಂಗಳವಾರ ಪ್ರಕಟಣೆ ಹೊರಡಿಸಿತ್ತು. ಇದಕ್ಕೂ ಮೊದಲು ಭಾರ್ತಿ ಏರ್​​ಟೆಲ್​​​ ಮತ್ತು ವೋಡಾಫೋನ್ ಐಡಿಯಾ ಕೂಡ ಡಿಸೆಂಬರ್​ನಿಂದ ದರ ಹೆಚ್ಚಿಸುವುದಾಗಿ ತಿಳಿಸಿದ್ದವು.

ಬಿಎಸ್​ಇನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 32,525.22 ಕೋಟಿಯಿಂದ ₹ 9,90,366.80 (ಬೆಳಿಗ್ಗಿನ ವಹಿವಾಟು) ಕೋಟಿಗೆ ಬಂದು ತಲುಪಿತ್ತು. ಕಳೆದ ತಿಂಗಳ ಮಧ್ಯಂತರ ವಹಿವಾಟಿನಂದು ₹ 9 ಲಕ್ಷ ಕೋಟಿಯಷ್ಟು ಮಾರುಕಟ್ಟೆ ಬಂಡವಾಳ ದಾಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಅಗಸ್ಟ್​ನಲ್ಲಿ ದೇಶಿಯ ಕಂಪನಿಗಳ ಪೈಕಿ ಆರ್​ಐಎಲ್​ ₹ 8 ಲಕ್ಷ ಕೋಟಿ ಗಡಿ ದಾಟಿತ್ತು. ಈಗ ಅದು ₹ 10 ಲಕ್ಷ ಕೋಟಿ ತಲುಪುವ ಸನಿಹದಲ್ಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.