ಮುಂಬೈ: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಾಗುತ್ತಿದ್ದು, ಇದೇ ದಿನ ಮುಂಬೈ ಷೇರುಪೇಟೆಯಲ್ಲಿ ವಿಶೇಷ 'ಮುಹೂರ್ತ ಟ್ರೇಡಿಂಗ್' ನಡೆಯಿತು.
ಬಿಎಸ್ಇ ಸೆನ್ಸೆಕ್ಸ್ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದು, 2077ನೇ ಸಂವತ್ಸರ ಉತ್ತಮವಾಗಿ ಆರಂಭವಾಯಿತು. ಇಂದಿನ ವಹಿವಾಟು 2013ರ ಬಳಿಕದ ಅತ್ಯುತ್ತಮ ಟ್ರೇಡಿಂಗ್ ಆಗಿದೆ.
ಈಕ್ವಿಟಿ ಮಾನದಂಡದ ಸೂಚ್ಯಂಕ ಸೆನ್ಸೆಕ್ಸ್ ಶೇ. 0.67ರಷ್ಟು ಅಥವಾ 291.44 ಏರಿಕೆ ಕಂಡು 43734.44 ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 79.20 ಅಂಕ ಅಥವಾ ಶೇ. 0.62ರಷ್ಟು ಏರಿಕೆಯಾಗಿ 12799.15 ಅಂಗಳಲ್ಲಿ ವಹಿವಾಟು ನಿರತವಾಗಿದೆ. ಷೇರುಪೇಟೆಯಲ್ಲಿ 1,652 ಷೇರುಗಳು ಸಕರಾತ್ಮಕವಾಗಿ ಮುಂದುವರೆದರೆ, 429 ಷೇರುಗಳ ಕುಸಿದವು. 98 ಷೇರುಗಳು ಬದಲಾಗದೆ ಉಳಿದವು.
ಕಳೆದ 10 ವರ್ಷಗಳ ಅಂಕಿ-ಅಂಶಗಳಲ್ಲಿ ಮುಹೂರ್ತ ವಹಿವಾಟು, ಈ ದಿನದ ಮಧ್ಯಂತರ ಮತ್ತು ಕಿರು ಬಂಡವಾಳ ಷೇರುಗಳು ಉತ್ತಮ ಗಳಿಕೆ ಕಂಡವು. ಮುಹೂರ್ತ ವಹಿವಾಟಿ ಹಿಂದನ ಕಳೆದ ಆರು ದಿನಗಳಲ್ಲಿ ಸೆನ್ಸೆಕ್ಸ್ ವ್ಯಾಪಕ ಏರಿಕೆ ದಾಖಲಿಸಿತು.
ಟ್ರೇಡಿಂಗ್ ವೇಳೆ ಹೂಡಿಕೆದಾರರು ದೀರ್ಘ ಕಾಲಕ್ಕಾಗಿ ಷೇರುಗಳನ್ನು ಖರೀದಿಸುತ್ತಾರೆ. ಮುಂಬೈ ಷೇರು ಮಾರುಕಟ್ಟೆಯ ಬಿಎಸ್ಇ ಹಾಗೂ ಎನ್ಎಸ್ಇ ಇಂದು 14ರ ಸಂಜೆ 6.15ರಿಂದ 7.15ರವರೆಗೆ ವಿಶೇಷ ಟ್ರೇಡಿಂಗ್ಗಾಗಿ ತೆರೆದುಕೊಂಡಿತು. ಹಿಂದೂ ಪಂಚಾಂಗ ಸಂವತ್ಸರ 2076 ಕೊನೆಗೊಂಡು ಇಂದಿನಿಂದ 2077ನೇ ಸಂವತ್ಸರ ಆರಂಭವಾಗಿದೆ.