ETV Bharat / business

ಮಾರುಕಟ್ಟೆ ವಹಿವಾಟುದಾರರ ಗಮನಕ್ಕೆ, ಟ್ರೇಡಿಂಗ್ ಸಮಯ ಬದಲು.. ಬ್ಯಾಂಕಿಂಗ್ ಟೈಮ್​ ಹೇಗೆ? - financial markets timings

ಲಾಕ್​ಡೌನ್​ನಿಂದ ಹಣಕಾಸು ಮಾರುಕಟ್ಟೆಗಳ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸಿಬ್ಬಂದಿ ಮತ್ತು ಐಟಿ ಸಂಪನ್ಮೂಲಗಳು ಸಹ ತೀವ್ರವಾಗಿ ಪರಿಣಾಮ ಎದುರಿಸುತ್ತಿವೆ. ಇದು ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ ಅಪಾಯಗಳನ್ನು ಉಂಟು ಮಾಡುತ್ತಿದೆ.

Reserve Bank of India
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
author img

By

Published : Apr 3, 2020, 8:23 PM IST

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಏಪ್ರಿಲ್ 7 ರಿಂದ 17ರವರೆಗೆ ವಿವಿಧ ಹಣಕಾಸು ಮಾರುಕಟ್ಟೆಗಳ ಸಮಯವನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂದು ಪರಿಷ್ಕರಿಸಿದೆ.

ಕೊರೊನಾ ಸೋಂಕಿನಿಂದ ಅಪಾಯಗಳನ್ನು ಕಡಿಮೆ ಮಾಡಲು, ಮಾರುಕಟ್ಟೆ ಭಾಗವಹಿಸುವವರು ಸಂಪನ್ಮೂಲಗಳನ್ನು ಉತ್ತಮಗೊಳಿಸಲು, ಸಾಕಷ್ಟು ಪರಿಶೀಲನೆ ಮತ್ತು ಮೇಲ್ವಿಚಾರಣಾ ನಿಯಂತ್ರಣಗಳನ್ನು ನಿರ್ವಹಿಸುವುದನ್ನು ಖಚಿತಪಡಿಸಲು ಹಾಗೂ ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಕೋವಿಡ್-19 ಸೋಂಕು ಸೃಷ್ಟಿಸಿದ ಆತಂಕವು ಲಾಕ್‌ಡೌನ್‌ ಜಾರಿಗೆ ತರಲಾಗಿದೆ. ಜನರ ಸಾಮಾಜಿಕ ಅಂತರದ ಚಲನವಲನ ಮತ್ತು ಅನಿವಾರ್ಯ ಚಟುವಟಿಕೆಗಳ ಮೇಲಿನ ನಿರ್ಬಂಧ, ವರ್ಕ್‌ ಫ್ರಮ್​ ಹೋಂ​ ಹಾಗೂ ವ್ಯವಹಾರ ಮುಂದುವರಿಕೆ ಯೋಜನೆಗಳಿಗೆ ಅಗತ್ಯವಿದೆ ಎಂದು ಆರ್‌ಬಿಐ ಹೇಳಿದೆ.

ಲಾಕ್​ಡೌನ್​ನಿಂದ ಹಣಕಾಸು ಮಾರುಕಟ್ಟೆಗಳ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸಿಬ್ಬಂದಿ ಮತ್ತು ಐಟಿ ಸಂಪನ್ಮೂಲಗಳು ಸಹ ತೀವ್ರವಾಗಿ ಪರಿಣಾಮ ಎದುರಿಸುತ್ತಿವೆ. ಇದು ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ ಅಪಾಯಗಳನ್ನು ಉಂಟು ಮಾಡುತ್ತಿದೆ. ಚಟುವಟಿಕೆ ತಗ್ಗಿದಷ್ಟು ಮಾರುಕಟ್ಟೆಯ ದ್ರವ್ಯತೆಯ ಮೇಲೆ ಪರಿಣಾಮ ಬೀರಿ ಹಣಕಾಸಿನ ಬೆಲೆಗಳ ಚಂಚಲತೆ ಹೆಚ್ಚಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆದ್ದರಿಂದ ಕರೆ/ಸೂಚನೆ/ಅವಧಿ ಹಣ, ಸರ್ಕಾರಿ ಭದ್ರತೆಗಳ ಮಾರುಕಟ್ಟೆ ರೆಪೊ, ಸರ್ಕಾರಿ ಭದ್ರತೆಗಳ ತ್ರಿಪಕ್ಷೀಯ ರೆಪೊ, ವಾಣಿಜ್ಯ ಕಾಗದ ಮತ್ತು ಠೇವಣಿ ಪ್ರಮಾಣಪತ್ರಗಳು, ಕಾರ್ಪೊರೇಟ್ ಬಾಂಡ್‌ಗಳ ರೆಪೊ, ಸರ್ಕಾರಿ ಭದ್ರತೆಗಳು, ವಿದೇಶಿ ಕರೆನ್ಸಿ/ಭಾರತೀಯ ರೂಪಾಯಿ ವಹಿವಾಟುಗಳಿಗೆ ಸಮಯ ಪರಿಷ್ಕರಿಸಲಾಗಿದೆ. ಆರ್‌ಟಿಜಿಎಸ್, ಎನ್‌ಇಎಫ್‌ಟಿ,ಇ-ಕುಬರ್ ಮತ್ತು ಇತರ ಚಿಲ್ಲರೆ ಪಾವತಿ ವ್ಯವಸ್ಥೆಗಳು ಸೇರಿ ಗ್ರಾಹಕರಿಗೆ ಎಲ್ಲಾ ನಿಯಮಿತ ಬ್ಯಾಂಕಿಂಗ್ ಸೇವೆಗಳು ಈಗಿರುವ ಸಮಯದ ಪ್ರಕಾರ ಲಭ್ಯವಾಗಲಿವೆ ಎಂದು ಆರ್‌ಬಿಐ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.