ETV Bharat / business

ಕೊರೊನಾಘಾತಕ್ಕೆ ದಾಖಲೆ ಮಟ್ಟಕ್ಕಿಳಿದ ಕಚ್ಚಾ ತೈಲ ಮಾರುಕಟ್ಟೆ - ವಾಣಿಜ್ಯ ಸುದ್ದಿ

2020ರ ಸರಾಸರಿ ದೈನಂದಿನ ಬೇಡಿಕೆಯಂತೆ ಕಾರ್ಟೆಲ್ ನಿತ್ಯ ಉತ್ಪಾದನೆ ಸುಮಾರು 6.8 ಮಿಲಿಯನ್ ಬ್ಯಾರೆಲ್​ನಷ್ಟು (ಎಮ್‌ಬಿಡಿ) ಐತಿಹಾಸಿಕ ಕುಸಿತವಿದೆ. ವಿವಿಧ ರಾಷ್ಟ್ರಗಳಿಗೆ ಮಾರುಕಟ್ಟೆಗೆ ಸಂಬಂಧಿಸಿದ ಪ್ರಮುಖ ಮುನ್ಸೂಚನೆ ಹಾಗೂ ಸಲಹೆ ನೀಡುವ ಪ್ಯಾರಿಸ್ ಮೂಲದ ಇಂಟರ್​ನ್ಯಾಷನಲ್ ಎನರ್ಜಿ ಏಜೆನ್ಸಿ, ಆಯಿಲ್ ಉತ್ಪಾದಕ ರಾಷ್ಟ್ರಗಳು ಬಿಡುಗಡೆ ಮಾಡಿದ್ದ ಮುನ್ಸೂಚನೆಗಿಂತ ತೀವ್ರತೆ ಕಡಿಮೆ ಮಟ್ಟದಲ್ಲಿದೆ ಎಂದು ಹೇಳಿದೆ.

oil market
ಕಚ್ಚಾ ತೈಲ ಮಾರುಕಟ್ಟೆ
author img

By

Published : Apr 16, 2020, 10:42 PM IST

ಪ್ಯಾರಿಸ್: ಕೊರೊನಾ ವೈರಸ್ ತಗ್ಗಿಸುವ ಕ್ರಮಗಳಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪಾದನೆಯು ಐತಿಹಾಸಿಕ ಆಘಾತಕ್ಕೆ ಒಳಗಾಗಿದೆ ಎಂದು ಒಪೆಕ್ ತೈಲ ಕಾರ್ಟೆಲ್ ಹೇಳಿದೆ.

ತೈಲ ಮಾರುಕಟ್ಟೆ ಉತ್ಪಾದನೆಯು ಪ್ರಸ್ತುತ ಐತಿಹಾಸಿಕ ಆಘಾತಕ್ಕೆ ಒಳಗಾಗಿದೆ. ಹಠಾತ್ ತೀವ್ರ ಕುಸಿತವು ಜಾಗತಿಕವಾಗಿ ವ್ಯಾಪಿಸಿದೆ ಎಂದು ತೈಲ ಉತ್ಪಾದಕ ರಾಷ್ಟ್ರಗಳ ಗುಂಪು ತನ್ನ ಇತ್ತೀಚಿನ ಮಾಸಿಕ ವರದಿಯಲ್ಲಿ ತಿಳಿಸಿದೆ.

2020ರ ಸರಾಸರಿ ದೈನಂದಿನ ಬೇಡಿಕೆಯಂತೆ ಕಾರ್ಟೆಲ್ ನಿತ್ಯ ಉತ್ಪಾದನೆ ಸುಮಾರು 6.8 ಮಿಲಿಯನ್ ಬ್ಯಾರೆಲ್​ನಷ್ಟು (ಎಮ್‌ಬಿಡಿ) ಐತಿಹಾಸಿಕ ಕುಸಿತವಿದೆ. ವಿವಿಧ ರಾಷ್ಟ್ರಗಳಿಗೆ ಮಾರುಕಟ್ಟೆಗೆ ಸಂಬಂಧಿಸಿದ ಪ್ರಮುಖ ಮುನ್ಸೂಚನೆ ಹಾಗೂ ಸಲಹೆ ನೀಡುವ ಪ್ಯಾರಿಸ್ ಮೂಲದ ಇಂಟರ್​ನ್ಯಾಷನಲ್ ಎನರ್ಜಿ ಏಜೆನ್ಸಿ, ಆಯಿಲ್ ಉತ್ಪಾದಕ ರಾಷ್ಟ್ರಗಳು ಬಿಡಿಗಡೆ ಮಾಡಿದ್ದ ಮುನ್ಸೂಚನೆಗಿಂತ ತೀವ್ರತೆ ಕಡಿಮೆ ಮಟ್ಟದಲ್ಲಿದೆ ಎಂದು ಹೇಳಿದೆ.

2020ರ ಏಪ್ರಿಲ್‌ನಲ್ಲಿನ ಬೇಡಿಕೆ 29 ಎಮ್‌ಬಿಡಿ ಮತ್ತು ಒಟ್ಟಾರೆ ಡಿಮ್ಯಾಂಡ್​ 9.3 ಎಮ್‌ಬಿಡಿಯಷ್ಟಿದೆ. ಒಪೆಕ್ ಮತ್ತು ಅದರ ಮಿತ್ರರಾಷ್ಟ್ರಗಳು ವಾರಾಂತ್ಯದಲ್ಲಿ ಉತ್ಪಾದನೆಯನ್ನು ಸುಮಾರು 10 ಎಮ್‌ಬಿಡಿಗಳಷ್ಟು ಹೆಚ್ಚಿಸಲು ಒಪ್ಪಂದ ಮಾಡಿಕೊಂಡವು. ಆದರೆ, ವ್ಯಾಪಾರಿಗಳು ಅಂದುಕೊಂಡಂತೆ ತೈಲ ಬೆಲೆಗಳು ಏರಿಕೆ ಆಗದೆ ಬೇಡಿಕೆಯ ಪ್ರಮಾಣ ಕುಸಿತ ಕಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.