ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ದರವನ್ನು ಸತತವಾಗಿ 15 ದಿನಗಳವರೆಗೆ ಹೆಚ್ಚಿಸುವ ತೈಲ ಮಾರುಕಟ್ಟೆ ಕಂಪನಿಗಳ ನಿರ್ಧಾರವು ವ್ಯಾಪಕ ಟೀಕೆಗಳಿಗೆ ಒಳಗಾಯಿತು. ಆದರೆ, ಇದರ ಫಲಾನುಭವವನ್ನು ನಿಜವಾಗಿ ಅನುಭವಿಸಿದ್ದು ಕೇಂದ್ರ ಮತ್ತು ರಾಜ್ಯಗಳು ಎಂಬುದು ಬಹುತೇಕರಿಗೆ ತಿಳಿಯದಿರಬಹುದು.
ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯನ್ನು ಪರಿಷ್ಕರಿಸುವ ಮುಕ್ತ ಅವಕಾಶ ದೇಶಿಯ ತೈಲ ಮಾರುಕಟ್ಟೆಯ ಕಂಪನಿಗಳಿಗಿದೆ. ಆದರೆ ಈ ಎರಡೂ ಸರಕುಗಳ ಚಿಲ್ಲರೆ ಬೆಲೆಯ ಮೂರನೇ ಒಂದು ಭಾಗ ಮಾತ್ರ ತೈಲ ವಿತರಣಾ ಕಂಪನಿಗಳಿಗೆ ಹೋಗುತ್ತದೆ. ಮೂರನೇ ಎರಡರಷ್ಟು ಸರ್ಕಾರಗಳ ಬೊಕ್ಕಸ ಸೇರುತ್ತದೆ. ಕೇಂದ್ರ ಮತ್ತು ರಾಜ್ಯಗಳು ತೆರಿಗೆಗಳ ರೂಪದಲ್ಲಿ 2019-20ನೇ ಹಣಕಾಸು ವರ್ಷದಲ್ಲಿ 5.5 ಲಕ್ಷ ಕೋಟಿ ರೂ. ಸ್ವೀಕರಿಸಿವೆ.
ಈ ಅವಧಿಯಲ್ಲಿ ತೈಲ ವಲಯದಿಂದ ಗಳಿಸಿದ ಆದಾಯವು ದ್ವಿಗುಣಗೊಂಡಿದ್ದು, ಕೇಂದ್ರವು ಅತಿದೊಡ್ಡ ಆದಾಯದ ಫಲಾನುಭವಿ ಆಗಿದ್ದು, ರಾಜ್ಯಗಳ ಆದಾಯ ಸಂಗ್ರಹವು ಕೇವಲ ಶೇ 38ರಷ್ಟು ಹೆಚ್ಚಾಗಿದೆ.
ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲಿಯಂ ವಲಯದಿಂದ ಗಳಿಸಿದ ಸಂಚಿತ ಆದಾಯವು 3.33 ಲಕ್ಷ ಕೋಟಿಯಿಂದ 5.55 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2014-15 ಮತ್ತು 2019-20ರ ನಡುವೆ ಶೇ 66ರಷ್ಟು ಹೆಚ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ ಕಡಿಮೆ ಆಗಿದ್ದ ಕಚ್ಚಾ ತೈಲ ಬೆಲೆ, ಕೇಂದ್ರವು ತನ್ನ ಆದಾಯ ಹೆಚ್ಚಿಸಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿತು.
ಕೇಂದ್ರ ಸರ್ಕಾರದ ಆದಾಯ ಸಂಗ್ರಹಣೆ ಮತ್ತು ತೈಲ ಕ್ಷೇತ್ರದಿಂದ ಬರುವ ಒಟ್ಟಾರೆ ಆದಾಯವು 2014-15ರಲ್ಲಿ 1.72 ಲಕ್ಷ ಕೋಟಿ ರೂ.ಗಳಿಂದ 2019-20ರ ವೇಳೆಗೆ (ತಾತ್ಕಾಲಿಕ) 3.34 ಲಕ್ಷ ಕೋಟಿ ರೂ.ಯಷ್ಟು ಏರಿಕೆಯಾಗಿದೆ. ಏರಿಕೆಯ ಪ್ರಮಾಣ ಶೇ 94ರಷ್ಟಕ್ಕಿಂತ ಅಧಿಕವಾಗಿದೆ.
