ETV Bharat / business

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 6 ರೂ. ಇಳಿಕೆ... ರಾಜ್ಯದಲ್ಲಿ ದರ ಎಷ್ಟಾಗಿರಬಹುದು? - ಡೀಸೆಲ್ ದರ

ತೈಲ ದರ ಪಟ್ಟಿಯಲ್ಲಿ ಜನವರಿ 11ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್​ ಕ್ರಮವಾಗಿ ₹ 76 ಹಾಗೂ ₹ 69 ಮಟ್ಟದಲ್ಲಿ ಮಾರಾಟ ಆಗಿದ್ದು ಇದುವರೆಗಿನ ಗರಿಷ್ಠದ ದರ ಎರಿಕೆಯಾಗಿದೆ. ಅಂದಿನಿಂದ ಇಲ್ಲಿಯವರೆಗೆ ಪೆಟ್ರೋಲ್ ಹಾಗೂ ಡೀಸೆಲ್​​ನಲ್ಲಿ ಕ್ರಮವಾಗಿ ₹ 6.42 ಮತ್ತು ₹ 6.88ಯಷ್ಟು ಕ್ಷೀಣಿಸಿದೆ.

Oil
ತೈಲ
author img

By

Published : Mar 18, 2020, 10:58 PM IST

ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ 2016ರ ಬಳಿಕ ಇದೇ ಪ್ರಥಮ ಬಾರಿಗೆ ಪ್ರತಿ ಬ್ಯಾರೆಲ್ ದರವು 30 ಡಾಲರ್​ಗೆ ತಲುಪಿದೆ. ದೇಶಿಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆಯಲ್ಲಿ ಇಂದು ಸ್ಥಿರವಾಗಿದೆ.

ಆದರೆ, ಪ್ರಸಕ್ತ ಕ್ಯಾಲೆಂಡರ್ ವರ್ಷದ ಜನವರಿ ತಿಂಗಳಿಂದ ಇಲ್ಲಿಯವರೆಗೆ ಪ್ರತಿ ಲೀಟರ್ ಮೇಲೆ ಸುಮಾರು 6 ರೂ.ಯಷ್ಟು ಇಳಿಕೆಯಾಗಿದೆ ಎಂಬುದು ಗಮನಾರ್ಹ ಸಂಗತಿ.

ತೈಲ ದರ ಪಟ್ಟಿಯಲ್ಲಿ ಜನವರಿ 11ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್​ ಕ್ರಮವಾಗಿ ₹ 76 ಹಾಗೂ ₹ 69 ಮಟ್ಟದಲ್ಲಿ ಮಾರಾಟ ಆಗಿದ್ದು ಇದುವರೆಗಿನ ಗರಿಷ್ಠದ ದರ ಎರಿಕೆಯಾಗಿದೆ. ಅಂದಿನಿಂದ ಇಲ್ಲಿಯವರೆಗೆ ಪೆಟ್ರೋಲ್ ಹಾಗೂ ಡೀಸೆಲ್​​ನಲ್ಲಿ ಕ್ರಮವಾಗಿ ₹ 6.42 ಮತ್ತು ₹ 6.88ಯಷ್ಟು ಕ್ಷೀಣಿಸಿದೆ.

ಕೇಂದ್ರ ಸರ್ಕಾರ ತನ್ನ ಆದಾಯ ಸಂಗ್ರಹದ ಇಳಿಕೆಯ ಹೊರೆಯನ್ನು ಸರಿದೂಗಿಸಲು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ₹ 3 ಯಷ್ಟು ಅಬಕಾರಿ ಸುಂಕ ಏರಿಕೆ ಮಾಡಿದೆ. ಈ ಮೂಲಕ ವಾರ್ಷಿಕ ₹ 40,000 ಕೋಟಿ ಆದಾಯ ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ. ಭಾರತ ಶೇ 80ರಷ್ಟು ಸಾಗರೋತ್ತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ.

ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್ ಹಾಗೂ ಗುರುಗ್ರಾಮ್​ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಕ್ರಮವಾಗಿ ₹69.59 & ₹62.29, ₹75.30 & ₹65.21, ₹72.28 & ₹65.71, ₹71.97 & ₹ 64.41, ₹73.97 & ₹67.82 ಹಾಗೂ ₹70.21 & ₹62.08 ಮಾರಾಟ ಆಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.