ETV Bharat / business

ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ 11,901 ರೂ. ಕುಸಿತ! - ಇಂದಿನ ಚಿನ್ನದ ದರ

ಚಿನಿವಾರ ಪೇಟೆಯಲ್ಲಿ ಚಿನ್ನದ ಫ್ಯೂಚರ್ ಟ್ರೇಡಿಂಗ್​ ನಡೆಯುತ್ತದೆ. ಅದನ್ನು ಕಮೋಡಿಟಿ ಎಕ್ಸ್​ಚೇಂಜ್​ ಮಾರುಕಟ್ಟೆ ಅಥವಾ ಎಂಸಿಎಕ್ಸ್ ಎಂದು ಕರೆಯಲಾಗುತ್ತದೆ. ಈ ಮಾರುಕಟ್ಟೆಯಲ್ಲಿ ಏಪ್ರಿಲ್​ ತಿಂಗಳ ವಾಯ್ದೆಗೆ ಪ್ರತಿ 10 ಗ್ರಾಂ. ಚಿನ್ನದ ಬೆಲೆಯು ಮಂಗಳವಾರ ಶೇ 0.46ರಷ್ಟು ಅಥವಾ 208 ರೂ.ಯಷ್ಟು ಇಳಿಕೆಯಾಗಿ, 45,100 ರೂ.ಯಲ್ಲಿ ಮಾರಾಟ ಆಗುತ್ತಿದೆ.

MCX Gold
MCX Gold
author img

By

Published : Mar 2, 2021, 1:42 PM IST

ನವದೆಹಲಿ: ಉತ್ತೇಜಕ ಮತ್ತು ಲಸಿಕೆ-ಇಂಧನ ಆರ್ಥಿಕ ಚೇತರಿಕೆಯ ನಿರೀಕ್ಷೆಗಳ ಮೇಲಿನ ಅಪಾಯದ ಮನೋಭಾವನೆಯು ಹೂಡಿಕೆದಾರರ ಸುರಕ್ಷಿತ ಧಾಮದ ಸ್ವತ್ತುಗಳ ಮೇಲಿನ ನಂಬಿಕೆ ಮೃದುವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದು, ಭಾರತದಲ್ಲಿ ಚಿನ್ನದ ಬೆಲೆಗಳು ಮಂಗಳವಾರದ ಸೆಷನ್​ನಲ್ಲಿ ಕಡಿಮೆಯಾಗಿದೆ.

ಚಿನಿವಾರ ಪೇಟೆಯಲ್ಲಿ ಚಿನ್ನದ ಫ್ಯೂಚರ್ ಟ್ರೇಡಿಂಗ್​ ನಡೆಯುತ್ತದೆ. ಅದನ್ನು ಕಮೋಡಿಟಿ ಎಕ್ಸ್​ಚೇಂಜ್​ ಮಾರುಕಟ್ಟೆ ಅಥವಾ ಎಂಸಿಎಕ್ಸ್ ಎಂದು ಕರೆಯಲಾಗುತ್ತದೆ. ಈ ಮಾರುಕಟ್ಟೆಯಲ್ಲಿ ಏಪ್ರಿಲ್​ ತಿಂಗಳ ವಾಯ್ದೆಗೆ ಪ್ರತಿ 10 ಗ್ರಾಂ. ಚಿನ್ನದ ಬೆಲೆಯು ಮಂಗಳವಾರ ಶೇ 0.46ರಷ್ಟು ಅಥವಾ 208 ರೂ.ಯಷ್ಟು ಇಳಿಕೆಯಾಗಿ, 45,100 ರೂ.ಯಲ್ಲಿ ಮಾರಾಟ ಆಗುತ್ತಿದೆ.

ಇದನ್ನೂ ಓದಿ: ವಿಶ್ವದಾಖಲೆ ಬರೆದ 'ರಾಮಾಯಣ' ಸೀರಿಯಲ್​; 999 ಶತಕೋಟಿಗೇರಿದ ವೀಕ್ಷಣಾ ನಿಮಿಷ!

ಬೆಳ್ಳಿ ಮೇ ತಿಂಗಳ ವಾಯ್ದೆಯು ಪ್ರತಿ ಕೆ.ಜಿ. ಮೇಲೆ 67,903 ರೂ.ಯಂತೆ ವಹಿವಾಟು ನಡೆಸುತ್ತಿದ್ದು 897 ರೂ. ಅಥವಾ ಶೇ 1.03ರಷ್ಟು ಇಳಿಕೆಯಾಗಿದೆ. ಎಂಸಿಎಕ್ಸ್​ನಲ್ಲಿ ಚಿನ್ನವು 2020ರ ಆಗಸ್ಟ್​ನಲ್ಲಿ 10 ಗ್ರಾಂ.ಗೆ 56,191 ರೂ.ಗೆ ತಲುಪಿತ್ತು. ಇದು ಈಗ 11,901 ರೂ. ಅಥವಾ ಶೇ 20ರಷ್ಟು ಕುಸಿದು 46,000 ರೂ.ಗಿಂತ ಕಡಿಮೆ ದರದಲ್ಲಿ ವಹಿವಾಟು ನಡೆಸುತ್ತಿದೆ.

ಅಮೆರಿಕ ಬಾಂಡ್ ಯೆಲ್ಡ್​ ಮತ್ತು ಸಕಾರಾತ್ಮಕ ಆರ್ಥಿಕ ಮಾಹಿತಿಯ ಹೆಚ್ಚಳದಿಂದಾಗಿ ಚಿನ್ನದ ಬೆಲೆಗಳು ಆರ್ಥಿಕ ಬೆಳವಣಿಗೆಯ ಆಶಾವಾದದ ಮೇಲೆ ಕಡಿಮೆ ವಹಿವಾಟು ನಡೆಸುತ್ತಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.