2014-15ರಲ್ಲಿ ಕೇಂದ್ರವು ಪೆಟ್ರೋಲಿಯಂ ವಲಯದಿಂದ 1.72 ಲಕ್ಷ ಕೋಟಿ ರೂ., ಆದಾಯವಾಗಿ 1.26 ಲಕ್ಷ ಕೋಟಿ ರೂ. ಮತ್ತು ತೈಲ ಕಂಪನಿಗಳಿಂದ 46,000 ಕೋಟಿ ರೂ.ಗಳನ್ನು ಲಾಭಾಂಶ, ಕಾರ್ಪೊರೇಟ್ ತೆರಿಗೆ ಮತ್ತು ತೈಲ ಮತ್ತು ಅನಿಲ ಪರಿಶೋಧನೆಯಿಂದ ಇತರ ಲಾಭಗಳನ್ನು ಸಂಗ್ರಹಿಸಿದೆ.
2014-15 ಮತ್ತು 2019-20ರ ಅವಧಿಯಲ್ಲಿ ತೈಲ ಕಂಪನಿಗಳಿಂದ ಲಾಭಾಂಶ, ಕಾರ್ಪೊರೇಟ್ ತೆರಿಗೆ ಮತ್ತು ತೈಲ ಅನಿಲದ ಅನ್ವೇಷಣೆಯ ಗಳಿಗೆಯಿಂದ ಕೇಂದ್ರದ ಸ್ವೀಕೃತಿಯು ಸಮವಾಗಿತ್ತು. ಆದರೆ, ಇದು ಈ ಹಿಂದಿನ ಮೂರು ವರ್ಷಗಳಲ್ಲಿ ತೀವ್ರ ಏರಿಕೆ ಕಂಡಿದೆ.
ಪೆಟ್ರೋಲಿಯಂ ವಲಯದಿಂದ ಕೇಂದ್ರದ ತೆರಿಗೆ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ 1.26 ಲಕ್ಷ ಕೋಟಿ ರೂ.ಗಳಿಂದ 2.88 ಲಕ್ಷ ಕೋಟಿ ರೂ.ಗೆ ಏರಿದ್ದು, ಶೇ 129ರಷ್ಟು ಬೆಳವಣಿಗೆ ಕಂಡಿದೆ. ತೈಲ ಕಂಪನಿಗಳಿಂದ ಲಾಭಾಂಶ ಮತ್ತು ಕಾರ್ಪೊರೇಟ್ ತೆರಿಗೆ ಸಂಗ್ರಹವು 2014-15 ( 46,040 ಕೋಟಿ ರೂ.) ಮತ್ತು 2019-20 (46,775 ಕೋಟಿ ರೂ.) ವರ್ಷಗಳಲ್ಲಿ ಮಾತ್ರ ಬಹುತೇಕ ಸಮತಟ್ಟಾಗಿತ್ತು.
ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಸಂಗ್ರಹಿಸಿದ ತೆರಿಗೆಯು ರಾಜ್ಯಗಳಿಗೂ ದೊಡ್ಡ ಮಟ್ಟದ ಆದಾಯದ ಮೂಲವಾಗಿದೆ. 2014-15ರಲ್ಲಿ ರಾಜ್ಯಗಳು ಪೆಟ್ರೋಲಿಯಂ ವಲಯದಿಂದ ವ್ಯಾಟ್ ಮತ್ತು ಕಚ್ಚಾ ಹಾಗೂ ನೈಸರ್ಗಿಕ ಅನಿಲದ ಮೇಲಿನ ರಾಯಲ್ಟಿ ಮೂಲಕ 1.6 ಲಕ್ಷ ಕೋಟಿ ರೂ. ಸಂಗ್ರಹಿಸಿವೆ. ಈ ಮೊತ್ತವು 2019-20ರಲ್ಲಿ (ತಾತ್ಕಾಲಿಕ) 2.21 ಲಕ್ಷ ಕೋಟಿ ರೂ.ಗೆ ಬಂದು ತಲುಪಿದೆ.
2019-20ನೇ ಹಣಕಾಸು ವರ್ಷದಲ್ಲಿ ಮಾರಾಟ ತೆರಿಗೆ / ವ್ಯಾಟ್ 2.02 ಲಕ್ಷ ಕೋಟಿ ರೂ.ಗಳಷ್ಟಿದ್ದರೇ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಮೇಲಿನ ರಾಯಲ್ಟಿ 11,882 ಕೋಟಿ ರೂ. ಮತ್ತು ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) 7,345 ಕೋಟಿ ರೂ. ಯಷ್ಟಿದೆ.
-ಕೃಷ್ಣಾನಂದ್ ತ್ರಿಪಾಠಿ